Wednesday, January 22, 2025

ಕಿಚ್ಚ ಮೆಚ್ಚಿದ ತೋತಾಪುರಿ ರಿಲೀಸ್ ಡೇಟ್ ಫಿಕ್ಸ್..!

ಈಗಾಗ್ಲೇ ಸಾಂಗ್ ಮತ್ತು ಟ್ರೈಲರ್​ನಿಂದ ಸಖತ್ ಟೇಸ್ಟ್ ಗುರು ಅಂತ ಎಲ್ರೂ ಬಾಯಿ ಚಪ್ಪರಿಸೋ ಹಾಗೆ ಮಾಡಿದೆ ತೋತಾಪುರಿ. ಆಲ್ ಇಂಡಿಯಾ ಕಟೌಟ್ ಕಿಚ್ಚ ಕೂಡ ಮೆಚ್ಚಿದ ಈ ಪ್ಯಾನ್ ಇಂಡಿಯಾ ಎಂಟರ್​ಟೈನರ್,​ ಥಿಯೇಟರ್ ಎಂಟ್ರಿಗೆ ಮುಹೂರ್ತ ಫಿಕ್ಸ್ ಆಗಿದೆ. ಇಷ್ಟಕ್ಕೂ ಆ ಶುಭ ಮುಹೂರ್ತ ಯಾವುದು..? ಏನು ಆ ಡೇಟ್​ನ ಸ್ಪೆಷಾಲಿಟಿ ಅನ್ನೋದನ್ನ ನೀವೇ ನೋಡ್ಕೊಂಡ್ ಬನ್ನಿ.

ಕಿಚ್ಚ ಮೆಚ್ಚಿದ ತೋತಾಪುರಿ ರಿಲೀಸ್ ಡೇಟ್ ಫಿಕ್ಸ್..!

ಇದು ಸರ್ವಧರ್ಮಗಳ ಸಾಮರಸ್ಯದ ರಸದೌತಣ

ಹಿಟ್ ಕಾಂಬೋಗಳ ಸಿನಿಮೋತ್ಸಾಹದ ಕೈಗನ್ನಡಿ

ಕೋಮು ಗಲಭೆ ನಿಲ್ಲಲು ಬರೆಯಲಿದೆ ಮುನ್ನುಡಿ

ಕೆಜಿಎಫ್ ನಂತ್ರ ಕನ್ನಡ ಚಿತ್ರರಂಗದಿಂದ ಎರಡೆರಡು ಭಾಗಗಳಲ್ಲಿ ತೆರೆಗಪ್ಪಳಿಸೋಕೆ ತಯಾರಾಗ್ತಿರೋ ಸಿನಿಮಾ ತೋತಾಪುರಿ. ಸಿನಿಮಾದ ಟೈಟಲ್ ಕೇಳ್ತಿದ್ದಂತೆ ಬಾಯಲ್ಲಿ ನೀರೂರುತ್ತೆ. ಆದ್ರೆ ಸಿನಿಮಾದ ಕಂಟೆಂಟ್ ಅದಕ್ಕಿಂತ ಕೊಂಚ ಜಾಸ್ತಿನೇ ಮಜಭೂತಾಗಿದೆ. ಯೆಸ್.. ಇದು ಸೂಪರ್ ಹಿಟ್​​ ಕಾಂಬೋಗಳ ಕೈಚಳಕ ಆಗಿರೋದ್ರಿಂದ ಅಫ್ ಕೋರ್ಸ್​ ಮಸ್ತ್ ಮನರಂಜನೆ ಕೊಡೋ ಪಕ್ಕಾ ಪೈಸಾ ವಸೂಲ್ ಎಂಟರ್​ಟೈನರ್ ಆಗಲಿದೆ.

