ಬೆಂಗಳೂರು: ಎರಡನೇ ತರಗತಿಯ ಪಠ್ಯದಲ್ಲಿ ಇದ್ದ ಕುವೆಂಪು ಪಾಠವನ್ನ ತೆಗೆದಿದ್ದು ಸಿದ್ದರಾಮಯ್ಯ ಸರ್ಕಾರ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಮನ, ಬಹುಮಾನ, ಕಾಮನಬಿಲ್ಲು, ಭರತ ಭೂಮಿ ನನ್ನ ತಾಯಿ, ನಾನು ಕನ್ನಡದ ಕವಿಯಾದೆ ಸೇರಿದಂತೆ ಎಂಟು ಪಠ್ಯ ನಾವು ಸೇರಿಸಿದೆವು. ಹೊಸ ಪಠ್ಯವನ್ನ ಸೇರಿಸಿದ್ದು ನಾವು. ಅನೇಕರ ಪ್ರೋತ್ಸಾಹದಿಂದ ಕುವೆಂಪು ಅವರು ಉನ್ನತ ಸ್ಥಾನಕ್ಕೆ ಹೋದರು ಅನ್ನೋ ಆರೋಪ ಮಾಡಿದ್ರು. ಅಂದು ಪಠ್ಯ ಬಿಟ್ಟಾಗ ಈ ಸಾಹಿತಿಗಳು ಎಲ್ಲಿಹೋದ್ರು.? ಅದನ್ನ ಸರಿಪಡಿಸೋ ಕೆಲಸ ನಾವು ಮಾಡ್ತೀವಿ, ಮತ್ತೆ ಸೇರಿಸ್ತೇವೆ ಎಂದರು.
ಅದಲ್ಲದೇ, ನಾವು ಮಾಡಿದ ಪಠ್ಯದಲ್ಲಿ ಅನೇಕರ ಹೆಸರಿತ್ತು ಅದಮ್ಮ ತೆಗೆದಿದ್ದಾರೆ. ಅಲ್ಪಸಂಖ್ಯಾತರ ಓಲೈಕೆ ಮಾಡಲು ಹಿಂದೂಗಳ ಹೆಸರು ತೆಗೆದರು. ಹಿಂದೆ ವಿಶ್ವೇಶ್ವರ ಹೆಗಡೆ ಕಾಗೇರಿ ಇದ್ದಾಗ ಪಠ್ಯ ರಚನೆ ಮಾಡಲಾಗಿತ್ತು. ಅಂದು ಕುವೆಂಪು ಬಗ್ಗೆ ಎಂಟು ಪಠ್ಯಗಳಿತ್ತು. ಬಿಜೆಪಿ ಕಾಲದಲ್ಲಿ ಎಂಟು ಪಠ್ಯ ಸೇರಿಸಿದ್ದೆವು. ಅದರಲ್ಲಿ ಸಿದ್ದರಾಮಯ್ಯ ಸರ್ಕಾರ ಒಂದನ್ನ ತೆಗೆದರು. ಅನಗ ಅನ್ನೋ ಒಂದು ಪಠ್ಯ ತೆಗೆದರು. ರಾಮಾಯಣ ದರ್ಶನ ಅಂತ ಇದ್ದಿದ್ದಕ್ಕೆ ಸಿದ್ದರಾಮಯ್ಯ ಸರ್ಕಾರ ತೆಗೆದರು. ಎಂಟು ಇದ್ದ ಪದ್ಯ ಗದ್ಯವನ್ನ, ಏಳು ಮಾಡಿದ್ರು ಕುವೆಂಪು ಪಠ್ಯವನ್ನ ತೆಗೆದಿದ್ದು ಸಿದ್ದರಾಮಯ್ಯ ಎಂದು ಹೇಳಿದರು.
ಇನ್ನು, ಒಂದು ಪಠ್ಯ ತೆಗೆದು ಹಂಸಲೇಖ ಅವರ ಬಣ್ಣದ ಬುಗುರಿ ಸೇರಿಸಿದ್ರು. ಸಿದ್ದರಾಮಯ್ಯ ಕುವೆಂಪು ಬಗ್ಗೆ ಮಾತಾಡ್ತಿದ್ದಾರೆ. 8 ಇದ್ದದ್ದು 7 ಮಾಡಿದ್ರು, ಅನಲೆ ಬಗ್ಗೆ ತೆಗೆದಿದ್ದು ರಾಮಾಯಣ ದರ್ಶನಂ ಬಗ್ಗೆ ಇದ್ದದ್ದು ತೆಗೆದ್ರು. ಹಂಸಲೇಖರ ಬಣ್ಣದ ಬುಗುರಿ ಸೇರಿಸಿದ್ದು. ಯೋಗ, ಪರಂಪರೆ, ಸಂಸ್ಕುತಿ ಬಗ್ಗೆ ಇದದ್ದು ತೆಗೆದ್ರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬರಗೂರು ರಾಮಚಂದ್ರಪ್ಪ ನವರ ನೇತೃತ್ವದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಆಯಿತು. ಹಿಂದೂ ಪದ ಜೊತೆಗೆ ರಾಮ, ವಿಷ್ಣು, ಶಿವಾಜಿ, ರಜಪೂತ, ಹೆಸರು ಪಠ್ಯದಿಂದ ತೆಗೆಯಲಾಗಿದೆ. ಅಲ್ಪಸಂಖ್ಯಾತರ ಒಲೈಕೆಗಾಗಿ ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ್ದಾರೆ. ಕುವೆಂಪು ರಚಿಸಿದ ಗದ್ಯ ಪದ್ಯಗಳು 8 ಅಧ್ಯಾಯಗಳು ಇದ್ದವು ಎಂದರು.