Sunday, January 19, 2025

ಸಿ ಟಿ ರವಿಗೆ ಟಾಂಗ್ ನೀಡಿದ ಸಿದ್ದರಾಮಯ್ಯ

ವಿಜಯಪುರ : ಕಿತ್ತೂರು ರಾಣಿ ಚೆನ್ನಮ್ಮ, ಕೆಂಪೇಗೌಡ ಜಯಂತಿ ಮಾಡಿದ್ದು ನಾನು, ಅವರ ಮೇಲೆ ಪ್ರೀತಿ ಇಲ್ವಾ ಎಂದು ಸಿ ಟಿ ರವಿಗೆ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಿತ್ತೂರು ರಾಣಿ ಚೆನ್ನಮ್ಮ, ಕೆಂಪೇಗೌಡ ಜಯಂತಿ ಮಾಡಿದ್ದು ನಾನು, ಅವರ ಮೇಲೆ ಪ್ರೀತಿ ಇಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಫೋಟೋ ಹಾಕಿದ್ದೇವೆ, ಹಾಗಾದ್ರೆ ಪ್ರೀತಿ ಇಲ್ವಾ. ಇದನ್ನೆಲ್ಲ ಇವರು ಮಾಡಿದ್ದಾ ಎಂದು ಪ್ರಶ್ನಿಸಿದರು.

ಅದಲ್ಲದೇ, ವಿಜಯಪುರ ವಿವಿಗೆ ಅಕ್ಕಮಹಾದೇವಿ ಹೆಸರು ಇಟ್ಟಿದ್ದು ಯಾರು..? ಅಕ್ಕಮಹಾದೇವಿ ಅವರ ಗೌರವದಿಂದ ಅಲ್ವಾ ಅವರ ಹೆಸರಿಟ್ಟಿದ್ದು. ಸರ್ಕಾರಿ ಕಚೇರಿಯಲ್ಲಿ ಬಸವಣ್ಣನವರ ಫೋಟೋ ಇಟ್ಟಿದ್ದು ಕೂಡಾ ಗೌರವದಿಂದಾನೆ.ಹಿಂದೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಇವರು ಮಾಡಿದ್ರ..? ಆರ್ ಎಸ್ ಎಸ್ ಅವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ. ಜನಗಳ ಮಧ್ಯೆ ವಿಷ ಹಾಕೋದೆ ಆರ್ ಎಸ್ ಎಸ್ ಕೆಲಸ ಎಂದು ಸಿದ್ದರಾಮಯ್ಯ ವಾಗ್ದಾಳಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES