Monday, December 23, 2024

ಗುಮ್ಮನ ಆರ್ಭಟ ನೋಡಲು ಅಭಿಮಾನಿಗಳ ಕಾತರ..!

ರಾ ರಾ ರಕ್ಕಮ್ಮ ಹಾಡಿನ ಮೂಲಕ ಎಲ್ಲರ ಮೈ ಕೈ ಕುಣಿಸಿದ್ದ ರೋಣನ ಅಬ್ಬರ ನೋಡೋಕೆ ಕೌಂಟ್​ ಡೌನ್​ ಶುರುವಾಗಿದೆ. ಗುಮ್ಮನ ಭಯಾನಕ ಅವತಾರ ಕಣ್ತುಂಬಿಕೊಳ್ಳೋಕೆ ಫ್ಯಾನ್ಸ್​ ಫುಲ್​ ಥ್ರಿಲ್​ ಆಗಿದ್ದಾರೆ. ಇದೀಗ ರೋಣನ ಕಡೆಯಿಂದ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ಸಿಕ್ಕಿದೆ. ಯೆಸ್​​​.. ಕಿಚ್ಚ ಕೊಟ್ಟ ಆ ಸರ್ಪ್ರೈಸಿಂಗ್​ ನ್ಯೂಸ್​ ಯಾವುದು ಗೊತ್ತಾ..? ಈ ಸ್ಟೋರಿ ನೋಡಿ.

ವಿಕ್ರಾಂತ್​ ರೋಣ ತಂಡದಿಂದ ಬಿಗ್​ ಅನೌನ್ಸ್​​ಮೆಂಟ್​​

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಅಭಿನಯದ ಮೋಸ್ಟ್​ ಎಕ್ಸ್​​ಪೆಕ್ಟೆಡ್​ ಸಿನಿಮಾ ವಿಕ್ರಾಂತ್​ ರೋಣ. ಸದ್ಯ ಕಿಚ್ಚ  ಸುದೀಪ್​ ಈ ಸಿನಿಮಾ ಹೊರತು ಯಾವುದೇ ಪ್ರಾಜೆಕ್ಟ್​​ಗಳಿಗೂ ಸಹಿ ಹಾಕಿಲ್ಲ. ಈ ಸಿನಿಮಾ ಮೇಲೆ ಕಿಚ್ಚನಿಗಿರುವ  ಕಾನ್ಫಿಡೆಂಟ್​ ಅಂತದ್ದು. ಹಾಗಾಗಿ ರೋಣ ಚಿತ್ರದ ಜಪ ಜೋರಾಗಿದೆ. ಸಿಲ್ವರ್​ ಸ್ಕ್ರೀನ್​ ಮೇಲೆ ಫ್ಯಾಂಟಸಿ ಜಗತ್ತನ್ನು ಆನಂದಿಸೋಕೆ ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ.

ಫ್ಯಾನ್​ ಇಂಡಿಯಾ ಲೆವೆಲ್​ನಲ್ಲಿ ಭಾರತೀಯ ಚಿತ್ರರಂಗದಲ್ಲೇ ವಿಭಿನ್ನ ಪ್ರಯತ್ನದ ಮೂಲಕ ಛಾಪು ಮೂಡಿಸೋಕೆ ರೋಣ ಸಜ್ಜಾಗಿದ್ದಾನೆ. ಬಜೆಟ್​​ ವಿಚಾರದಲ್ಲಿ ಕಾಂಪ್ರಮೈಸ್​ ಆಗದೆ ನಿರ್ಮಾಪಕ ಜಾಕ್​​ ಮಂಜು ಕೋಟಿ ಕೋಟಿ ಹಣವನ್ನು ಲೆಕ್ಕವಿಲ್ಲದಂತೆ ಸುರಿದು ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಚಿತ್ರದ ಪೋಸ್ಟರ್​​, ಟೀಸರ್​​ ಎಲ್ಲರನ್ನೂ ಅರೆಕ್ಷಣ ದಂಗಾಗುವಂತೆ ಮಾಡಿದೆ. ಇದೀಗ ಅಚ್ಚರಿಯ ವಿಚಾರ ಅಂದ್ರೆ,  ಚಿತ್ರತಂಡ ಲೇಟ್​ ಮಾಡದೇ ಟ್ರೈಲರ್​ ರಿಲೀಸ್​ ಡೇಟ್​ ಅನೌನ್ಸ್​ ಮಾಡಿ ಸರ್ಪ್ರೈಸ್​ ಕೊಟ್ಟಿದೆ.

ಜೂನ್​ 23ಕ್ಕೆ ಗೆಜ್ಜೆ ಕಟ್ಟಿ ಗಡಾಂಗ್​ ರಕ್ಕಮ್ಮ ಎಂಟ್ರಿ

ಗುಮ್ಮನಿಂದ ಎಸ್ಕೇಪ್​ ಆಗೋಕೆ ಫ್ಯಾನ್ಸ್​​ ರೆಡಿ..!

ರೋಣನ ಆರ್ಭಟದ ಝಲಕ್​ ನೋಡೋಕೆ   ಜೂನ್​​ 23 ರವರೆಗೂ ಅಭಿಮಾನಿಗಳು ಕಾಯಲೇಬೇಕು. ಗೆಜ್ಜೆ ಕಟ್ಟಿ ಕಿಚ್ಚ ಸುದೀಪ್​ ಜೊತೆ ಹೆಜ್ಜೆ ಹಾಕಿದ್ದ ಗಡಾಂಗ್​ ರಕ್ಕಮ್ಮನ ತಾಳಕ್ಕೆ ತೇಲಿದ್ದ ಅಭಿಮಾನಿಗಳು ಟ್ರೈಲರ್​ ಹೇಗಿರಬಹುದು ಅನ್ನೋ ಕೂತೂಹಲದಲ್ಲಿದ್ದಾರೆ. ರಗಡ್​ ರಕ್ಕಮ್ಮ ಸೋಶಿಯಲ್​ ಮೀಡಿಯಾದಲ್ಲಿ ಮಾಡಿದ ಸಪ್ಪಳಕ್ಕೆ ಇಡೀ ಇಂಡಿಯಾ ರೋಣನ ಕಡೆ ತಿರುಗಿ ನೋಡುವಂತೆ ಮಾಡಿದೆ.  ಇದೀಗ ಟ್ರೈಲರ್​​ ಎಲ್ಲರ ಹೆಬ್ಬೇರಿಸುವಂತೆ ಮಾಡುತ್ತಾ ಅನ್ನೋದನ್ನ ಕಾದು ನೋಡಬೇಕಾಗಿದೆ.

ವಿಕ್ರಾಂತ್​ ರೋಣ ಟ್ರೈಲರ್​ ಜೂನ್​ 23ಕ್ಕೆ ರಿಲೀಸ್​ ಮಾಡಿ ಆ ದಿನವನ್ನು ಸ್ಮರಣೀಯ ದಿನವಾಗಿಸಲು ಚಿತ್ರತಂಡ ಪ್ಲ್ಯಾನ್​ ಮಾಡಿದೆ. ಈ ಕುರಿತು ಕರುನಾಡಿನ ಹೆಬ್ಬುಲಿ ಕಿಚ್ಚ ಸುದೀಪ್ ಟ್ವೀಟ್ ಮಾಡಿ ಗುಡ್​ ನ್ಯೂಸ್​ ಕೊಟ್ಟಿದ್ದಾರೆ. ಒಟ್ಟು 6 ಭಾಷೆಗಳಲ್ಲಿ ವಿಶ್ವದಾಧ್ಯಂತ ಅಬ್ಬರಿಸೋಕೆ ರೋಣ ಬರ್ತಿದ್ದಾನೆ. ರೋಣನಿಗೆ ಬಾಲಿವುಡ್​ ಭಾಯ್​ಜಾನ್​​ ಸಲ್ಮಾನ್​ ಖಾನ್​ ಕೂಡ ಸಾಥ್​ ನೀಡಿದ್ದು ಬಾಲಿವುಡ್​ನಲ್ಲಿ ಸಿನಿಮಾ ರಿಲೀಸ್​ ಮಾಡೋದಾಗಿ ಭರವಸೆ ಕೊಟ್ಟಿದ್ದಾರೆ. ಸಲ್ಲು ಸಾಥ್​ನಿಂದ ರೋಣನಿಗೆ ಆನೆಬಲ ದೊರೆತಂತಾಗಿದೆ.

ಕಿಚ್ಚನ ಭರ್ಜರಿ ಆ್ಯಕ್ಟಿಂಗ್​, ಅನೂಪ್​​ ಭಂಡಾರಿ ನಿರ್ದೆಶನದ ಕರಾಮತ್ತು, ಜಾಕ್ವೆಲಿನ್​ ಜಾದು ಎಲ್ಲವೂ ಮಿಕ್ಸ್​ ಆಗಿ ಕನ್ನಡದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸೋಕೆ ಸಿನಿಮಾ ತುದಿಗಾಲಲ್ಲಿ ನಿಂತಿದೆ. ಜಾಕ್​ ಮಂಜು ನಿರ್ಮಾಣದಲ್ಲಿ ಸಿನಿಮಾ ರಿಚ್​ ಆಗಿ ಮೂಡಿ ಬಂದಿದೆ. ಅಜನೀಶ್​ ಲೋಕನಾಥ್​ ಸಂಗೀತದ ಅಲೆಯಲ್ಲಿ ಎಲ್ಲರೂ ಮುಳುಗಿರೋದು ಈ ಚಿತ್ರದ ಹಾಡುಗಳ ಮೂಲಕ ಸಾಭೀತಾಗಿದೆ. ವಿಲಿಯಮ್​ ಡೇವಿಡ್​ ಕ್ಯಾಮೆರಾ ಕಣ್ಣು ನಿಮ್ಮನ್ನು ಹೊಸ ಪ್ರಪಂಚಕ್ಕೆ ತೆಗೆದುಕೊಂಡು ಹೋಗಲಿದೆ. ಒಟ್ಟಾರೆ ಚಿತ್ರದ ಇನ್ನಷ್ಟು ಅಪ್ಡೇಟ್​ಗೆ ಕಾಯ್ತಿರೋ ಫ್ಯಾನ್ಸ್​ಗೆ ಭರ್ಜರಿ ಮನರಂಜನೆ ಕಾದಿದೆ.

ರಾಕೇಶ್​ ಅರುಂಡಿ, ಫಿಲ್ಮ್ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES