Monday, December 23, 2024

ಭಾರತೀಯ ಸೇನೆಗೆ ಆಯ್ಕೆಯಾದ ಕೋಟೆನಾಡಿನ ಕುವರಿ ವಿಜಯಾ ಹದ್ಲಿ

ಬಾಗಲಕೋಟೆ : ದೈಹಿಕ ಶಿಕ್ಷಕಿ ಆಗಬೇಕು ಅಂತ ಅಂದುಕೊಂಡಿದ್ದ ವಿಜಯಾ ಇವತ್ತು ಸಿಆರ್​​​ಪಿಎಫ್ ಯೋಧೆಯಾಗಿದ್ದಾರೆ.

ಮೂಲತಃ ಬಾಗಲಕೋಟೆ ಜಿಲ್ಲೆಯ ಯಡಹಳ್ಳಿ ಗ್ರಾಮದ ವಿಜಯಾ ಹದ್ಲಿ. ಮೊದಲ ಪ್ರಯತ್ನದಲ್ಲಿ ಭಾರತಾಂಬೆ ಸೇವೆ ಮಾಡುವ ಅವಕಾಶವನ್ನ ಪಡೆದಿದ್ದಾರೆ. ದೈಹಿಕ ಶಿಕ್ಷಕಿ ಆಗಬೇಕು ಅಂತ ಅಂದುಕೊಂಡಿದ್ದ ವಿಜಯಾ ಇವತ್ತು ಸಿಆರ್​​​ಪಿಎಫ್ ಯೋಧೆ. 2021 ರಲ್ಲಿ ಬೆಂಗಳೂರನ ಯಲಹಂಕದಲ್ಲಿ ನಡೆದ ಸಿಆರ್​​​ಪಿಎಫ್ ಆಯ್ಕೆಯಾಗಿದ್ದಾರೆ.

ಇನ್ನು, ಗ್ರಾಮದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಗದ್ದನಕೇರಿ ಹಾಗೂ ಬಾಗಲಕೋಟೆಯಲ್ಲಿ ಕಾಲೇಜು ಶಿಕ್ಷಣ ಮುಗಿಸಿದ ವಿಜಯಾ ಕಲ್ಲಪ್ಪ & ರೇಣುಕಾ ದಂಪತಿಗಳ ಒಟ್ಟು ನಾಲ್ಕು ಜನ ಹೆಣ್ಣುಮಕ್ಕಳಲ್ಲಿ ವಿಜಯಾ ಎರಡನೇ ಮಗಳಾದ ಇವರು, ಅತಿ ಕಡು ಬಡತನದಲ್ಲಿಯೇ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಇದು ಭಾರತಾಂಬೆಯ ಸೇವೆ ಮಾಡಲು ತಂದೆ ತಾಯಿಗಳು ಕಳಿಸಿದ್ದಾರೆ. 9 ತಿಂಗಳ ಟ್ರೈನಿಂಗ್ ಬಳಿಕ ಇದೀಗ ದೇಶಸೇವೆಗೆ ಹೊರಟ ವಿಜಯಾ. ಭಾರತೀಯ ಸೇನೆ ಸೇವೆಗೆ ತೆರಳುತ್ತಿರುವುಕ್ಕೆ ಗ್ರಾಮಸ್ಥರಲ್ಲಿ ಸಂತಸ ತಂದಿದೆ.

RELATED ARTICLES

Related Articles

TRENDING ARTICLES