Monday, December 23, 2024

ಸೌತ್ ಸಿನಿಮಾ ಡೈಲಾಗ್ ಶೋಕಿಯಲ್ಲಿ ಅಜಯ್ ದೇವಗನ್

ಬಾಲಿವುಡ್​​ಗೆ ತಲೆ ಮೇಲೆ ಹೊಡೆದಂತೆ ಟಫ್ ಕಾಂಪಿಟೇಶನ್ ಕೊಡ್ತಿರೋ ಸೌತ್ ಸಿನಿಮಾಗಳು, ಅಲ್ಲಿನ ಸಿನಿಮಾಗಳ ಜೊತೆ ಸ್ಟಾರ್ ವ್ಯಾಲ್ಯೂ ಕೂಡ ಕುಗ್ಗುವಂತೆ ಮಾಡ್ತಿವೆ. ಅದ್ರಲ್ಲೂ ಕಿಚ್ಚ ಸುದೀಪ್ ಜೊತೆ ಕನ್ನಡದ ಬಗ್ಗೆ ಕಿಚ್ಚು ಹೊತ್ತಿಸಿದ್ದ ಅಜಯ್ ದೇವಗನ್, ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಈಗೇನು ಎಡವಟ್ ಮಾಡಿಕೊಂಡ್ರು ಅಂತೀರಾ..?

ಸೌತ್ ಸಿನಿಮಾ ಡೈಲಾಗ್ ಶೋಕಿಯಲ್ಲಿ ಅಜಯ್ ದೇವಗನ್

ಲೋಡ್.. ಏಯ್ಮ್.. ಶೂಟ್.. ಇದು ತ್ರಿಬಲ್ ಆರ್ ಡೈಲಾಗ್

ಸೌತ್ ಸಿನಿಮಾಗಳು ಬಾಲಿವುಡ್ ಮೇಲೆ ಸವಾರಿ ಮಾಡುತ್ತಲೇ ಇವೆ. ಪ್ರತಿ ಪ್ಯಾನ್ ಇಂಡಿಯಾ ಮೂವಿ ಕೂಡ ಸಿಕ್ಕಾಪಟ್ಟೆ ಹಾವಳಿ ಇಡೋದ್ರ ಜೊತೆ ಬಾಕ್ಸ್ ಆಫೀಸ್​​ನಲ್ಲಿ ದೀಪಾವಳಿ ಮಾಡ್ತಿವೆ. ಅದ್ರಲ್ಲೂ ರಾಜಮೌಳಿ ಹಾಗೂ ಪ್ರಶಾಂತ್ ನೀಲ್ ಅನ್ನೋ ಮಹಾನ್ ಮಾಂತ್ರಿಕರು ಅಕ್ಷರಶಃ ಬಿಟೌನ್ ಮೇಕರ್​ಗಳು ಹಾಗೂ ಸ್ಟಾರ್​ಗಳ ನಿದ್ದೆ ಕೆಡಿಸಿದ್ದಾರೆ.

ಭಾರತೀಯ ಚಿತ್ರರಂಗ ಅಂದ್ರೆ ಬರೀ ಬಾಲಿವುಡ್ ಎನ್ನುವಂತೆ ಬಿಂಬಿಸಿದ್ದ ಹಿಂದಿ ಚಿತ್ರರಂಗಕ್ಕೆ ನಮ್ಮವ್ರು ತಕ್ಕ ಪಾಠ ಕಲಿಸ್ತಿದ್ದಾರೆ. ಅವ್ರೆಲ್ಲಾ ಪಾನ್ ಇಂಡಿಯಾ ಸ್ಟಾರ್​​ಗಳಾಗಿ ಮೆರೆಯುತ್ತಿದ್ರೆ, ನಮ್ಮವ್ರು ಪ್ಯಾನ್ ಇಂಡಿಯನ್ ಸ್ಟಾರ್ಸ್​ ಆಗಿ ಧೂಳೆಬ್ಬಿಸ್ತಿದ್ದಾರೆ. ಅದಕ್ಕೆ ಪ್ರಭಾಸ್, ರಾಣಾ, ಯಶ್, ಜೂನಿಯರ್ ಎನ್​ಟಿಆಎರ್ ಹಾಗೂ ರಾಮ್ ಚರಣ್ ಲೈವ್ ಎಕ್ಸಾಂಪಲ್ಸ್.

ಹೌದು.. ಬಾಹುಬಲಿ, ತ್ರಿಬಲ್ ಆರ್ ಹಾಗೂ ಕೆಜಿಎಫ್ ಸಿನಿಮಾಗಳ ಸಕ್ಸಸ್, ಬಾಲಿವುಡ್ ಟೆಕ್ನಷಿಯನ್​ಗಳ ಜೊತೆ ಅಲ್ಲಿನ ಸ್ಟಾರ್ ವ್ಯಾಲ್ಯೂ ಕೂಡ ಕುಗ್ಗಿಸಿತು ಅಂದ್ರೆ ತಪ್ಪಾಗಲ್ಲ. ಅದ್ರಲ್ಲೂ ಅಕ್ಷಯ್ ಕುಮಾರ್, ಶಾರೂಖ್ ಖಾನ್ ಹಾಗೂ ಅಜಯ್ ದೇವಗನ್ ಸಮಾಜ ಮತ್ತು ಯೂತ್ಸ್​ಗೆ ಮಾರಕವಾಗೋ ಅಂತಹ ಪಾನ್ ಮಸಾಲ ಗುಟ್ಕಾ ಆ್ಯಡ್​​ಗಳಲ್ಲಿ ನಟಿಸಿ, ಛೀಮಾರಿ ಹಾಕಿಸಿಕೊಂಡ್ರು.

ಎಲ್ಲಕ್ಕಿಂತ ಮಿಗಿಲಾಗಿ ಅಜಯ್ ದೇವಗನ್ ನಮ್ಮ ಕನ್ನಡದ ಕಿಚ್ಚನ್ನು ಟಚ್ ಮಾಡಿ, ಬೂದಿ ಆಗೋದೊಂದಯ ಬಾಕಿ ಇತ್ತು. ಹೌದು.. ಕಿಚ್ಚ ಸುದೀಪ್ ಜೊತೆ ಭಾಷಾ ಕಾಳಗಕ್ಕೆ ಇಳಿದಿದ್ದ ದೇವಗನ್, ಕನ್ನಡಿಗರು, ಪ್ರಧಾನಿ ಮೋದಿ ಸೇರಿದಂತೆ ಇಡೀ ದೇಶವೇ ಅವ್ರನ್ನ ಖಂಡಿಸಿದ್ರು. ಹಿಂದಿಯನ್ನ ರಾಷ್ಟ್ರ ಭಾಷೆ ಅಂತ ಕರೆದು ಬಹುದೊಡ್ಡ ತಪ್ಪು ಮಾಡಿದ ದೇವಗನ್, ಕನ್ನಡ ಸೇರಿದಂತೆ ಸೌತ್ ಮೂವಿಗಳು ಬಾಲಿವುಡ್​ ಸವಾರಿ ಮಾಡ್ತಿರೋದಕ್ಕೆ ಹರಿಹಾಯ್ದಿದ್ದರು.

ಆದ್ರೆ ತ್ರಿಬಲ್ ಆರ್ ಚಿತ್ರದಲ್ಲಿ ತಾನೂ ಒಂದು ಭಾಗವಾಗಿದ್ದು ಮಾತ್ರ ದೇವಗನ್ ಮರೆತಿದ್ದಾರೆ ಅನಿಸುತ್ತೆ. ಸೌತ್ ಸಿನಿಮಾಗಳನ್ನ ತೆಗಳುತ್ತಲೇ ಸೌತ್ ಮಂದಿ ಜೊತೆ ನಟಿಸುತ್ತಾ, ನಮ್ಮ ಸಿನಿಮಾಗಳ ಡೈಲಾಗ್​ಗಳನ್ನ ಅಲ್ಲಲ್ಲಿ ಬಳಸುತ್ತಾ ಶೋಕಿ ಮಾಡ್ತಾರೆ. ಹೌದು.. ಅಜಯ್ ದೇವಗನ್ ಯಾವುದೋ ಸಿನಿಮಾದ ಶೂಟಿಂಗ್ ವೇಳೆ ಕ್ಯಾಮೆರಾ ಜೊತೆ ಪೋಸ್ ಕೊಟ್ಟಿರೋ ಸ್ಟಿಲ್ಸ್ ಜೊತೆ ಸೋಶಿಯಲ್ ಮೀಡಿಯಾದಲ್ಲಿ ಲೋಡ್, ಏಯ್ಮ್, ಶೂಟ್ ಅಂತ ಬರೆದುಕೊಂಡಿದ್ದಾರೆ.

ರಾಜಮೌಳಿಯ ತ್ರಿಬಲ್ ಆರ್ ಚಿತ್ರದ ಆ ಡೈಲಾಗ್ ಅವರದ್ದೇ ಇರಬಹುದು. ಆದ್ರೆ ಸೌತ್ ಸಿನಿಮಾಗಳನ್ನ ತೆಗಳೋಕೂ ಮುನ್ನ ಇದೆಲ್ಲವೂ ಅವ್ರ ಗಮನದಲ್ಲಿರಬೇಕು. ಹೇಳಬೇಕು ಅಂದ್ರೆ ಲೋಡ್ ಏಯ್ಮ್ ಶೂಟ್ ಡೈಲಾಗ್ ಕೆಜಿಎಫ್-2ನಲ್ಲಿ ನಮ್ಮ ರಾಕಿಭಾಯ್​ಗೆ ಹೇಳಿ ಮಾಡಿಸಿದಂತಿದೆ. ಕಾರಣ ದೊಡ್ಡ ದೊಡ್ಡ ಗನ್​ಗಳನ್ನ ಹಿಡಿದು ಗುಂಡಿನ ಸುರಿಮಳೆ ಸುರಿಸಿರೋದು ನ್ಯಾಷನಲ್ ಸ್ಟಾರ್ ಯಶ್.

ಇದೆಲ್ಲಾ ಏನೇ ಇರಲಿ, ಪಾನ್ ಮಸಾಲ ಌಡ್ಸ್ ಮಾಡೋದು ಬಿಟ್ಟು, ಈ ರೀತಿ ಡೈಲಾಗ್ ಶೋಕಿಗಳು ಹಾಗೂ ಭಾಷಾಭಿಮಾನ ಮರೆಯೋದ್ರ ಬದಲಿಗೆ ಒಳ್ಳೆಯ ಸಿನಿಮಾಗಳನ್ನ ಮಾಡಿದ್ರೆ ಅವರಿಗೇ ಒಳಿತು. ಇತ್ತ ಇಂಡಸ್ಟ್ರಿ ಏಳಿಗೆಗೂ ಪೂರಕ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES