Monday, December 23, 2024

‘777 ಚಾರ್ಲಿ’ ವೀಕ್ಷಿಸಿದ ಸಿಎಂ ಬೊಮ್ಮಾಯಿ

‘777 ಚಾರ್ಲಿ’ ಸಿನಿಮಾ ಜೂನ್ 10ರಂದು ರಿಲೀಸ್ ಆಗಿ ಎಲ್ಲಾ ಕಡೆಗಳಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈಗ ಚಿತ್ರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವೀಕ್ಷಿಸಿದ್ದಾರೆ.

ಬೆಂಗಳೂರಿನ ಒರಾಯನ್ ಮಾಲ್​​ನ PVRನಲ್ಲಿ ‘777 ಚಾರ್ಲಿ’ ಚಿತ್ರವನ್ನು ನೋಡಿದ್ದಾರೆ. ಈ ಸಂದರ್ಭದಲ್ಲಿ ಸಚಿವರಾದ ಆರ್. ಅಶೋಕ್, ಬಿ.ಸಿ. ನಾಗೇಶ್, ಶಾಸಕ ರಘುಪತಿ ಭಟ್, ನಾಯಕ ರಕ್ಷಿತ್ ಶೆಟ್ಟಿ ಮೊದಲಾದವರು ಭಾಗಿಯಾಗಿದ್ದರು..ಚಾರ್ಲಿ ವೀಕ್ಷಿಸಿದ ಬಳಿಕ ಚಿತ್ರದ ಬಗ್ಗೆ ಪ್ರತಿತಿಕ್ರಿಯಿಸಿರುವ ಸಿಎಂ, ತಮ್ಮ ನಾಯಿಯನ್ನು ನೆನಪಿಸಿಕೊಂಡ್ರು..ನಾನು ಶ್ವಾನಪ್ರಿಯ, ಈ ಸಿನಿಮಾ ನೋಡಿದಾಗ ಸತ್ತ ನನ್ನ ನಾಯಿ ನೆನಪಾಯಿತು ಎಂದು ಭಾವುಕರಾದ್ರು.

RELATED ARTICLES

Related Articles

TRENDING ARTICLES