Tuesday, April 23, 2024

2006ರ ಮಾ.7 ರಂದು ವಾರಾಣಸಿಯಲ್ಲಿ ನಡೆದಿತ್ತು ಸರಣಿ ಸ್ಫೋಟ

ವಾರಾಣಸಿ : 2006ರ ಮಾರ್ಚ್ 7 ರಂದು, ವಾರಣಾಸಿಯ ಸಂಕಟಮೋಚನ ದೇವಸ್ಥಾನ ಮತ್ತು ರೈಲ್ವೆ ಕ್ಯಾಂಟ್ನಲ್ಲಿ ಭೀಕರ ಬಾಂಬ್ ಸ್ಫೋಟಗಳು ಸಂಭವಿಸಿದವು. 16 ವರ್ಷಗಳ ನಡೆದ ವಿಚಾರಣೆಯ ಬಳಿಕ, ಇಂದು ಗಾಜಿಯಾಬಾದ್ನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಭಯೋತ್ಪಾದಕ ವಲಿಯುಲ್ಲಾನಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.

2006ರ ಮಾ.7… ವಾರಣಾಸಿಯಲ್ಲಿ ಭೀಕರ ಬಾಂಬ್‌ ಸ್ಫೋಟಗಳ ಸದ್ದು ಜನರ ಎದೆ ಝಲ್‌ ಎನ್ನುವಂತೆ ಮಾಡಿತ್ತು..
ಹೌದು, ಸಂಕಟಮೋಚನ ದೇವಸ್ಥಾನದಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಇದಾದ 15 ನಿಮಿಷದ ಬಳಿಕ, ವಾರಣಾಸಿ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದ ವಿಶ್ರಾಂತಿ ಗೃಹದಲ್ಲಿ ಸ್ಪೋಟ ಸಂಭವಿಸಿತ್ತು. ದಶಾಶ್ವಮೇಧ ಘಾಟ್‌ನ ಹಳಿಯ ಬಳಿಯೂ ಕುಕ್ಕರ್ ಬಾಂಬ್ ಪತ್ತೆಯಾಗಿತ್ತು.

ಅಂದಿನ ಘಟನೆಯ ಪ್ರಮುಖ ಆರೋಪಿ ವಲೀವುಲ್ಲಾ ಖಾನ್‌ಗೆ ಗಾಜಿಯಾಬಾದ್ನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿದೆ. ಸರಣಿ ಸ್ಫೋಟದ ಆರೋಪಿ ವಲಿಯುಲ್ಲಾ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ.. ಈ ಪ್ರಕರಣದಲ್ಲಿ 16 ವರ್ಷಗಳ ನಂತರ ತೀರ್ಪು ಬಂದಿದೆ. ಇದಕ್ಕೂ ಮುನ್ನ ಮೇ 23 ರಂದು ವಾರಣಾಸಿ ಬಾಂಬ್ ಪ್ರಕರಣದ ವಿಚಾರಣೆಯನ್ನು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜಿತೇಂದ್ರ ಕುಮಾರ್ ಸಿನ್ಹಾ ಅವರ ನ್ಯಾಯಾಲಯದಲ್ಲಿ ನಡೆಸಲಾಗಿತ್ತು. ವಿಚಾರಣೆ ಆರಂಭಕ್ಕೂ ಮುನ್ನ ಆರೋಪಿ ವಲಿಯುಲ್ಲಾನನ್ನು ಬಿಗಿ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಎರಡೂ ಕಡೆಯ ವಾದವನ್ನು ಆಲಿಸಿದ ನಂತರ ಜೂನ್ 4 ರಂದು ವಿಚಾರಣೆಯನ್ನು ಅಂತ್ಯ ಮಾಡಿ ತೀರ್ಪು ಕಾಯ್ದಿರಿಸಲಾಗಿತ್ತು.

28 ಮಂದಿ ಸಾವಿಗೀಡಾಗಿದ್ದರೆ 101 ಮಂದಿ ಗಾಯಾಳು :

2006ರ ಮಾರ್ಚ್ 7 ರಂದು ವಾರಣಾಸಿಯ ಸಂಕಟಮೋಚನ ದೇವಾಲಯ, ರೈಲ್ವೇ ಕ್ಯಾಂಟೀನ್‌ನಲ್ಲಿ ಸ್ಪೋಟಗಳು ಸಂಭವಿಸಿದ್ದವು. ಇದರಲ್ಲಿ ಒಟ್ಟು 28 ಮಂದಿ ಸಾವಿಗೀಡಾಗಿದ್ದರೆ 101 ಮಂದಿ ಗಾಯಾಳುವಾಗಿದ್ದರು. ಇದಲ್ಲದೆ, ದಶಾಶ್ವಮೇಧ ಘಾಟ್‌ನಲ್ಲಿ ಕುಕ್ಕರ್ ಬಾಂಬ್ ಕೂಡ ಪತ್ತೆಯಾಗಿತ್ತು. ಹೈಕೋರ್ಟ್‌ನ ಆದೇಶದ ಮೇರೆಗೆ ಪ್ರಕರಣವನ್ನು ವಿಚಾರಣೆಗಾಗಿ ಗಾಜಿಯಾಬಾದ್‌ಗೆ ವರ್ಗಾಯಿಸಲಾಯಿತು.

ಪ್ರಕರಣದಲ್ಲಿ ದೋಷಿಯ ಪರವಾಗಿ ವಾದಮಾಡಲು ವಾರಾಣಸಿ ಕೋರ್ಟ್‌ನ ವಕೀಲರು ನಿರಾಕರಿಸಿದ್ದರು. ಕೊನೆಗೆ ಅಲಹಬಾದ್ ಹೈಕೋರ್ಟ್ ಪ್ರಕರಣರವನ್ನು ಗಾಜಿಯಾಬಾದ್ ಜಿಲ್ಲಾ ಕೋರ್ಟ್‌ಗೆ ವರ್ಗಾವಣೆ ಮಾಡಿತ್ತು. ಒಟ್ಟಾರೆ 121 ಸಾಕ್ಷಿಗಳ ವಿಚಾರಣೆ ನಡೆಸಿ ಕೋರ್ಟ್ ತೀರ್ಪು ನೀಡಿದೆ.

ಬಾಂಗ್ಲಾದೇಶದ ಭಯೋತ್ಪಾದಕ ಸಂಘಟನೆ ‘ಹರ್ಕತ್-ಉಲ್-ಜೆಹಾದ್ ಅಲ್ ಇಸ್ಲಾಮಿ’ಯ ಸದಸ್ಯನಾಗಿದ್ದ ವಲೀಯುಲ್ಲಾ ಖಾನ್. ಏಪ್ರಿಲ್ 2006 ರಲ್ಲಿ ಸ್ಫೋಟಗಳ ತನಿಖೆ ನಡೆಸುತ್ತಿದ್ದ ವಿಶೇಷ ಕಾರ್ಯಪಡೆ, ಪ್ರಮುಖ ಆರೋಪಿ ವಲಿಯುಲ್ಲಾ ಖಾನ್‌ರನ್ನು ಬಂಧಿಸಿತ್ತು. ಈತ ಬಾಂಗ್ಲಾದೇಶದ ಭಯೋತ್ಪಾದಕ ಸಂಘಟನೆ ‘ಹರ್ಕತ್-ಉಲ್-ಜೆಹಾದ್ ಅಲ್ ಇಸ್ಲಾಮಿ’ ನೊಂದಿಗೆ ಸಂಪರ್ಕ ಹೊಂದಿದ್ದಾನೆ ಮತ್ತು ಸ್ಫೋಟದ ಹಿಂದಿನ ಮಾಸ್ಟರ್ ಮೈಂಡ್ ಆಗಿದ್ದ.. ಸದ್ಯ ಪ್ರಮುಖ ಆರೋಪಿಗೆ ತಕ್ಕ ಶಾಸ್ತಿಯಾಗಿದ್ದು, ಅಂದು ಸಾವನ್ನಪ್ಪಿದವರ ಕುಟುಂಬಸ್ಥರಿಂದ ಶಾಪ ತಟ್ಟಿದಂತಾಗಿದೆ.

ಬ್ಯೂರೋ ರಿಪೋರ್ಟ್‌ ಪವರ್‌ ಟಿವಿ

RELATED ARTICLES

Related Articles

TRENDING ARTICLES