Monday, December 23, 2024

ವಿದೇಶಿ ಭಾಷೆಗಳಲ್ಲಿ ‘ಕಬ್ಜ’ರಿಲೀಸ್

ಒಂದೆಡೆ ರಿಯಲ್ ಸ್ಟಾರ್ ಉಪೇಂದ್ರ ಮತ್ತೊಂದೆಡೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇನ್ನೊಂದೆಡೆ ಟಾಲಿವುಡ್ ಸೆನ್ಸೇಷನ್ ನಟ ಜಗಪತಿಬಾಬು ಇವೆಲ್ಲದರ ಜೊತೆ ರೆಟ್ರೋ ಲುಕ್​​ಗಳು. ಒಂದು ಸಿನಿಮಾ ಕ್ರೇಜ್ ಸೃಷ್ಟಿಸಲು ಇಷ್ಟೇ ಸಾಕು. ಈ ಕ್ರೇಜ್ ಮೂಲಕವೇ ಇಡೀ ಚಿತ್ರರಂಗದ ಬಾಕ್ಸಾಫೀಸ್​​ನ್ನು ‘ಕಬ್ಜ ’ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ ನಿರ್ದೇಶಕ ಆರ್. ಚಂದ್ರು.

ಸ್ಯಾಂಡಲ್​​​ವುಡ್​​​ನಲ್ಲಿ ಈಗಾಗಲೇ ಸಖತ್ ಸೌಂಡ್ ಮಾಡುತ್ತಿರುವ ಕಬ್ಜ ಚಿತ್ರವು 70ರ ದಶಕದ ಅಂಡರ್ವರ್ಲ್ಡ್ ಕಹಾನಿಯನ್ನು ತಿಳಿಸಲಿದೆ. ಆದರೆ ಈ ಕಥೆಯನ್ನು 7 ಭಾಷೆಗಳಲ್ಲಿ ತೋರಿಸುವುದಾಗಿ ಈ ಹಿಂದೆ ನಿರ್ದೇಶಕರು ಘೋಷಿಸಿದ್ರು. ಸಾಮಾನ್ಯವಾಗಿ ಪ್ಯಾನ್ ಇಂಡಿಯಾ ಸಿನಿಮಾ ಎಂದರೆ ಪಂಚ ಭಾಷೆಯಲ್ಲಿ ಬಿಡುಗಡೆಯಾಗುವುದು ಹೆಚ್ಚು. ಅದರಂತೆ ಕನ್ನಡ, ತಮಿಳು, ಮಲಯಾಳಂ, ತೆಲುಗು & ಹಿಂದಿಯಲ್ಲಿ ಚಿತ್ರ ಬಿಡುಗಡೆಯಾಗುತ್ತದೆ. ಆದರೆ ಈ 5 ಭಾಷೆಗಳೊಂದಿಗೆ ಕಬ್ಜ ಚಿತ್ರವನ್ನು ಒರಿಸ್ಸಾ ಹಾಗೂ ಬೆಂಗಾಳಿ ಭಾಷೆಯಲ್ಲೂ ರಿಲೀಸ್ ಮಾಡೋದಾಗಿ ನಿರ್ದೇಶಕ R.ಚಂದ್ರು ಅನೌನ್ಸ್​ ಮಾಡಿದ್ದಾರೆ.

RELATED ARTICLES

Related Articles

TRENDING ARTICLES