Wednesday, January 22, 2025

ವಾಣಿಜ್ಯ ನಗರಿಯಲ್ಲಿ ಪೊಲೀಸರಿಗೆ ಇಲ್ಲವಾ ಕವಡೆ ಕಾಸಿನ ಕಿಮ್ಮತ್ತು..?

ಹುಬ್ಬಳ್ಳಿ : ವಾಣಿಜ್ಯ ನಗರಿಯಲ್ಲಿ ಪೊಲೀಸರಿಗೆ ಇಲ್ಲವಾ ಕವಡೆ ಕಾಸಿನ ಕಿಮ್ಮತ್ತು..? ಹಿಂದೂ ಕಾರ್ಯಕರ್ತರನ್ನು ಪ್ರಶ್ನಿಸಿದರೆ ಸಿಗುತ್ತದೆ ಟ್ರಾನ್ಸ್​ಫರ್ ಶಿಕ್ಷೆ.

ಹುಬ್ಬಳ್ಳಿ-ಧಾರವಾಡ ಕರ್ತ್ಯವ್ಯ ನಿರ್ವಹಿಸುವ ಪೊಲೀಸರೇ ಎಚ್ಚರ. ಹಿಂದೂ ಕಾರ್ಯಕರ್ತರನ್ನು ಪ್ರಶ್ನಿಸಿದರೆ ಸಿಗುವುದು ಟ್ರಾನ್ಸ್​ಫರ್ ಶಿಕ್ಷೆ..? ಹಿಂದೂ ಕಾರ್ಯಕರ್ತರ ಹಠಕ್ಕೆ ಮಣಿದ ಕಮಿಷನರ್ ಜಯತಿರ್ಥ್ ಕಟ್ಟಿ ಬೇಡಿಕೆಯನ್ನು ಕೊನೆಗೂ ಕಮಿಷನರ್​ ಈಡೇರಿಸಿದ್ದಾರೆ.

ಅದಲ್ಲದೇ, ವಿದ್ಯಾನಗರ ಪೊಲೀಸ್ ಇನ್ಸ್ ಪೆಕ್ಟರ್‌ಗೆ ವರ್ಗಾವಣೆ ಶಿಕ್ಷೆಯನ್ನು ನೀಡಿದ್ದಾರೆ. ಕಿಮ್ಸ್ ವಸತಿ ಗೃಹಗಳಲ್ಲಿ ಕಳ್ಳತನ ವಿಚಾರವಾಗಿ ವಾಗ್ವಾದದಲ್ಲಿ ಪೊಲೀಸರನ್ನು ಬೆದರಿಸಿ ಪ್ರತಿಭಟನೆ ನಡೆಸಿದ್ದ ಕಾರ್ಯಕರ್ತರು ಇನ್ಸ್​ಪೆಕ್ಟರ್, ಕಾನ್ಸ್​ಟೇಬಲ್ ಮೇಲೆ FIR ದಾಖಲಿಸುವಂತೆ ಪ್ರತಿಭಟನೆಯನ್ನು ಮಾಡಿದ್ದಾರೆ. ಆಯುಕ್ತರ ಟ್ರಾನ್ಸ್​ಫರ್ ನಿರ್ಧಾರಕ್ಕೆ ಕುಗ್ಗಿ ಹೋದ ಪೊಲೀಸರು. ತಪ್ಪು ಮಾಡದೆ ಇದ್ದರೂ ಟ್ರಾನ್ಸ್​ಫರ್ ಶಿಕ್ಷೆ ಅನುಭವಿಸಿದ ಸಿಬ್ಬಂದಿ ಇನ್ಸ್​ಪೆಕ್ಟರ್ ಸಿಸಿಬಿಗೆ, ಕಾನ್ಸ್​ಟೇಬಲ್​​ನ್ನು ಉಪನಗರ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

RELATED ARTICLES

Related Articles

TRENDING ARTICLES