Sunday, September 8, 2024

ತುರ್ತು ಪರಿಸ್ಥಿತಿ ಇಂದಿರಾಗಾಂಧಿಯ ಸೊಕ್ಕಿನ ನಿರ್ಧಾರ: ಆರಗ ಜ್ಞಾನೇಂದ್ರ

ಮಂಗಳೂರು: ಇಂದಿರಾಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಈ ದೇಶದ ಮೇಲೆ ಹೇರಿದ್ದ ತುರ್ತು ಪರಿಸ್ಥಿತಿ ಸಂವಿಧಾನದ ಮೇಲೆ ನಡೆದ ಅತ್ಯಾಚಾರಕ್ಕೆ ಸಮನಾಗಿದ್ದು, ಈ ದೇಶದ ಸಂವಿಧಾನ, ಪ್ರಜಾಪ್ರಭುತ್ವ, ಕಾನೂನನ್ನು ಹತ್ತಿಕ್ಕುವ ಅವರ ನಿರ್ಧಾರ ಸೊಕ್ಕಿನ ತೀರ್ಮಾನವಾಗಿತ್ತು ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಮಂಗಳೂರು ದಕ್ಷಿಣ ಮಂಡಲ ಬಿಜೆಪಿ ವತಿಯಿಂದ ನಗರದ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಸೋಮವಾರ ನಡೆದ ತುರ್ತು ಪರಿಸ್ಥಿತಿಯ ಹೋರಾಟಗಾರರರಿಗೆ ಸನ್ಮಾನ ಹಾಗೂ ಪ್ರಧಾನಿ ನರೇಂದ್ರ ಮೋದಿ ಆಡಳಿತದ 8 ವರ್ಷಗಳ ಆಡಳಿತ ಹಿನ್ನೆಲೆಯಲ್ಲಿ ಸಾಧಕರ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ‘ಇಂದಿರಾಗಾಂಧಿ ಅವರು ಸಂವಿಧಾನಕ್ಕಿಂತ, ಪ್ರಜಾಪ್ರಭುತ್ವಕ್ಕಿಂತ ಅತೀತಳು ಎಂದು ಅಂದುಕೊಂಡು ತುರ್ತು ಪರಿಸ್ಥಿತಿ ಹೇರಿದ್ದು ಈ ದೇಶದ ಘೋರ ದುರಂತಗಳಲ್ಲಿ ಒಂದು.

ಅಲ್ಲದೇ ಅಂದು ದೇಶದ ಮೂಲೆ ಮೂಲೆಗಳಲ್ಲಿ ಲಕ್ಷಾಂತರ ಮಂದಿ ಜನಸಂಘ, ಸಂಘ ಪರಿವಾರದ ಕಾರ್ಯಕರ್ತರನ್ನು ಧಮನಿಸುವ ಕೆಲಸ ನಡೆಯಿತು. ಆದರೆ ಬಳಿಕ ನಡೆದ ಚುನಾವಣೆಯಲ್ಲಿ ಇಂದಿರಾ ಗಾಂಧಿ ಅವರು ಸೋಲನುಭವಿಸಿದ ಸುದ್ದಿ ಕೇಳಿದ್ದು ನನ್ನ ಜೀವಮಾನದ ಅತೀ ಸಂತೋಷದ ಕ್ಷಣವಾಗಿತ್ತು ಎಂದು ಹೇಳಿದರು.

RELATED ARTICLES

Related Articles

TRENDING ARTICLES