Thursday, May 9, 2024

450 ಸೆಂಟರ್ ಗಳಲ್ಲಿ ‘777 ಚಾರ್ಲಿ’ 25 ಡೇಸ್ ಮೀಟರ್

777 ಚಾರ್ಲಿ.. ಇದು ಬರೀ ಸಿನಿಮಾ ಅಲ್ಲ, ಒಂದು ಅಭೂತಪೂರ್ವ ಅನುಭವ. ನೋಡುಗರನ್ನ ಭಾವನಾತ್ಮಕ ಲೋಕಕ್ಕೆ ಕರೆದೊಯ್ಯುವ ವಿಶೇಷದಲ್ಲಿ ವಿಶೇಷ ಸಿನಿಮಾ. ಇದೀಗ ಇದು 25 ದಿನ ಪೂರೈಸಿದ್ದು, ಚಿತ್ರತಂಡದ ಖುಷಿಯನ್ನ ದ್ವಿಗುಣಗೊಳಿಸಿದೆ.

ಯೆಸ್.. ಚಾರ್ಲಿ ಚಮತ್ಕಾರಕ್ಕೆ ಬರೀ ಕನ್ನಡ ಚಿತ್ರರಂಗ ಅಷ್ಟೇ ಅಲ್ಲ, ಪರಭಾಷಿಗರೂ ಫಿದಾ ಆಗಿದ್ದಾರೆ. ಇಂದಿಗೂ ದೇಶಾದ್ಯಂತ ಸುಮಾರು 450ಕ್ಕೂ ಅಧಿಕ ಸೆಂಟರ್ ಗಳಲ್ಲಿ ಚಾರ್ಲಿ ಹೌಸ್’ಫುಲ್ ಪ್ರದರ್ಶನ ಕಾಣ್ತಿದೆ. ಬಾಕ್ಸ್ ಆಫೀಸ್ ನಲ್ಲಿ 150 ಕೋಟಿ ಪೈಸಾ ವಸೂಲ್ ಮಾಡಿದೆ. ಅದ್ರಲ್ಲಿ ನಿರ್ಮಾಪಕರ ಜೇಬಿಗೇನೇ 80 ರಿಂದ 90 ಕೋಟಿ ಬಂದಿದೆ. ಇದನ್ನ ನಾವು ಹೇಳ್ತಿಲ್ಲ, ಖುದ್ದು ರಕ್ಷಿತ್ ಶೆಟ್ಟಿ ಅವ್ರೇ ಹೇಳಿದ್ರು.

ಹೌದು.. ಸಿಎಂ ಬಸವರಾಜ ಬೊಮ್ಮಾಯಿ, ಸಾಯಿ ಪಲ್ಲವಿ, ಸೂಪರ್ ಸ್ಟಾರ್ ರಜಿನೀಕಾಂತ್, ಗಾಲಿ ಜನಾರ್ದನ ರೆಡ್ಡಿ ಹೀಗೆ ಸಾಕಷ್ಟು ಮಂದಿ ಸ್ಟಾರ್ಸ್ ಚಾರ್ಲಿ ನೋಡಿ ವ್ಹಾವ್ ಅಂದಿದ್ರು. ಇದೀಗ ಚಿತ್ರತಂಡ 25 ಡೇಸ್ ಸೆಲೆಬ್ರೇಷನ್ ನಲ್ಲಿ ಭಾಗಿಯಾಗೋ ಮೂಲಕ ಖಾಸಗಿ ಹೋಟೆಲ್ ನಲ್ಲಿ ಚಾರ್ಲಿ ಸಮೇತ ಕೇಕ್ ಕತ್ತರಿಸಿ ಸಂಭ್ರಮಿಸಿದ್ದು ಹೀಗೆ. ಬಾಲನಟಿ ಶಾರ್ವರಿ, ನಿರ್ದೇಶಕ ಕಿರಣ್ ರಾಜ್, ಕೆಆರ್ ಜಿಯ ಕಾರ್ತಿಕ್ ಗೌಡ, ಚಾರ್ಲಿ ಟ್ರೈನರ್ ಪ್ರಮೋದ್, ನಾಯಕಿ ಸಂಗೀತಾ ಶೃಂಗೇರಿ ಸೇರಿದಂತೆ ಇಡೀ ಟೀಂ ರಕ್ಷಿತ್ ಶೆಟ್ಟಿ ಜೊತೆ ಮಾಧ್ಯಮಗಳ ಮುಂದೆ ಪ್ರತ್ಯಕ್ಷವಾಗಿದ್ರು.

ಚಾರ್ಲಿ ಸಿನಿಮಾ ನೋಡಿ ಲ್ಯಾಬ್ರಡಾರ್ ತಳಿಯ ನಾಯಿಯನ್ನ ಕೊಂಡುಕೊಳ್ಳೋರ ಸಂಖ್ಯೆ ಹೆಚ್ಚಾಗ್ತಿದೆಯಂತೆ. ಅದಕ್ಕೆ ನಿರ್ದೇಶಕ ಕಿರಣ್ ರಾಜ್ ಮಾತನಾಡುತ್ತಾ, ಲ್ಯಾಬ್ರಡಾರ್ ನ ಕೊಂಡುಕೊಳ್ಳೋ ಬದಲಿಗೆ ಯಾವುದಾದರೊಂದು ನಾಯಿಯನ್ನ ದತ್ತು ಪಡೆದು ಸಾಕಿ ಎಂದರು. ಇಲ್ಲಿ ಬ್ರೀಡ್ ಮುಖ್ಯವಲ್ಲ ಎಂದರು.
ಇನ್ನು ಚಾರ್ಲಿ ಸಿನಿಮಾ ಕನ್ನಡದ ಜೊತೆ ನಾಲ್ಕು ಭಾಷೆಗಳಿಗೆ ವಾಯ್ಸ್ ಡಬ್ ಆಗಿ ರಿಲೀಸ್ ಆಗಿದ್ರೂ ಸಹ, ಎರಡು ಭಾಷೆಯಿಂದ ರಿಮೇಕ್ ಹಕ್ಕುಗಳಿಗೆ ಡಿಮ್ಯಾಂಡ್ ಸೃಷ್ಟಿಸಿಕೊಂಡಿದೆ. ಈ ಬಗ್ಗೆ ರಕ್ಷಿತ್ ಮಾತಾಡ್ತಾ, ಮಾಡಲಿ ನಮಗೇನಂತೆ ದುಡ್ಡು ಬರುತ್ತೆ. ಆದ್ರೆ ಇಂತಹ ಸಿನಿಮಾ ಮತ್ಯಾರೂ ಮಾಡಲಾರರು. ಮಾಡಿದ್ರೂ ಸಹ ಕಿರಣ್ ರಾಜ್ ಅವ್ರೇ ಡೈರೆಕ್ಟ್ ಮಾಡಬೇಕಾಗುತ್ತೆ ಅಂತ ಕರಾರುವಕ್ಕಾಗಿ ಹೇಳಿದ್ರು.

ಅದೇನೇ ಇರಲಿ, ಕನ್ನಡದ ಸಿನಿಮಾಗಳು ಹೀಗೆ ಭಾರತೀಯ ಚಿತ್ರರಂಗವನ್ನು ರೂಲ್ ಮಾಡ್ತಿರೋದು ನಿಜಕ್ಕೂ ವರ್ಣನಾತೀತ. ಈ ಪರ್ವ ಹೀಗೆ ಮುಂದುವರೆಯಲಿ ಅಂತ ರಕ್ಷಿತ್ ಅಂಡ್ ಟೀಂ ಗೆ ಶುಭ ಹಾರೈಸೋಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES