Monday, December 23, 2024

ಈ ವಯಸ್ಸಿನಲ್ಲಿ ರಾಜಕೀಯ ಬೇಡ: ಡಾ.ವೀರೇಂದ್ರ ಹೆಗ್ಗಡೆ

ಕನಕಪುರ: ಈ ವಯಸ್ಸಿನಲ್ಲಿ ನನಗೆ ರಾಜಕೀಯ ಬೇಡ ಎಂದು ಕನಕಪುರದಲ್ಲಿ ಧರ್ಮಾಧಿಕಾರಿ ಡಾ ವಿರೇಂದ್ರ ಹೆಗ್ಗಡೆ ಅವರು ಹೇಳಿದ್ದಾರೆ.

ರಾಜ್ಯ ಸಭೆ ಸದಸ್ಯತ್ವ ನಾಮ ನಿರ್ದೇಶನ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ನಮ್ಮ ಕ್ಷೇತ್ರದ ವತಿಯಿಂದ ರಾಜ್ಯದಲ್ಲಿ ಮಾಡಿರುವ ಕಾರ್ಯಕ್ರಮಗಳನ್ನು ಇನ್ಮುಂದೆ ದೇಶದಾದ್ಯಂತ ವಿಸ್ತರಿಸಲಾಗುವುದು ಎಂದರು.

ಇನ್ನು ಸ್ವತಃ ಪ್ರಧಾನಿ ಮೋದಿಯವರರು ಟ್ವೀಟ್ ಮಾಡುವ ಮೂಲಕ ನಮಗೆ ಮಾಹಿತಿ ನೀಡಿದ್ದಾರೆ.ಕೆಲಸದ ನಡುವಿನಲ್ಲಿ ಈ ಮೋದಿಯವರಿಗೆ ಇಷ್ಟು ನೆನಪು ಇಷ್ಟು ಸೂಕ್ಷ್ಮವಾಗಿ ಗಮನಿಸುವ ಶಕ್ತಿ ಇದೆಯಲ್ಲಾ ಅದನ್ನು ಯೋಚನೆ ಮಾಡ್ತಾ ಇದ್ದೇನೆ. ಯಾರು ಕೂಡ ಇನ್ಮುಂದೆ ವ್ಯಸ್ತತೆ ಇಂದ ಕೆಲಸ ಮಾಡೋಕೆ ಅಗಿಲ್ಲ. ಬಿಸಿಯೆಸ್ಟ್ ಮ್ಯಾನ್ ಆಸ್ ಎವ್ರಿ ಎಕ್ಷ್ಟ್ರಾ ಟೈಮ್ ಎನ್ನೋ ಮಾತಿದೆ. ನಾವು ಹೆಚ್ಚು ಒತ್ತಡ ಆದಾಗ ಹೆಚ್ಚಿನ ಕಾರ್ಯ ಮಾಡಬಹುದಾಗಿದೆ ಎಂದು ತಿಳಿಸಿದರು.

ಅಷ್ಟೆಅಲ್ಲದೇ ಇದರಲ್ಲಿ ಖಂಡಿತ ರಾಜಕೀಯ ಇಲ್ಲ, ಮುಂದೆ ಕೂಡ ರಾಜಕೀಯ ಮಾಡೊಲ್ಲ, ಈ ವಯಸ್ಸಿನಲ್ಲಿ ನನಗೆ ರಾಜಕೀಯ ಬೇಡ. ಇದು ಕೇವಲ ಹಿರಿಯ ಸದಸ್ಯರ ಕೂಟ ಎಂದು ಸೇರಿಕೊಂಡಿದ್ದೇನೆ. ಇಲ್ಲಿ ಚಿಂತನ ಚಾವಡಿ ಎಂಬಂತೆ ನಮ್ಮ ಅನುಭವವನ್ನು ದೇಶದಾದ್ಯಂತ ಹಂಚುವ ಕೆಲಸ ಮಾಡ್ತೇನೆ ಎಂದು ಪ್ರತಿಕ್ರಿಯಿಸಿದರು.

ರಾಜ್ಯಸಭಾ ಏನಿದೆ ಅದು ಚಿಂತನಾ ಚಾವಡಿ. ನನ್ನನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡ್ತಾರೆ ಅನ್ನೋ ಕಲ್ಪನೆ ನನಗೂ ಕೂಡ ಇರಲಿಲ್ಲ. ನಿನ್ನೆ ರಾತ್ರಿಯೇ ನನಗೂ ಕೂಡ ಮಾಹಿತಿ ಬಂದಿದೆ ಎಂದು ಕನಕಪುರದಲ್ಲಿ ಧರ್ಮಾಧಿಕಾರಿ ಡಾ ವಿರೇಂದ್ರ ಹೆಗ್ಗಡೆ ಅವರು ಹೇಳಿದರು.

RELATED ARTICLES

Related Articles

TRENDING ARTICLES