Friday, April 19, 2024

ಪ್ಯಾರಾ ವಿಶ್ವಕಪ್​ನಲ್ಲಿ ಅವನಿ ಲೇಖರಾಗೆ ಚಿನ್ನ

2021ರಲ್ಲಿ ನಡೆದ ಟೋಕಿಯೋ ಪ್ಯಾರಾಲಿಂಪಿಕ್ಸ್​​ನಲ್ಲಿ ರಾಜಸ್ಥಾನದ ಅವನಿ ಲೇಖರಾ ಚಿನ್ನ ಗೆದ್ದಿದ್ದರು. ಈಗ ಅಂತಹದ್ದೇ ಇನ್ನೊಂದು ಸಾಧನೆಯನ್ನು ಅವರು ಪುನರಾವರ್ತಿಸಿದ್ದಾರೆ.

ಪ್ಯಾರಾ ಶೂಟಿಂಗ್​ ವಿಶ್ವಕಪ್​ ನಲ್ಲಿ ವಿಶ್ವ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದಾರೆ. 10 ಮೀ. ಏರ್​​ ರೈಫಲ್​ ಎಸ್​​ಎಚ್​ 1 ವಿಭಾಗದಲ್ಲಿ 250.6 ಸ್ಕೋರ್​ ಮಾಡುವ ಮೂಲಕ ವಿಶ್ವದಾಖಲೆಯನ್ನು ಸೃಷ್ಟಿಸಿದ್ದಾರೆ. ತನ್ನ 20 ನೇ ವಯಸ್ಸಿನಲ್ಲಿ ಏರ್​ ರೈಫಲ್​​ನಲ್ಲಿ ಲಖೇರಾ 249.6 ಸ್ಕೋರ್​ ಮಾಡಿದ್ದರು. ಈಬಾರಿ ಅವರ ದಾಖಲೆಯನ್ನು ಅವರೇ ಮುರಿದಿದ್ದಾರೆ. ಈ ಗೆಲುವು ಅವನಿ ಲೆಖರಾ ಅವರಿಗೆ 2024 ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಥಾನವನ್ನು ಖಚಿತಪಡಿಸಿದೆ

RELATED ARTICLES

Related Articles

TRENDING ARTICLES