Wednesday, January 22, 2025

ಕಡಲ ತೀರದಲ್ಲಿ ಕ್ಯೂಟ್​ ಕಪಲ್​​ ಕೃಷ್ಣ- ಸಮ್ಮಿಲನ..!

ಲವ್​ ಮಾಕ್ಟೇಲ್​ ಚಿತ್ರದ ಮೂಲಕ  ಸಕ್ಸಸ್​ನ ಪೀಕ್​ನಲ್ಲಿರೋ ಸ್ಯಾಂಡಲ್​ವುಡ್​​ ಕ್ಯೂಟ್​ ಕಪಲ್​​ ಡಾರ್ಲಿಂಗ್​ ಕೃಷ್ಣ ಹಾಗೂ ಮಿಲನಾ ನಾಗರಾಜ್​​. ಪ್ರೇಮಿಗಳ ದಿನ ಮದ್ವೆಯಾಗಿ ಪ್ರಣಯ ಪಕ್ಷಿಗಳಂತೆ ಜಾಲಿಯಾಗಿರೋ ಮುದ್ದು ಪಾರಿವಾಳಗಳು, ಇತ್ತೀಚೆಗೆ ಮಾಲ್ಡೀವ್ಸ್​​ ಕಡಲ ಕಿನಾರೆಗೆ ಭೇಟಿ ಕೊಟ್ಟಿದ್ದರು. ಸದ್ಯ ಈ ವೀಡಿಯೋ ಸೋಶಿಯಲ್​ ಮೀಡಿಯಾದಲ್ಲಿ  ಸಖತ್​ ವೈರಲ್​ ಆಗಿದೆ.

ಮಾಲ್ಡೀವ್ಸ್​ ಕಿನಾರೆಯಲ್ಲಿ ಬರ್ತ್​ ಡೇ ಸೆಲೆಬ್ರೇಷನ್​​

ಇತ್ತೀಚೆಗೆ ಸೆಲೆಬ್ರಿಟಿಗಳಿಗೆ ಸ್ವಲ್ಪ ಬ್ರೇಕ್​ ಸಿಕ್ಕರೆ ಸಾಕು ಮಾಲ್ಡೀವ್ಸ್​ಗೆ ಹಾರಿ ಬಿಡ್ತಾರೆ. ಹನಿಮೂನ್​​, ಜಾಲಿರೈಡ್​​ ಅಂತಾ ಜೋಡಿಯಾಗಿ ಕಡಲಕಿನಾರೆಯಲ್ಲಿ ಮೋಜು ಮಸ್ತಿ ಮಾಡೋಕೆ ಮಾಲ್ಡೀವ್ಸ್​ ಹಾಟ್​ ಸ್ಪಾಟ್ ಆಗಿದೆ​​​. ಸ್ಯಾಂಡಲ್​​ವುಡ್​ನ ಕ್ಯೂಟ್​ ಕಪಲ್​​ ಡಾರ್ಲಿಂಗ್​ ಕೃಷ್ಣ ಹಾಗೂ ಮಿಲನಾ ಮಾಲ್ಡೀವ್ಸ್​​ ಕಡಲ ಕಿನಾರೆಯಲ್ಲಿ ಕಾಲ ಕಳೆದಿದ್ದಾರೆ. ಇದೀಗ ಈ ಜೋಡಿಯ ಫೋಟೋ ಹಾಗೂ ವೀಡಿಯೋಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಸೌಂಡ್​ ಮಾಡ್ತಿವೆ.

ಲವ್​ ಮಾಕ್ಟೇಲ್​​ ​​ ಹಿಟ್​​ ಸಿನಿಮಾಗಳ  ಮೂಲಕ ಯಶಸ್ಸಿನ ಉತ್ತುಂಗದಲ್ಲಿರೋ ಈ ಜೋಡಿ ಸ್ಯಾಂಡಲ್​ವುಡ್​ನಲ್ಲಿ ಸಾಲು ಸಾಲು ಸಿನಿಮಾಗಳ ಮೂಲಕ ಸಖತ್​ ಬ್ಯುಸಿಯಾಗಿದ್ದಾರೆ. ಈ ಬ್ಯುಸಿಯ ನಡುವೆಯೂ ಮಾಲ್ಡೀವ್ಸ್​ಗೆ ಹೋಗಿ ಬಂದಿದ್ದಾರೆ. ಮಾಲ್ಡೀವ್ಸ್​ ಪ್ರವಾಸಕ್ಕೆ ಹೋಗಿ ಬರಲು ಕಾರಣ ಕೂಡ ಇದೆ. ಡಾರ್ಲಿಂಗ್​​ ಕೃಷ್ಣ ಬರ್ತ್​ ಡೇ ಸೆಲೆಬ್ರೇಟ್​ ಮಾಡೋ ಸಲುವಾಗಿ ಈ ಮುದ್ದಾದ ಜೋಡಿ ಮಾಲ್ಡೀವ್ಸ್​ಗೆ ಹಾರಿದೆ.

ಡಾಲ್ಫಿನ್​​ ಜೊತೆಯಲ್ಲಿ ಮಿಲನಾ ಬಿಂದಾಸ್​ ಸ್ವಿಮ್ಮಿಂಗ್​

ಬೀಚ್​ ದಡದಲ್ಲಿ ರಜೆಯ ಮಜಾ ಕಳೆದ ಪ್ರೇಮಿಗಳು

ಸ್ಯಾಂಡಲ್​ವುಡ್​​ನ ಸ್ಟಾರ್​ ಕಪಲ್​ ಡಾರ್ಲಿಂಗ್​ ಕೃಷ್ಣ ಹಾಗೂ ಮಿಲನಾ ನಾಗರಾಜ್ ಪ್ರೀತಿಸಿ ಮದ್ವೆಯಾಗಿದ್ರು​. ಮಾಲ್ಡೀವ್ಸ್​ನಲ್ಲಿ ಹನಿಮೂನ್ ಮುಗಿಸಿದ್ದ ಈ ಜೋಡಿ ಮತ್ತ್ತೊಮ್ಮೆ ಡಾರ್ಲಿಂಗ್​ ಕೃಷ್ಣ ಅವ್ರ ಬರ್ತ್​ ಡೇ ಸೆಲೆಬ್ರೇಟ್​ ಮಾಡೋ ಸಲುವಾಗಿ ಮಾಲ್ಟೀವ್ಸ್​ಗೆ ತೆರಳಿದ್ದರು. ಇದೀಗ ಈ ಜೋಡಿ ಅಲ್ಲ ಕಳೆದ ಸಮುದ್ರದ ತೀರದಲ್ಲಿನ ಸಂತೋಷದ ಕ್ಷಣಗಳನ್ನು ಹಂಚಿಕೊಂಡಿದೆ.

ಸ್ಯಾಂಡಲ್​ವುಡ್​ ಸ್ಟಾರ್​ ನಟರೆಲ್ಲಾ ಕೃಷ್ಣ ಅವರ ಬರ್ತ್​ ಡೇ ವಿಶ್​ ಮಾಡಿದ್ರು. ಬರ್ತ್​ ಡೇ ದಿನವೇ ದಿಲ್​ ಪಸಂದ್​ ಚಿತ್ರತಂಡ ಸಿನಿಮಾದ ಗ್ಲಿಂಪ್ಸ್​ ರಿಲೀಸ್​ ಮಾಡಿ ಸರ್ಪ್ರೈಸ್​ ಕೊಡ್ತು. ಎರಡು ಮೂರು ದಿನಗಳ ಕಾಲ ಮಾಲ್ಡೀವ್ಸ್​​ನಲ್ಲೇ ಬೀಡು ಬಿಟ್ಟಿದ್ದ ಈ ಜೋಡಿ ಸಾಗರದಲ್ಲಿ ಇಳಿದು ಎಂಜಾಯ್​ ಮಾಡಿದ್ದಾರೆ. ಟೆನ್ನೀಸ್​ ಆಡಿ ಖುಷಿ ಪಟ್ಟಿದ್ದಾರೆ.

ಮಾಲ್ಟೀವ್ಸ್​ನಲ್ಲಿನ ಪ್ರಕೃತಿ ಸೌಂದರ್ಯ, ಅದ್ಭುತ ಆತಿಥ್ಯದ ಸಲುವಾಗಿಯೆ ಎಲ್ಲರೂ ಅಲ್ಲಿ ಕಾಲ ಕಳೆಯೋಕೆ ಇಷ್ಠ ಪಡ್ತಾರೆ. ಮಿಲನಾ ನಾಗರಾಜ್​ಗೆ ಮಾಲ್ಡೀವ್ಸ್​ ಕೂಡ ಫೇವರಿಟ್​​ ಹಾಟ್​ ಸ್ಪಾಟ್​​​  ಆಗಿದೆ. ಇಲ್ಲಿ ಮಿಲನಾ ಕಡಲಿಗಳಿದು ಡಾಲ್ಫಿನ್​ ಜೊತೆ ಬಿಂದಾಸ್ ಆಗಿ ಸ್ವಿಮ್​ ಮಾಡ್ತಿದ್ದಾರೆ. ಸಾಗರದಲ್ಲಿ ಱಫ್ಟಿಂಗ್​ ಕೂಡ ಮಾಡಿದ್ದು ಸಖತ್ ಥ್ರಿಲ್ಲಿಂಗ್ ಆಗಿದೆ. ಏನೇ ಆಗಲಿ ಮುದ್ದು ಮುದ್ದಾದ ಈ ಜೋಡಿಗೆ ಯಾರ ದೃಷ್ಠಿಯೂ ಬೀಳದಿರಲಿ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES