ಡಬಲ್ ಧಮಾಕಾದ ಖುಷಿಯಲ್ಲಿದ್ದಾರೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ. ಒಂದ್ಕಡೆ ಬರ್ತ್ ಡೇ ಸಂಭ್ರಮ. ಮತ್ತೊಂದ್ಕಡೆ ನಾಲ್ಕು ವರ್ಷದ ಕನಸಿನ ಪ್ರಾಜೆಕ್ಟ್ 777 ಚಾರ್ಲಿ ರಿಲೀಸ್. ಕೇಕ್ ಕತ್ತರಿಸಿ ಸಿಹಿ ಸವಿಯೋದ್ರ ಜೊತೆ ಟಾಗ್ ಮೂವಿಯ ರಿಮೇಕಾ ಅಂತ ಕೇಳಿದ್ದಕ್ಕೆ ಹಂಡ್ರೆಡ್ ಪರ್ಸೆಂಟ್ ಕ್ಲ್ಯಾರಿಟಿ ಕೊಟ್ಟಿದ್ದಾರೆ.
- ಮೈ ಕೊಡವಿ ಎದ್ದು ಬಂದ ರಕ್ಷಿತ್ ಶೆಟ್ಟಿಗೆ ಡಬಲ್ ಧಮಾಕ
- ಕನ್ನಡದಲ್ಲಿ ರಿಲೀಸ್ಗೂ ಮೊದ್ಲೇ 100 ಪ್ರೀಮಿಯರ್ ಶೋ
- ಇದು ಟಾಗ್ ರಿಮೇಕ್ ಅಲ್ಲ ಅಂತ ಕ್ಲ್ಯಾರಿಟಿ ಕೊಟ್ಟ ರಕ್ಷಿತ್
- ಭಜರಂಗಿ ಭಾಯಿಜಾನ್ ಎಮೋಷನ್ ಬಗ್ಗೆ ಹೇಳಿದ್ದೇನು ?
ಅವನೇ ಶ್ರೀಮನ್ನಾರಾಯಣ ನಂತ್ರ ರಕ್ಷಿತ್ ಶೆಟ್ಟಿಯ ಮೋಸ್ಟ್ ಎಕ್ಸ್ಪೆಕ್ಟೆಡ್ ಮೂವಿ 777 ಚಾರ್ಲಿ ರಿಲೀಸ್ ಅಂಚಿಗೆ ಬಂದು ನಿಂತಿದೆ. ಶುಕ್ರವಾರ ಸಿನಿಮಾ ತೆರೆಗಪ್ಪಳಿಸುತ್ತಿದ್ದು, ಈಗಾಗ್ಲೇ ಡೆಲ್ಲಿ, ಪೂನಾ, ಅಮೃತ್ಸರ ಸೇರಿದಂತೆ ದೇಶದ ಹಲವೆಡೆ ಪ್ರೀಮಿಯರ್ ಕಂಡಿದೆ. ಎಲ್ಲೆಡೆಯಿಂದ ಒಳ್ಳೆಯ ರೆಸ್ಪಾನ್ಸ್ ಕೂಡ ಪಡೆದುಕೊಳ್ತಿದೆ. ಕಾರಣ ಚಿತ್ರದಲ್ಲಿರೋ ಚಾರ್ಲಿ ನಾಯಿ ಹಾಗೂ ಧರ್ಮ ನಡುವಿನ ಕೆಮಿಸ್ಟ್ರಿ ಹಾಗೂ ಇಂಟೆನ್ಸ್ ಎಮೋಷನ್ಸ್.
ಕಿರಣ್ ರಾಜ್ ನಿರ್ದೇಶನದ 777 ಚಾರ್ಲಿ ಈ ವಾರ ರಿಲೀಸ್ ಆಗ್ತಿದ್ದು, ಒಂದು ದಿನ ಮೊದಲೇ ಬರೀ ಕರ್ನಾಟಕದಲ್ಲೇ 100 ಪ್ರೀಮಿಯರ್ ಶೋ ಕಾಣ್ತಿದೆ. ಈ ಮೂಲಕ ಬಹುದೊಡ್ಡ ದಾಖಲೆ ಬರೆಯಲಿದೆ. ಕರ್ನಾಟಕದ ಜೊತೆಗೆ ಓವರ್ಸೀಸ್ ಡಿಸ್ಟ್ರಿಬ್ಯೂಷನ್ ಮಾಡ್ತಿರೋ ಕೆಆರ್ಜಿಯ ಕಾರ್ತಿಕ್ ಗೌಡ ಈ ಕುರಿತು ಮಾಹಿತಿ ನೀಡಿದ್ರು.
ಸಂಗೀತ ಶೃಂಗೇರಿ ನಾಯಕಿಯಾಗಿ ನಟಿಸಿದ್ದು, ಆದ್ಯ ಅನ್ನೋ ಬಾಲನಟಿಯೂ ಪ್ರಧಾನ ಪಾತ್ರ ಪೋಷಿಸಿದ್ದಾರೆ. ಸಿನಿಮಾದ ಬಗ್ಗೆ ಹಾಗೂ ತಮ್ಮ ಪಾತ್ರಗಳ ಬಗ್ಗೆ ಇವ್ರು ಒಂದಷ್ಟು ಇಂಟರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡ್ರು.
ಇನ್ನು ಕೇಕ್ ಕತ್ತರಿಸಿ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಳ್ಳೋದ್ರ ಜೊತೆಗೆ ಬರ್ತ್ ಡೇ ಬಾಯ್ ರಕ್ಷಿತ್, ನಮ್ಮ ಫಿಲ್ಮಿ ಪವರ್ ಟೀಂ ಜೊತೆ ಎಕ್ಸ್ಕ್ಲೂಸಿವ್ ಆಗಿ ಮಾತನಾಡಿದ್ರು. ಇದು ಸಲ್ಮಾನ್ ಖಾನ್ರ ಭಜರಂಗಿ ಭಾಯಿಜಾನ್ ಎಮೋಷನ್ ಖಂಡಿತಾ ಹೌದು ಎಂದ್ರು. ಜೊತೆಗೆ ಹಾಲಿವುಡ್ನ ಟಾಗ್ ಚಿತ್ರಕ್ಕೂ ಇದಕ್ಕೂ ಸಂಬಂಧ ಇಲ್ಲ. ರಿಮೇಕ್ ಅಲ್ಲ ಅಂತ ಸ್ಪಷನೆ ನೀಡಿದ್ರು.
ಇದು ನಿಜಕ್ಕೂ ಸ್ಯಾಂಡಲ್ವುಡ್ ಮಟ್ಟಿಗೆ ಒಂದು ವಿನೂತನ ಪ್ರಯೋಗವಾಗಿದ್ದು, ರಕ್ಷಿತ್ ಕರಿಯರ್ಗೆ ಕಿರಿಕ್ ಪಾರ್ಟಿ ಬಳಿಕ ಅಂಥದ್ದೊಂದು ದೊಡ್ಡ ಬ್ರೇಕ್ ಸಿಗೋದು ಪಕ್ಕಾ ಆಗಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