ಬೆಂಗಳೂರು : ಹಾಲಿನ ದರ 50 ರೂ ಏರಿಸಲು ಫ್ರೀಡಂ ಪಾಕ್೯ ನಲ್ಲಿಂದು ರೈತರು ಬೃಹತ್ ಪ್ರತಿಭಟನೆಯನ್ನು ಮಾಡಲಿದ್ದಾರೆ.
ನಮ್ಮ ಹಾಲು ನಮ್ಮ ಹಕ್ಕು ಎಂದು ಹಾಲಿನ ಚಳುವಳಿ ಆರಂಭಗೊಳ್ಳಲಿದ್ದು, ಒಂದು ಲೀಟರ್ ಹಾಲಿಗೆ ಕನಿಷ್ಠ 50 ರೂ ಏರಿಸಲು ಒತ್ತಾಯ ಮಾಡಲಾಗಿದ್ದು, ಸದ್ಯ ಹಾಲು ಉತ್ಪಾದಕರಿಗೆ ಕೇವಲ 26 ರೂಪಾಯಿ ಸಿಗುತ್ತಿದೆ. ಒಂದು ಲೀಟರ್ ಹಾಲು ಕರೀ ಬೇಕಾದ್ರೆ ಒಂದು ಹಸುಗೆ 40 ರಿಂದ 45 ರೂಪಾಯಿ ವೆಚ್ಚ ಬರುತ್ತೆ. ಹಸುಗಳಿಗೆ ನೀಡುವ ಆಹಾರ ಪದಾರ್ಥಗಳ ಬೆಲೆ ಎಚ್ಚಳವಾಗಿದೆ.
ಇನ್ನು ಇದ್ರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಕ್ಕೂಟ ಹಾಗೂ ಸರ್ಕಾರದ ಮೇಲೆ ನಮಗೆ ನಂಬಿಕೆ ಇಲ್ಲ. ಹಾಲು ಉತ್ಪಾದಕರಿಂದ ಒಕ್ಕೂಟ ಹಾಗೂ ಸರ್ಕಾರ ಲಾಭದಾಯಕವಾಗಿದೆ. ಆದ್ರೆ ಹಾಲು ಉತ್ಪಾದನೆ ಮಾಡುವ ರೈತರು ಬೀದಿಗೆ ಬಂದಿದ್ದಾರೆ. ಇದ್ರಿಂದ ಇಂದು ಹಾಲನ್ನ ರಸ್ತೆಗೆ ಚೆಲ್ಲಿ ಅನಿರ್ಧಿಷ್ಟಾವದಿ ಮುಷ್ಕರ ಮಾಡ್ತೇವೆ ಎಂದು ಹಾಲು ಉತ್ಪಾದಕರ ಸಂಘ ನಿರ್ಧಾರವನ್ನು ಮಾಡಿದ್ದಾರೆ.