ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯಿಂದ ಬೇಸತ್ತಿರುವ ಜನಕ್ಕೆ ಇಲ್ಲಿದೆ ಗುಡ್ ನ್ಯೂಸ್. ಹೌದು ಇದೀಗ ವಿಶ್ವದ ಮೊದಲ ಸೋಲಾರ್ ಕಾರ್ ಮಾರುಕಟ್ಟೆಗೆ ಬರಲು ಸಜ್ಜಾಗಿದೆ .
ನೆದರ್ ಲ್ಯಾಂಡ್ ಮೂಲದ ಕಂಪನಿ ಲೈಟ್ ಇಯರ್ ಇಂತಹ ಆವಿಷ್ಕಾರ ಮಾಡಿದ್ದು ಕಾರ್ ಪ್ರಿಯರ ಮನ ಸೆಳೆದಿದೆ. ಅದ್ಭುತ ಡಿಸೈನ್ ಮತ್ತು ಚಾರ್ಜಿಂಗ್ ರಗಳೆ ಇಲ್ಲದ ಕಾರ್ ಇದಾಗಿದೆ. ಅಂದರೆ ಒಮ್ಮೆ ಚಾರ್ಚ್ ಮಾಡಿದ್ರೆ ಸಾಕು 7 ತಿಂಗಳು ಮತ್ತೆ ಚಾರ್ಚ್ ಮಾಡುವ ಅವಶ್ಯಕತೆ ಬರುವುದಿಲ್ಲ ಅದೂ ಕೂಡಾ ಸೋಲಾರ್ ಚಾರ್ಜಿಂಗ್. ಒಮ್ಮೆ ಚಾರ್ಜ್ ಆದ್ರೆ 11 ಸಾವಿರ ಕಿಮಿರವರೆಗೆ ಸಂಚರಿಸಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ. ಲೈಟ್ ಇಯರ್ ಝೀರೋ ಹೆಸರಿನ ಈ ಕಾರು ನೋಡೋಕು ಅದ್ಭುತವಾಗಿದೆ. ಯೂನಿಕ್ ಲುಕ್ ಅಂಡ್ ಫ್ಯೂಚರ್ಸ್ ಮೂಲಕ ಕಾರು ಆಟೋ ಪ್ರಿಯರ ಹಾಟ್ ಫೇವರೆಟ್ ಆಗ್ತಿದೆ.
60 ಕಿಲೋವ್ಯಾಟ್ ಬ್ಯಾಟರಿ ಒಳಗೊಂಡಿದ್ದು 174 ಪಿಎಸ್ ಪವರ್ ಹೊಂದಿದೆ. ಕಾರಿನ ಮೇಲೆ 54 ಚದರ ಅಡಿಯ ಕರ್ವಡ್ ಗ್ಲಾಸ್ ಅಳವಡಿಸಲಾಗಿದೆ. ಇದರಿಂದ ಗ್ಲಾಸ್ನ ಯಾವುದೇ ಭಾಗದಲ್ಲಿ ಸೂರ್ಯನ ಕಿರಣಗಳು ಬಿದ್ದರೂ ಕಾರ್ ಚಾರ್ಚ್ ಆಗಲಿದೆ. ಬಿಸಿಲು ಕಡಿಮೆ ಇರುವ ದೇಶಗಳಲ್ಲಿ 2 ತಿಂಗಳವರೆಗೆ ಕಾರ್ ಚಾರ್ಚ್ ಮಾಡುವಂತಿಲ್ಲ. ಎಂಜಿನಿಯರ್ಗಳ ತಂಡ ಸತತ 6 ವರ್ಷಗಳ ಕಾಲ ಈ ಕಾರಿನ ಆವಿಷ್ಕಾರಕ್ಕಾಗಿ ಶ್ರಮಿಸಿದೆ. ಈ ಸೋಲಾರ್ ಎಲೆಕ್ಟ್ರಿಕ್ ವಾಹನ ಹೈವೆಯಲ್ಲಿ 100 ಕಿ ಮಿ ಸಂಚರಿಸಿದರೂ ಕೇವಲ 10.5 ಕಿಲೋ ವ್ಯಾಟ್ ವಿದ್ಯುತ್ ಬಳಸಲಿದೆ. ಇನ್ನು ಕಂಪನಿ ವರ್ಷಕ್ಕೆ 946 ಲೈಟ್ ಇಯರ್ ಝೀರೋ ಕಾರುಗಳ ಉತ್ಪಾದನೆಯ ಮಿತಿ ವಿಧಿಸಿಕೊಂಡಿದೆ. ಇನ್ನು ನಿಮ್ಮ ಕುತೂಹಲದ ಪ್ರಶ್ನೆಗೂ ಉತ್ತರ ಇಲ್ಲಿದೆ – ಈ ಕಾರಿನ ಬೆಲೆ ಕೇವಲ 2 ಕೋಟಿ 5 ಲಕ್ಷ ಅಷ್ಟೇ.