ಬೆಂಗಳೂರು : ಕೊರೊನಾದಿಂದಾಗಿ 2 ವರ್ಷಗಳಿಂದ ಸರಿಯಾಗಿ ನಡೆಯದಿದ್ದ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಭೌತಿಕ ತರಗತಿಗಳು ಜೂನ್ 9 ರ ಇಂದಿನಿಂಧ ಪೂರ್ಣ ಪ್ರಮಾಣದಲ್ಲಿ ಅರಂಭವಾಗಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.ಪ್ರಥಮ ಮತ್ತು ದ್ವಿತೀಯ ಪಿಯುಸಿ 2022-23 ನೇ ಸಾಲಿನ ತರಗತಿಗಳು ಆರಂಭವಾಗಲಿದ್ದು, ತರಗತಿ ಆರಂಭಕ್ಕೆ ಪದವಿಪೂರ್ವ ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ಪದವಿ ಪೂರ್ವ ಶಿಕ್ಷಣ ಇಲಾಖೆಯು ಕೊರೊನಾ ನಿಯಂತ್ರಣದಲ್ಲಿ ಇರುವುದರಿಂದ ಕಾಲೇಜು ಪ್ರಾರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಈಗಾಗಲೇ ಕಾಲೇಜು ಪ್ರಾರಂಭಕ್ಕೆ ಪಿಯುಸಿ ಬೋರ್ಡ್ ಮಾರ್ಗಸೂಚಿ ಮತ್ತು ವೇಳಾಪಟ್ಟಿ ಪ್ರಕಟ ಮಾಡಿದೆ. ನಾಳೆಯಿಂದ ಪಿಯು ಕಾಲೇಜುಗಳಲ್ಲಿ ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ. ಈ ವರ್ಷದಿಂದ ಕಡ್ಡಾಯವಾಗಿ ಸಮವಸ್ತ್ರ ನಿಯಮ ಪಾಲನೆ ಮಾಡಬೇಕು ಎಂದು ಆದೇಶ ಹೊರಡಿಸಿದೆ.