Monday, December 23, 2024

ಸಿಲಿಕಾನ್​ ಸಿಟಿಯಲ್ಲಿ ಎಸಿಬಿ ಅಧಿಕಾರಿಗಳ ಮಹಾಬೇಟೆ..!

ಬೆಂಗಳೂರು : ಸಿಲಿಕಾನ್​ ಸಿಟಿಯಲ್ಲಿ ಎಸಿಬಿ ಅಧಿಕಾರಿಗಳು ಮಹಾಬೇಟೆ ಮಾಡಿದ್ದು, ನಿವೃತ್ತ ಇಂಜಿನಿಯರ್ ಬಳಿ ಕೋಟಿ ಕೋಟಿ ಆಸ್ತಿ ಪತ್ತೆಯಾಗಿದೆ.

ನಗರದಲ್ಲಿ ಇಂದು ಮಂಜುನಾಥ್​ ಆಸ್ತಿ ಮಹಿಮೆ.. ಬೆಚ್ಚಿಬಿದ್ದ ಎಸಿಬಿ ಜಯನಗರದ 9ನೇ ಬ್ಲಾಕ್‌ನಲ್ಲಿ ಚೈತನ್ಯ ಗೋಲ್ಡ್ ವಾಣಿಜ್ಯ ಕಟ್ಟಡವಿದೆ. ಇದಲ್ಲದೆ, ನಿವೃತ್ತಿ ಬಳಿಕ ಪತ್ನಿ ಉಮಾದೇವಿ ಹೆಸರಲ್ಲಿ ಕಟ್ಟಡ ಖರೀದಿ ಮಾಡಿದ್ದು, ಬಸವೇಶ್ವರ ನಗರ ಶಾರದಾ ಕಾಲೋನಿಯ ಮನೆ. ಜಯನಗರ 4th ಬ್ಲಾಕ್​ನಲ್ಲಿ ಚೈತನ್ಯ ಗೋಲ್ಡ್ ಕಾಂಪ್ಲೆಕ್ಸ್. ಮಗಳ ಹೆಸರಿನಲ್ಲಿ ದುಬಾರಿ ಫ್ಲಾಟ್ ಖರೀದಿ ಮಾಡಿದ್ದಾರೆ.

ಅದಲ್ಲದೇ, ಮಗಳು ವರ್ಷಾ ಹೆಸರಲ್ಲಿ ಕಾರ್ಬನ್ ಕಾರ್ನರ್ ಸ್ಟೋನ್ ಅಪಾರ್ಟ್ಮೆಂಟ್ ಇದ್ದು, ತಾಯಿಯ ಹೆಸರಲ್ಲಿ 4 ಎಕರೆ ಜಮೀನು ಖರೀದಿ ಮಾಡಿದ್ದಾರೆ. ಎಸಿಬಿ ದಾಳಿ ವೇಳೆ ವಾಣಿಜ್ಯ ಕಟ್ಟಡ ಖರೀದಿ ದಾಖಲೆ ಪತ್ತೆಯಾಗಿದ್ದು, ವಿಧಾನಸೌಧದ ಸಹಕಾರ ಬ್ಯಾಂಕ್​ನಲ್ಲಿ ಕೋಟ್ಯಂತರ ರೂ. ವಹಿವಾಟು ಮಾಡಿದ್ದಾರೆ. ನಿವೃತ್ತಿ ಬಳಿಕ ಕೋಟಿ ಕೋಟಿ ವಹಿವಾಟು ಮಾಡಿದ್ದು, ಕಂದಾಯ ಇಲಾಖೆ ಉಪ ನೋಂದಾಣಿಧಿಕಾರಿಗಳ ಕಡತಗಳು ಪತ್ತೆಯಾಗಿದೆ. ಹಾಗೆನೇ ಮಂಜುನಾಥ ಮನೆಯಲ್ಲಿ ಕಡತಗಳು ಪತ್ತೆಯಾಗಿದೆ.

RELATED ARTICLES

Related Articles

TRENDING ARTICLES