Friday, April 19, 2024

ಬೈಕ್​​ ಸೈಲೆನ್ಸರ್​​ಗಳ ಮೇಲೆ ಬುಲ್ಡೋಜರ್ ಪ್ರಯೋಗ

ಚಿಕ್ಕಮಗಳೂರು: ಶೋಕಿ ಸೈಲೆನ್ಸರ್ ಹಾಗೂ ಹಾಲ್ಫ್ ಹೆಲ್ಮೇಟ್​​ಗಳ ಮೇಲೆ ಪೊಲೀಸರು ಬುಲ್ಡೋಜರ್ ಹತ್ತಿಸಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.

ನಗರದಲ್ಲಿ ಹಲವು ಯುವಕರು ಬೈಕಿನ ಸೈಲೆನ್ಸರ್​​ಗಳನ್ನ ಮೋಡಿಫೈ ಮಾಡಿಸಿಕೊಂಡು ನಗರದಲ್ಲಿ ಕರ್ಕಶ ಶಬ್ಧದೊಂದಿಗೆ ಓಡಾಡುತ್ತಿದ್ದರು. ಇದರಿಂದ ಸ್ಥಳಿಯರಿಗೂ ಕೂಡ ತೊಂದರೆಯಾಗುತ್ತಿದ್ದು. ಜೊತೆಗೆ ಮತ್ತಲವು ಯುವಕರು ಬೈಕ್ ಗಳಲ್ಲಿ ನಗರದೊಳಗೆ ವೀಲ್ಹಿಂಗ್ ಮಾಡುತ್ತಿದ್ದರು.

ನಿನ್ನೆ ಕೂಡ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಮಧ್ಯೆಯೇ ಐದಾರು ಯುವಕರು ವೀಲ್ಹಿಂಗ್ ಮಾಡುತ್ತಿದ್ದರು. ನಡು ರಸ್ತೆ ರೇಸಿಗೆ ಬಿದ್ದ ಯುವಕರು ವೀಲ್ಹಿಂಗ್ ಮಾಡುಕೊಂಡು ಇತರ ಪ್ರಯಾಣಿಕರ ಮೈಮೇಲೆ ಹೋಗುತ್ತಿದ್ದರು. ಇದರಿಂದ ಸ್ಥಳಿಯರು ಹಾಗೂ ವಾಹನ ಸವಾರರು ಕೂಡ ಗಾಬರಿಯಾಗಿದ್ದರು. ಯುವಕರ ಈ ಹುಚ್ಚಾಟದ ವಿಡಿಯೋವನ್ನ ಸೆರೆ ಹಿಡಿದು ಪೊಲೀಸ್ ವರಿಷ್ಠಾಧಿಕಾರಿಗೆ ಕಳುಹಿಸಿದ್ದರು.

ಎಸ್ಪಿ ಸೂಚನೆ ಮೇರೆಗೆ ನಿನ್ನೆ ಐದು ಬೈಕ್​​ಗಳನ್ನ ಕಡೂರು ತಾಲೂಕಿನ ಸಕರಾಯಪಟ್ಟಣ ಸಮೀಪದ ಅಯ್ಯನಕೆರೆ ಬಳಿ 5 ಬೈಕ್​​ಗಳನ್ನು ವಶಕ್ಕೆ ಪಡೆದಿದ್ದರು. ಆ ಬೈಕ್​​ಗಳಿಗೆ ಇನ್ಸೂರೆನ್ಸ್ ಡಾಕ್ಯುಮೆಂಟ್ ಯಾವುದು ಇರಲಿಲ್ಲ. ಯುವಕರ ಬಳಿ ಡಿಎಲ್ ಕೂಡ ಇರಲಿಲ್ಲ. ಹಾಗಾಗಿ ಒಂದು ದಾಖಲೆಗಳಿಲ್ಲ, ಮತ್ತೊಂದು ಸೈಲೆನ್ಸರ್​​ಗಳನ್ನು ಮಾಡಿಫೈಡ್ ಮಾಡಿಕೊಂಡಿದ್ದ ಬೈಕ್​​ಗಳು ಹಾಗೂ ಹಾಲ್ಫ್ ಹೆಲ್ಮೇಟ್​​ಗಳ ಮೇಲೆ ಬುಲ್ಡೋಜರ್ ಹತ್ತಿಸಿ ಬೈಕ್ ಸವಾರರಿಗೆ ಎಚ್ವರಿಕೆ ನೀಡಿದ್ದಾರೆ.

ಸಚಿನ್ ಶೆಟ್ಟಿ ಪವರ್​​ ಟಿವಿ, ಚಿಕ್ಕಮಗಳೂರು

RELATED ARTICLES

Related Articles

TRENDING ARTICLES