Thursday, January 23, 2025

ನಟ ನರೇಶ್ ಜೊತೆಗಿನ ಸಂಬಂಧ ಒಪ್ಪಿಕೊಂಡ ಪವಿತ್ರಾ ಲೋಕೇಶ್​​

ನಟಿ ಪವಿತ್ರಾ ಲೋಕೇಶ್​ ಜೊತೆ ತೆಲುಗು ನಟ ನರೇಶ್ ಮದ್ವೆಯಾಗಿದ್ದಾರಾ..? ನಟ ನರೇಶ್ ಜೊತೆ 4ನೇ ವಿವಾಹದ ಸುದ್ದಿ ಕುರಿತು ತೆಲುಗು ನ್ಯೂಸ್ ಚಾನೆಲ್​​ಗಳಲ್ಲಿ ಸುದ್ದಿ ವೈರಲ್​ ಆಗುತ್ತಿದ್ದರು ನಟಿ ಪವಿತ್ರಾ ಮಾತ್ರ ಈ ಬಗ್ಗೆ ಎಲ್ಲೂ ನರೇಶ್ ಜೊತೆಗಿನ ಸಂಬಂಧದ ಕುರಿತು ತುಟಿಕ್​ ಪಿಟಿಕ್ ಎಂದಿರಲಿಲ್ಲ ಹಾಗೂ ಅವರ ರಿಲೇಶನ್​ಶಿಪ್​​ ಬಗ್ಗೆ ಯಾವುದೇ ಸ್ಪಷ್ಟನೆ ನೀಡಲಿಲ್ಲ.

ಈ ಹಿನ್ನೆಲೆಯಲ್ಲಿ ಸತ್ಯಾಸತ್ಯತೆ ಕಂಡುಹಿಡಿಯಲು ಮುಂದಾದ ಪವರ್ ಟಿವಿ ನರೇಶ್-ಪವಿತ್ರಾ ಲೋಕೇಶ್ ಸಂಬಂಧದ ಅಸಲಿಯತ್ತು ತಿಳಿಯುವ ಯತ್ನ ಹಾಗೂ ನ್ಯೂಸ್ ಚಾನೆಲ್​ಗಳ ವರದಿಗಳ ಸತ್ಯಾಂಶದ ಬಗ್ಗೆ ರಿಯಾಲಿಟಿ ಚೆಕ್ ಪಡೆಯಲು ಸ್ವತಃ ಅವರಿಂದಲೇ ಸತ್ಯ ತಿಳಿದುಕೊಳ್ಳಲು ಸ್ಟಿಂಗ್ ಆಪರೇಷನ್​​​​ ಮಾಡಲಾಯಿತು. ಆದರೆ, ಅಲ್ಲಿ ನಟಿ ಪವಿತ್ರಾ ಲೋಕೇಶ್ ಮಾಸ್ಟರ್ ಪ್ಲ್ಯಾನ್ ಬಯಲಾಯಿತು.

ನರೇಶ್ ಜೊತೆ ಮದುವೆ ಸುದ್ದಿ ಬಗ್ಗೆ ಪವಿತ್ರಾ ಲೋಕೇಶ್ ಬಿಚ್ಚಿಟ್ಟ ರಹಸ್ಯವೇನು..? :

ನನಗೆ ನನ್ನದೇ ಆದ ಲೈಫ್ ಇದೆ. ಆಕೆಗೆ ಆಕೆಯದ್ದೇ ಆದ ಲೈಫ್ ಇದೆ. ಅದು ವದಂತಿ ಅಂದ್ರೆ ವದಂತಿಯೇ. ಇದು ನನ್ನ ಪರ್ಸನಲ್ ಲೈಫ್. ಯಾರೂ ನನ್ನನ್ನ ಪ್ರಶ್ನಿಸಲಾಗಲ್ಲ, ಯಾರೂ ಪ್ರಶ್ನಿಸಲಾಗದು ಕೂಡ. ರಮ್ಯಾ ರಘುಪತಿ ಜೊತೆ ಡೈವೋರ್ಸ್ ಪಡೆಯದೆ ನಾನು ನರೇಶ್​​ ಈಗ ಲೀವ್ ಇನ್ ಟುಗೆದರ್ ಸಂಬಂಧದಲ್ಲಿದ್ದೇವೆಂದು ತೆಲುಗು ನಟ ನರೇಶ್ ಕುರಿತು ಪವಿತ್ರಾ ಜಾಣತನದ ಉತ್ತರ ನೀಡಿದರು.

ಇನ್ನು ಮೀಡಿಯಾ ನಮಗೆ ಯಾವ ರೀತಿಯೂ ಹೆಲ್ಪ್ ಮಾಡಲ್ಲ. ಹೀಗಾಗಿ ಕಾನೂನಿನ ಮೂಲಕ ಏನು ಮಾಡಬೇಕೋ ಅದನ್ನ ಮಾಡಬೇಕು, ಮಾಡ್ತೀನಿ. ಯಾರೂ ನಮ್ಮ ಪರ್ಸನಲ್ ಲೈಫ್ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ಅಲ್ಲದೇ ರಮ್ಯಾ-ನರೇಶ್ ಅವರ ಸಂಬಂಧ, ಗಲಾಟೆಯ ಬಗ್ಗೆ  ಪರಸ್ಪರ ಮಾತನಾಡಿ ಬಗೆಹರಿಸಿಕೊಳ್ಳಬೇಕು. ಆಕೆ ಸರಿ ಇದ್ದಿದ್ದರೆ ಕುಟುಂಬ ಉಳಿಯುತ್ತಿತ್ತು ಎಂದು ತಿಳಿಸಿದರು.

ಇದೇ ವೇಳೆ ನರೇಶ್ ತಾಯಿಯ ಡೈಮಂಡ್ ನೆಕ್ಲೇಸ್ ಬಗ್ಗೆಯೂ ಸ್ಪಷ್ಟನೆ ನೀಡಿದರು. ಹೌದು ನಾನು ಧರಿಸಿದ್ದೇ ಎಂದರು. ನನಗೆ ಗೊತ್ತಿರೋ ಹಾಗೇ ನರೇಶ್ ಇದನ್ನೆಲ್ಲ ನಿಭಾಯಿಸುತ್ತಾರೆ ಎಂದು ನಾಜೂಕಾಗಿ ಉತ್ತರಿಸಿದರು.

ಅಷ್ಟೇ ಅಲ್ಲದೇ ಈ ಮುಂಚೆ ಸುಚೇಂದ್ರ ಪ್ರಸಾದ್ ಜೊತೆಗೆ ಲಿವ್ ಇನ್ ಟುಗೆದರ್​ನಲ್ಲಿದ್ದೇ ಅಷ್ಟೇ, ನಾವು ಮದುವೆ ಆಗಿಲ್ಲ ಅದರ ಬಗ್ಗೆ ದಾಖಲಾತಿಯು ಇಲ್ಲ. ನನಗೆ ಯಾರೂ ಫ್ರೆಂಡ್ಸ್ ಇಲ್ಲ, ನಾನು ಹೊರಗೆ ಸುತ್ತಾಡಲ್ಲ. ನನ್ನ ಗಂಡನ ಜೊತೆ ವ್ಯತ್ಯಾಸ ಇರೋದ್ರಿಂದ ದೂರ ಇದ್ದೇವೆ. ನನ್ನ ಬಳಿ ದುಡ್ಡಿದೆ, ಆದರೆ ನಾನೇನೂ ಶ್ರೀಮಂತೆ ಅಲ್ಲ. ಅಲ್ಲದೇ ನಾನು ಸುಚೇಂದ್ರ ಪ್ರಸಾದ್​ಗೆ ಯಾವುದೇ ರೀತಿಯಲ್ಲೂ  ಅನ್ಯಾಯ ಮಾಡಿಲ್ಲ ಎಂದು ಪ್ರತಿಕ್ರಿಯಿಸಿದರು.

ಇನ್ನು ನನ್ನ ಅನಿಸಿಕೆ ಹಂಚಿಕೊಳ್ಳಲು, ಮಾತಾಡಲು ಒಬ್ಬ ವ್ಯಕ್ತಿ ಬೇಕು. ಆದ್ದರಿಂದ ನಾನು ಆತನೊಂದಿಗೆ ಆತ್ಮೀಯವಾಗಿರಬಹುದು. ಆತ ಮೋಸ ಮಾಡಿಲ್ಲ, ಸುಳ್ಳು ಹೇಳಿಲ್ಲ.ಅಂದಹಾಗೆ, ನರೇಶ್​​​ಗೆ ಇದರ ಬಗ್ಗೆ ಚಿಂತಿಸಲು ಟೈಮ್ ಇಲ್ಲ.  ಈಗಾಗಲೇ ನನ್ನ ನರೇಶ್​​ ಸಂಬಂಧದ ಬಗ್ಗೆ ಸೂಪರ್​​ ಸ್ಟಾರ್​​ ಕೃಷ್ಣ ಅವರಿಗೆ ಗೊತ್ತು ಅವರು ನನ್ನನ್ನು ಒಪ್ಪಿಕೊಂಡಿರುವಾಗ ಮತ್ತೇನಿದೆ? ಎಂದು ಪ್ರಶ್ನೆ ಮಾಡಿದರು.

ಕೊನೆಯಲ್ಲಿ ನನ್ನ ಗಂಡ ಬೇರೆಯವರ ಜತೆ ಮಲಗಿದ್ರೆ ಆತನ ಜೊತೆಗೆ ಇರಲ್ಲ ಎಂದು ರಮ್ಯಾ ರಘುಪತಿ ಕುರಿತು ಪವಿತ್ರಾ ಬೋಲ್ಡ್ ಆಗಿ ತಿರುಗೇಟು ನೀಡಿದರು.

RELATED ARTICLES

Related Articles

TRENDING ARTICLES