Wednesday, January 22, 2025

ನಟ ವಿಕ್ರಮ್​ಗೆ ಹೃದಯಾಘಾತ ;ಆತಂಕದಲ್ಲಿ ಅಭಿಮಾನಿ ಬಳಗ

ತಮಿಳಿನ ಖ್ಯಾತ ನಟ, ಸೂಪರ್​ ಸ್ಟಾರ್​ ವಿಕ್ರಮ್​ಗೆ ಲಘು ಹೃದಯಾಘಾತವಾಗಿದೆ. ಕೋಟ್ಯಂತರ ಅಭಿಮಾನಿಗಳ ನೆಚ್ಚಿನ ನಟ ವಿಕ್ರಮ್​​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸುದ್ದಿ ಕೇಳಿದ ತಕ್ಷಣ ಅವ್ರ ಅಪಾರ ಅಭಿಮಾನಿ ಬಳಗ ಆತಂಕಗೊಂಡಿದೆ. ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ವಿಕ್ರಂಗೆ ಏನಾಗಿದೆ ಅಂತೀರಾ..?

ವಿಕ್ರಮ್​ಗೆ ಹೃದಯಾಘಾತ.. ಆತಂಕದಲ್ಲಿ ಅಭಿಮಾನಿ ಬಳಗ

ICUನಲ್ಲಿ ಚಿಕಿತ್ಸೆ.. ಚಿಕ್ಕ ಸರ್ಜರಿ.. ನಾಳೆಯೇ ಡಿಸ್ಚಾರ್ಜ್​​ ಸಾಧ್ಯತೆ

ಹೃದಯಾಘಾತದಿಂದ ನಮ್ಮನ್ನೆಲ್ಲಾ ಅಗಲಿದ ಅಪ್ಪುವಿನ ಆ ಕರಾಳ ದಿನವನ್ನು ಇಂದಿಗೂ ಮರೆಯೋಕೆ ಆಗ್ತಿಲ್ಲ. ಹಾರ್ಟ್​ ಅಟ್ಯಾಕ್​ ಅನ್ನೋ ಪದ ಕೇಳ್ತಿದ್ದ ಹಾಗೆ ಒಂದು ಕ್ಷಣ ಮೈಜುಮ್​​ ಅನ್ನುತ್ತೆ. ವಯಸ್ಸಲ್ಲದ ವಯಸ್ಸಲ್ಲಿ ನಮ್ಮನ್ನೆಲ್ಲಾ ಬಿಟ್ಟು ಹೊರಟು ಹೋದ ಯುವರತ್ನ ಸಖತ್​ ಫಿಟ್​ ಅಂಡ್ ಫೈನ್ ಆಗೇ ಇದ್ದವ್ರು. ಅದೇ ರೀತಿ  ತಮಿಳಿನ ಸೂಪರ್​ ಸ್ಟಾರ್​ ಚಿಯಾನ್ ವಿಕ್ರಮ್​ಗೆ​​ ಲಘು ಹೃದಯಾಘಾತದ ಸುದ್ದಿ ಕೇಳಿ ಇಡೀ ಭಾರತೀಯ ಚಿತ್ರರಂಗ ಬೆಚ್ಚಿ ಬಿದ್ದಿತ್ತು. ಮತ್ತೆ ಅರೆ ಕ್ಷಣ ಶಾಕ್​​ಗೆ ಒಳಗಾಗಿತ್ತು.

ಎದೆ ನೋವು ಕಾಣಿಸಿಕೊಂಡಿದ್ರಿಂದ ನಿನ್ನೆಯೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಕ್ರಮ್,​​ ಸದ್ಯ ಆರೋಗ್ಯವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇಂದಿನ ತರುಣರೂ ಕೂಡ ನಾಚುವ ರೀತಿಯಲ್ಲಿ ಫಿಟ್​ ಆಗಿರೋ ವಿಕ್ರಮ್​​​ ಆಸ್ಪತ್ರೆಗೆ ದಾಖಲಾಗಿರೋ ಸುದ್ದಿ ಕೇಳಿ ಅಭಿಮಾನಿಗಳು ಕೂಡ ಆತಂಕಗೊಂಡಿದ್ರು. 56ರ ಹರೆಯದಲ್ಲೂ ಸಖತ್ ಫಿಟ್​ ಆಗಿರೋ ವಿಕ್ರಮ್​ಗೆ ದಿಢೀರ್ ಅರೋಗ್ಯ ಏರುಪೇರಾದ ಬಗ್ಗೆ ಎಲ್ಲರನ್ನ ಚಿಂತೆಗೀಡುಮಾಡಿದೆ.

ಸದ್ಯ ನಟ ವಿಕ್ರಮ್​ಗೆ ಆಂಜಿಯೋಪ್ಲಾಸ್ಟಿ​​ ಮಾಡಲಾಗಿದ್ದು, ಐಸಿಯುನಲ್ಲಿರಿಸಲಾಗಿದೆ. ಸ್ಟಂಟ್​ ಅಳವಡಿಕೆ ನಂತ್ರ ವಿಶ್ರಾಂತಿ ಪಡೆಯುತ್ತಿರೋ ವಿಕ್ರಮ್,​​ ಇಂದು ತಡರಾತ್ರಿ ಅಥ್ವಾ ನಾಳೆ ಡಿಸ್ಚಾರ್ಜ್​ ಆಗೋ ಸಂಭವವಿದೆ. ಈ ಸುದ್ದಿ ಕೇಳಿ ನಿರಾಳಗೊಂಡಿರೋ ಕೋಟ್ಯಂತರ ಅಭಿಮಾನಿಗಳು ಹಾಗೂ ಚಿತ್ರರಂಗದ ಕಲಾವಿದರು, ಪ್ರಾರ್ಥನೆ ಫಲಿಸಿತು ಅಂತ ನಿಟ್ಟುಸಿರು ಬಿಟ್ಟಿದ್ದಾರೆ.

ಮಣಿರತ್ನಂ ನಿರ್ದೇಶನದ 500 ಕೋಟಿ ಭಾರೀ ಬಜೆಟ್ ಚಿತ್ರ ಪೊನ್ನಿಯನ್​​ ಸೆಲ್ವನ್-1ರಲ್ಲಿ​​ ವಿಕ್ರಮ್ ನಟಿಸಿದ್ದು, ಟೀಸರ್ ಕೂಡ ಲಾಂಚ್ ಆಗಿದೆ. ಇವೆಂಟ್​ನಲ್ಲಿ ಭಾಗಿಯಾಗಬೇಕಿದ್ದ ವಿಕ್ರಮ್, ಆಸ್ಪತ್ರೆಯಲ್ಲಿ ರೆಸ್ಟ್ ಮಾಡುವಂತಾಗಿದೆ. ಇನ್ನು ನಮ್ಮ ಕೆಜಿಎಫ್ ಪೋರಿ ಶ್ರೀನಿಧಿ ಶೆಟ್ಟಿ ಜೊತೆಯಲ್ಲಿ ಕೋಬ್ರಾ ಸಿನಿಮಾ ತಯಾರಾಗಿದ್ದು, ರಿಲೀಸ್​ಗೆ ರೆಡಿಯಾಗಿದೆ.

ಪಾತ್ರಗಳಿಗಾಗಿ ಪದೇ ಪದೆ ತೂಕ ಇಳಿಸಿಕೊಳ್ಳುವ ಹಾಗೂ ಏರಿಸಿಕೊಳ್ಳೋ ವಿಕ್ರಮ್, ಸಿಕ್ಕಾಪಟ್ಟೆ ಡಯೆಟ್ ಮಾಡ್ತಾರೆ. ಬಹುಶಃ ಅದರ ಎಫೆಕ್ಟ್ ಹೀಗಾಗಿರಬಹುದು ಅನ್ನೋದು ಹಲವರ ಅಭಿಪ್ರಾಯ. ಮಗ ಕೂಡ ಹೀರೋ ಆಗಿ ಲಾಂಚ್ ಆಗಿದ್ದು, ಅಕ್ಷರಶಃ ಆತಂಕ ಮೂಡಿತ್ತು. ಆದ್ರೀಗ ಆ ಆತಂಕ ದೂರಾಗಿದ್ದು, ಚೇತರಿಸಿಕೊಳ್ತಿದ್ದಾರೆ ವಿಕ್ರಮ್.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES