Thursday, January 23, 2025

ಮಳೆ ನಿಂತರೂ ಸಮಸ್ಯೆಗಳು ಮಾತ್ರ ನಿಂತಿಲ್ಲ

ಬೆಂಗಳೂರು: ಮಳೆ ನಿಂತ ಬಳಿಕ ಕೆ ಆರ್ ಪುರಂ ಕ್ಷೇತ್ರದಲ್ಲಿ ಸಾಂಕ್ರಾಮಿಕ ರೋಗಗಳ ಭೀತಿಯಿಂದಾಗಿ ಸಾಯಿಲೇಔಟ್, ಗಾಯಿತ್ರಿ ಲೇಔಟ್​ನಲ್ಲಿ ಆತಂಕದಲ್ಲಿ ಜನರು ಜೀವನ ಮಾಡ್ತಿದ್ದಾರೆ.

ನಗರದಲ್ಲಿ ಮಳೆ ನಿಂತರೂ ಇನ್ನೂ ಸಮಸ್ಯೆಗಳನ್ನ ಮಾತ್ರ ನಿಂತಿಲ್ಲ. ಮೊನ್ನೆಯ ಮಳೆ ಬಳಿಕ ಬಹುತೇಕ ಕುಟುಂಬಗಳು ಬೀದಿಗೆ ಬಂದಿದೆ. ಮನೆಗಳಲ್ಲಿ ದಾಖಲೆಗಳೆಲ್ಲ ಕೊಚ್ಚಿ ಹೋಗಿ ಸಂಕಷ್ಟದಲ್ಲಿರೋ ಕೆ ಆರ್ ಪುರಂ ಕ್ಷೇತ್ರದ ಜನರು ಸರ್ಕಾರ ನೀಡೋ ಪರಿಹಾರಕ್ಕೆ ಕ್ಷೇತ್ರದ ಜನತೆ ಕಾಯುತ್ತಿದ್ದಾರೆ.

ಅದಲ್ಲದೇ, ಮಳೆ ಹಾನಿ ಕುಟುಂಬಗಳಿಗೆ 25 ಸಾವಿರ ಪರಿಹಾರ ಘೋಷಣೆ ಮಾಡಿರೋ ಸಚಿವ ಭೈರತಿ ಬಸವರಾಜ್. ಎಚ್ಚೆತ್ತುಕೊಳ್ಳುತ್ತಾರಾ ನಗರಾಭಿವೃದ್ಧಿ ಸಚಿವರು..? ಪ್ರತಿ ಬಾರಿ ಮಳೆಯಾದ ವೇಳೆಯಲ್ಲಿ ಹೊರಮಾವು,ಗಾಯಿತ್ರಿ ಲೇಔಟ್,ಸಾಯಿಲೇಔಟ್ ಮುಳುಗುತ್ತಿದ್ದು, ಶಾಶ್ವತ ಸಮಸ್ಯೆ ಪರಿಹಾರಕ್ಕೆ ನಿವಾಸಿಗಳು ಪಟ್ಟು ಹಿಡಿದ್ದಾರೆ. ಸಮಸ್ಯೆ ಪರಿಹಾರ ಕ್ಕೆ ಗಮನ ನೀಡುತ್ತಾರಾ ಸಚಿವ ಭೈರತಿ ಬಸವರಾಜ್..? ಎಂದು ಕಾದುನೋಡಬೇಕು.

RELATED ARTICLES

Related Articles

TRENDING ARTICLES