ನೀರ್​ದೋಸೆ ಖ್ಯಾತಿಯ ಡೈರೆಕ್ಟರ್ ವಿಜಯ್ ಪ್ರಸಾದ್ ಹಾಗೂ ಜಗ್ಗೇಶ್ ಕಾಂಬಿನೇಷನ್ ಮತ್ತೆ ಮೋಡಿ ಮಾಡಲಿದೆ. ನವರಸ ನಾಯಕನ ಆ ಮನೋಜ್ಞ ಅಭಿನಯ, ವಿಭಿನ್ನ ಸ್ಟೈಲು, ಮ್ಯಾನರಿಸಂ ನೋಡುಗರಿಗೆ ಸಖತ್ ಕಿಕ್ ಕೊಡಲಿದೆ. ಶಿವಲಿಂಗ, ಶ್ರಾವಣಿ ಸುಬ್ರಮಣ್ಯದಂತಹ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನ ನೀಡಿದ ನಿರ್ಮಾಪಕ ಕೆಎ ಸುರೇಶ್ ಅವ್ರ ಸಿನಿಮಾ ಪ್ಯಾಷನ್ ಎಂಥದ್ದು ಅನ್ನೋದು ಚಿತ್ರದ ಸ್ಯಾಂಪಲ್ ತುಣುಕುಗಳಲ್ಲೇ ಅರ್ಥವಾಗ್ತಿದೆ.

ಬಹುತಾರಾಗಣದ ಈ ಸಿನಿಮಾದಲ್ಲಿ ಜಗ್ಗೇಶ್ ಜೊತೆ ಡಾಲಿ ಧನಂಜಯ, ಅದಿತಿ ಪ್ರಭುದೇವ, ಸುಮನ್ ರಂಗನಾಥ್, ದತ್ತಣ್ಣ, ವೀಣಾ ಸುಂದರ್, ಹೇಮಾ ದತ್ ಸೇರಿದಂತೆ ನುರಿತ ಕಲಾವಿದರ ದಂಡು ಇದೆ. ಕಿಚ್ಚ ಸುದೀಪ್ ಮೆಚ್ಚಿದ ಈ ಟ್ರೈಲರ್​​ನಲ್ಲಿ ಹಾಸ್ಯ ಎಷ್ಟು ಪ್ರಧಾನ ಪಾತ್ರ ವಹಿಸುತ್ತೋ, ಅದ್ರ ಹಿಂದಿರೋ ಸೂಕ್ಷ್ಮ ವಿಚಾರಗಳು ಕೂಡ ನೋಡುಗರ ಹೃದಯಕ್ಕೆ ಅಷ್ಟೇ ತೀಕ್ಷಣವಾಗಿ ನಾಟುತ್ತವೆ. ಕಾರಣ ಇದು ಸರ್ವಧರ್ಮಗಳ ಸಾಮರಸ್ಯದ ಚಿತ್ರ.

ವಿಜಯ್ ಪ್ರಸಾದ್ ಚಿತ್ರಗಳು ಹಾಸ್ಯಕ್ಕೆ ಕೇರ್ ಆಫ್ ಅಡ್ರೆಸ್ ಆದ್ರೂ ಸಹ, ಅಲ್ಲೊಂದು ಇಂಟೆನ್ಸ್ ಎಮೋಷನ್ ಇರಲಿದೆ. ಇಲ್ಲಿಯೂ ಸಹ ಪ್ರಸ್ತುತ ಸಮಾಜದ ಕೈಗನ್ನಡಿ ಆಗಿರೋ ಅಂತಹ ಸಾಕಷ್ಟು ವಿಚಾರಗಳಿವೆ. ಅದ್ರಲ್ಲೂ ಕೋಮು ಗಲಭೆಗಳು ನಡೆಯದಂತೆ ತಡೆಯೋಕೆ ಈ ಸಿನಿಮಾ ಹಂಡ್ರೆಡ್ ಪರ್ಸೆಂಟ್ ಮುನ್ನುಡಿ ಆಗಲಿದೆ. ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸೀಕ ಜೈನರುಧ್ಯಾನ ಅನ್ನೋ ನಾಡಗೀತೆಯ ಸಾಲನ್ನೇ ಆಧರಿಸಿ ಮಾಡಿದಂತಿದೆ ಈ ಚಿತ್ರ. ಇದೀಗ ಈ ಚಿತ್ರದ ರಿಲೀಸ್ ಡೇಟ್ ಲಾಕ್ ಮಾಡಿದ್ದಾರೆ ನಿರ್ಮಾಪಕರು.

ಜಂಬೂ ಸವಾರಿಯಲ್ಲಿ ಪ್ಯಾನ್ ಇಂಡಿಯಾ ತೋತಾಪುರಿ

ದಸರಾ ಲಕ್ಕಿ ಡೇಟ್ ಮೇಲೆ ಸಾಲು ಸಾಲು ಚಿತ್ರಗಳ ಕಣ್ಣು..!

ಮಾರ್ಟಿನ್, ಕಾಂತಾರ ಜೊತೆ ತೋತಾಪುರಿ ಮೆಗಾ ಕ್ಲ್ಯಾಶ್

ಕನ್ನಡದ ಜೊತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ತೆರೆಗೆ ಬರೋಕೆ ತಯಾರಿ ನಡೆಸ್ತಿರೋ ತೋತಾಪುರಿ ದಸರಾನ ಆಯ್ಕೆ ಮಾಡಿಕೊಂಡಿದೆ. ಇದರಿಂದ ನಾಡಹಬ್ಬ ದಸರಾದ ಸೊಬಗು, ಸೊಗಡನ್ನ ಹೆಚ್ಚಿಸೋ ಯೋಜನೆಯಲ್ಲಿದೆ ತೋತಾಪುರಿ. ಆದ್ರೆ ಇದೊಂದು ಲಕ್ಕಿ ಡೇಟ್ ಆಗಿದ್ದು, ಇದ್ರ ಮೇಲೆ ಈಗಾಗ್ಲೇ ಸಾಕಷ್ಟು ಚಿತ್ರಗಳು ಕಣ್ಣು ಹಾಕಿವೆ.

ಜಂಬೂ ಸವಾರಿ ವಿಶೇಷ ಸೆಪ್ಟೆಂಬರ್ 30ಕ್ಕೆ ಜಗ್ಗಣ್ಣ- ಡಾಲಿ ತೋತಾಪುರಿಯ ರಸದೌತಣ ಉಣಬಡಿಸೋಕೆ ಸಜ್ಜಾಗಿದ್ರೂ, ಅದೇ ಡೇಟ್​ಗೆ ಧ್ರುವ ಸರ್ಜಾರ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ ಮಾರ್ಟಿನ್ ಹಾಗೂ ಹೊಂಬಾಳೆ ಫಿಲಂಸ್​ನ ರಿಷಬ್ ಶೆಟ್ಟಿಯ ಕಾಂತಾರ ಕೂಡ ಕಿಚ್ಚು ಹಚ್ಚಲಿದೆ. ಅಲ್ಲಿಗೆ ಬಾಕ್ಸ್ ಆಫೀಸ್ ಕಾಳಗದಲ್ಲಿ ಮೂರು ನಿರೀಕ್ಷಿತ ಚಿತ್ರಗಳು ಮುಖಾಮುಖಿ ಆಗ್ತಿವೆ.

ಇದರಿಂದ ಬಾಕ್ಸ್ ಆಫೀಸ್ ಹೊಡೆತ ಅಷ್ಟೇ ಅಲ್ಲ, ಥಿಯೇಟರ್ ಕ್ಲ್ಯಾಶ್ ಕೂಡ ಆಗಲಿದೆ. ಎಲ್ಲರಿಗೂ ಒಳ್ಳೆಯ ಥಿಯೇಟರ್ ಸೆಟಪ್ ಸಿಗದೆ ಕಷ್ಟವಾಗಲಿದೆ. ಬಹುಶಃ ಈ ಮೂರೂ ಚಿತ್ರಗಳ ನಿರ್ಮಾಪಕರು ಒಟ್ಟುಗೂಡಿ ಸಮಸ್ಯೆ ಬಗೆಹರಿಸಿಕೊಂಡ್ರೆ ಮಾತ್ರ ಇಂಡಸ್ಟ್ರಿ ಹಾಗೂ ಈ ಚಿತ್ರಗಳಿಗೆ ಶುಭವಾಗಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES