Friday, May 17, 2024

ಮಾವಿನಕಾಯಿ ಚಿತ್ರಾನ್ನ ಮಾಡುವುದು ಹೇಗೆ..?

ಇದು ಮಾವು ಸೀಸನ್​ ಈ ಸೀಸನ್​ ಅಂದ್ರೆ ಸಾಕು ಮಾವಿನಕಾಯಿ ಮತ್ತು ಮಾವಿನ ಹಣ್ಣು ಇವುಗಳನ್ನು ಬಳಸಿ ಬಗೆ ಬಗೆಯ ತಿಂಡಿ-ತಿನಸುಗಳನ್ನು ಮಾಡಿ ತಿನ್ನುವ ಸಮಯ. ಅದರಲ್ಲಿ ಹಸಿ ಮಾವಿನಕಾಯಿಂದ ನೀವು ನೂರಕ್ಕು ಅಧಿಕ ಬಗೆಯ ಉಪ್ಪಿಟ್ಟು, ಗೊಜ್ಜು ಅಂತೆಲ್ಲಾ ಮಾಡಿ ಸವಿಯಬಹುದು. ಹಾಗಾದರೆ ಮಾವಿನಕಾಯಿಯ ಚಿತ್ರಾನ್ನ ಮಾಡುವುದು ಹೇಗೆ ಎಂದು ತಿಳಿಯೋಣ ಬನ್ನಿ.

ಬೇಕಾಗುವ ಸಾಮಾಗ್ರಿ :  

ಹುಳಿ ಕಡಿಮೆ ಇರುವ ಹಸಿ ಮಾವಿನಕಾಯಿ ಒಂದು
ಅಕ್ಕಿ ಒಂದೂವರೆ ಲೋಟ
ನೀರು ಮೂರು ಲೋಟ
ಚಮಚ ಎಣ್ಣೆ
ಈರುಳ್ಳಿ
ಹಸಿ ಮೆಣಸು
ಸ್ವಲ್ಪ ಶೇಂಗಾ
ಚಮಚ ಕಡಲೆ ಬೇಳೆ
ಚಮಚ ಉದ್ದಿನ ಬೇಳೆ
ರುಚಿಗೆ ತಕ್ಕ ಉಪ್ಪು
ಸ್ವಲ್ಪ ಕರಿಬೇವು
ಸ್ವಲ್ಪ ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ : 
ಅನ್ನ ಮಾಡುವ ಹೊತ್ತಿನಲ್ಲಿ ಮಾವಿನ ಕಾಯಿ ಸಿಪ್ಪೆ ಸುಲಿದು ತುರಿದಿಡಿ. ನಂತರ ಈರುಳ್ಳಿ ಹಸಿ ಮೆಣಸು ಕತ್ತರಿಸಿ ಇಡಿ. ಈಗ ಪ್ಯಾನ್​ ಎಣ್ಣೆ ಹಾಕಿ ಬಿಸಿಮಾಡಿ, ಎಣ್ಣೆ ಬಿಸಿಯಾದಾಗ ಕಡಲೆ ಬೀಜ , ಉದ್ದು, ಶೇಂಗಾ ಬೀಜ ಹಾಕಿ ಒಂದೆರಡು ನಿಮಿಷ ಹುರಿತಾಯಿರಿ ನಂತರ ಕರಿಬೇವು ಹಾಕಿ ಈರುಳ್ಳಿ ಹಸಿ ಮೆಣಸು ಹಾಕಿ ಸ್ವಲ್ಪ ಪ್ರೈ ಮಾಡಿದರೆ ಸಾಕು. ಈಗ ತರಿದ ಮಾವಿನಕಾಯಿ ತುರಿ ಹಾಜಿ ಚಿಕ್ಕ ಚಮಚದಲ್ಲಿ 2 ಚಮಚ ರುಚಿಗೆ ತಕ್ಕಂತೆ ಉಪ್ಪು, 1/2 ಚಮಚ ಅರಶಿಣ ಪುಡಿ ಹಾಕಿ 5 ನಿಮಿಷ ಬೇಯಿಸಿ ಸ್ಟೌವ್​ ಆಫ್​ ಮಾಡಿ ಈಗ ರೆಡಿಯಾದ ಗೊಜ್ಜುವಿಗೆ ಅನ್ನ ಚೆನ್ನಾಗಿ ಮಿಕ್ಸ್​ ಮಾಡಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಮಾವಿನಕಾಯಿ ಗೊಜ್ಜು ರೆಡಿ.

 

RELATED ARTICLES

Related Articles

TRENDING ARTICLES