Site icon PowerTV

ಗೃಹ ಬಳಕೆ LPG ಸಿಲಿಂಡರ್‌ ಬೆಲೆ ಮತ್ತೆ ಏರಿಕೆ

ನವದೆಹಲಿ: ಹಣದುಬ್ಬರದಿಂದ ಕಂಗಾಲಾಗಿರುವ ಶ್ರೀಸಾಮಾನ್ಯರು ಮತ್ತೆ ಬೆಲೆ ಏರಿಕೆಯ ಶಾಕ್‌ಗೆ ಒಳಗಾಗಿದ್ದಾರೆ. ಗೃಹ ಬಳಕೆಯ 14.2 ಕೆ.ಜಿ LPG ಸಿಲಿಂಡರ್‌ ಬೆಲೆ 50 ರೂಪಾಯಿ ಏರಿಕೆಯಾಗಿದೆ. ಈ ದರವು ಇಂದಿನಿಂದಲೇ ದೇಶಾದ್ಯಂತ ಜಾರಿಗೆ ಬಂದಿದೆ.

ಈ ಹಿಂದೆ ಮೇ 19 ರಂದು ಗೃಹ, ವಾಣಿಜ್ಯ ಬಳಕೆಯ LPG ಸಿಲಿಂಡರ್‌​ ದರವನ್ನು ಪ್ರತಿ ಸಿಲಿಂಡರ್‌ಗೆ 3.5 ರೂಪಾಯಿಯಷ್ಟು ಹೆಚ್ಚಿಸಲಾಗಿತ್ತು. ದೆಹಲಿಯಲ್ಲಿ ಸದ್ಯಕ್ಕೆ ಗೃಹ ಬಳಕೆಯ ಪ್ರತಿ ಸಿಲಿಂಡರ್‌ ದರ 1,053 ರೂ. ಆಗಿದೆ.

ಇದೇ ವೇಳೆ 5ಕೆಜಿ ಗೃಹ ಬಳಕೆ ಸಿಲಿಂಡರ್ ಬೆಲೆ ಕೂಡಾ ಪರಿಷ್ಕರಿಸಲಾಗಿದ್ದು, 18 ರು. ಏರಿಕೆ ಕಂಡಿದೆ. 19 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್ ದರ 8.5 ರು ಪ್ರತಿ ಸಿಲಿಂಡರ್ ನಂತೆ ಇಳಿಕೆಯಾಗಿದೆ.

Exit mobile version