Wednesday, January 22, 2025

ಒಡನಾಡಿ ಚಾರ್ಲಿಗೆ ಮನಮಿಡಿದು ಬಿಕ್ಕಿ ಬಿಕ್ಕಿ ಅತ್ತರು

ರಕ್ಷಿತ್​, ಚಾರ್ಲಿ ಫ್ರೆಂಡ್ಶಿಪ್​ಗೆ ಕಣ್ಣಂಚಲ್ಲಿ ಕಂಬನಿ ಜಾರಿದೆ. ಟ್ರೈಲರ್​ ನೋಡಿ ಭಾವುಕರಾಗಿದ್ದ ಚಿತ್ರರಸಿಕರ ನಿರೀಕ್ಷೆ ಡಬಲ್​ ಆಗಿದೆ. ಪ್ರೀಮಿಯರ್ ಶೋ ನೋಡಿದ ಪ್ರೇಕ್ಷಕರು ಕಣ್ಣೀರಲ್ಲೆ ಕೈತೊಳೆದಿದ್ದಾರೆ. ಯೆಸ್​​.. 777 ಚಾರ್ಲಿ ಎಲ್ಲರ ಹೃದಯ ತಟ್ಟಿದ್ದಾನೆ. ಮಿಕ್ಸ್ಡ್​​ ಎಮೋಷನ್ಸ್​​ಗೆ ಬಿಕ್ಕಿ ಬಿಕ್ಕಿ ಅಳ್ತಾ ಥಿಯೇಟರ್​ನಿಂದ ಹೊರ ಬಂದಿದ್ದಾನೆ. ಅಸಲಿಗೆ ರಕ್ಷಿತ್​ ಶೆಟ್ಟಿ, ಚಾರ್ಲಿ ಕಾಂಬೋಗೆ ಪ್ರೇಕ್ಷಕರು ಏನಂತಾರೆ.? ನೀವೇ ಓದಿ.

  • 777ಚಾರ್ಲಿಗೆ ಭರ್ಜರಿ ರೆಸ್ಪಾನ್ಸ್​​.. 5 ಸ್ಟಾರ್​​ ರೇಟಿಂಗ್

ಚಿತ್ರರಂಗದ ಗಂಧ ಗಾಳಿಯೇ ಗೊತ್ತಿಲ್ಲದ ರಕ್ಷಿತ್​​ ಶೆಟ್ಟಿ ಕಿರುಚಿತ್ರಗಳ ಮೂಲಕ ಬಣ್ಣದ ಲೋಕಕ್ಕೆ ಜಿಗಿದ್ರು. ಸ್ಯಾಂಡಲ್​ವುಡ್​​ ಸ್ಟಾರ್​ ನಿರ್ದೇಶಕರು, ಕಲಾವಿದರು ಕೂಡ ರಕ್ಷಿತ್​ ಆ್ಯಕ್ಟಿಂಗ್​​, ಟೆಕ್ನಿಕಲ್​ ಮೈಂಡ್​​ಗೆ ಮಾರು ಹೋಗಿದ್ದಾರೆ. ಇನ್ನೂ, 777ಚಾರ್ಲಿ ಟ್ರೈಲರ್​ ನೋಡಿ, ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಸಿನಿಮಾ ಮೇಲಿನ ಪ್ಯಾಶನ್​​, ಕ್ರೇಜ್​​ , ಸಿಂಪಲ್​ ಸ್ಟಾರ್​ ಆಗಿದ್ದ ರಕ್ಷಿತ್​ರನ್ನ ಪ್ಯಾನ್​ ಇಂಡಿಯಾ ಸೂಪರ್​​ ಸ್ಟಾರ್​ ಮಾಡಿದೆ.

ಕನ್ನಡ ಸಿನಿಮಾಗಳನ್ನು ಇಂಟರ್​​ನ್ಯಾಷನಲ್​ ಲೆವೆಲ್​ಗೆ ರೀಚ್​ ಮಾಡೋಕೆ ರಕ್ಷಿತ್​​ ಅವ್ರ ಪರಿಶ್ರಮ ದೊಡ್ಡದು. ಇದೀಗ, ರಿಲೀಸ್​ಗೂ ಮುನ್ನವೇ ಚಾರ್ಲಿ ಎಲ್ಲರ ಕಣ್ಣಂಚಲ್ಲಿ ನೀರು ತರಿಸಿದ್ದಾನೆ.ದೇಶದ 21 ಮಹಾನಗರಗಳಲ್ಲಿ 777ಚಾರ್ಲಿ ಚಿತ್ರದ ಪ್ರೀಮಿಯರ್​ ಶೋ ಶುರುವಾಗಿದೆ. ಮುಗಿಬಿದ್ದು ಟಿಕೆಟ್​ ಖರೀದಿ ಮಾಡಿ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಆದ್ರೆ, ಚಾರ್ಲಿ ಮಾತ್ರ ಥಿಯೇಟರ್​ ಒಳಗಿದ್ದ ಪ್ರೇಕ್ಷಕರ ಮನಸ್ಸು ಮುಟ್ಟಿ ಬಿಕ್ಕಿ ಬಿಕ್ಕಿ ಅಳಿಸಿದ್ದಾನೆ.

  • ಕಂಪ್ಲೀಟ್​ ಎಮೋಷನಲ್​​ ಜರ್ನಿ.. ಕಾಡುವ ಚಾರ್ಲಿ ನೆನಪು
  • ಮನೆಯ ಮುದ್ದಿನ ನಾಯಿ ನೆನೆದು ಭಾವುಕರಾದ ಪ್ರೇಕ್ಷಕರು

ದೇಶದ 21 ಮಹಾನಗರಗಳ ಪೈಕಿ, ದಹಲಿ, ಅಮೃತ್​ಸರ, ಲಕ್ನೋದಲ್ಲಿ ಈಗಾಗಲೇ 777 ಚಾರ್ಲಿ ಚಿತ್ರದ ಪ್ರೀಮಿಯರ್​ ಶೋ ನಡೆದಿದೆ. ಲೋಕಸಭಾ ಸದಸ್ಯೆ ಮನೇಕಾ ಗಾಂಧೀ ದೆಹಲಿಯಲ್ಲಿ ಸಿನಿಮಾ ವೀಕ್ಷಣೆ ಮಾಡಿ ಭಾವುಕರಾಗಿದ್ದಾರೆ. ಜೀವನದ ಅತ್ಯುತ್ತಮ ಚಿತ್ರವನ್ನು ನೋಡಿದ ಫೀಲ್ ಆಗಿದೆಯಂತೆ. ಸಿನಿಮಾ ನೋಡಿ ಹೊರಬಂದ ಮೇಲೆ ಪ್ರೇಕ್ಷಕರಿಗೆ ಮಾತೇ ಬಾರದಾಗಿದೆ. ಗಂಟಲು ಒಣಗಿದೆ. ಹೃದಯ ಸ್ತಬ್ಧವಾಗಿದೆ. ಚಾರ್ಲಿ, ಧರ್ಮ ಪಾತ್ರಗಳು ಮನೆಗೆ ಬಂದ ಮೇಲೂ ಬಿಟ್ಟು ಬಿಡದೆ ಕಾಡುತ್ತಿವೆ.

ಮಾತೇ ಬಾರದ ಜೀವಿ ನಾಯಿಯೊಂದಿಗೆ ರಕ್ಷಿತ್​​ ಜೊತೆಗಿನ ಬಿಟ್ಟಿರಲಾಗದ ಗಟ್ಟಿ ಸಂಬಂಧವನ್ನು ಚಿತ್ರದಲ್ಲಿ ತೋರಿಸಲಾಗಿದೆ. ಧರ್ಮನ ರೋಲ್​​ ಮಾಡಿರೋ ರಕ್ಷಿತ್​ಗೆ ಚಾರ್ಲಿ ಬಿಟ್ಟರೆ ಬೇರೆ ಪ್ರಪಂಚವಿಲ್ಲ. ಸಿನಿಮಾದ ಆರಂಭದಲ್ಲಿ ನಕ್ಕು ನಗಿಸೋ 777 ಚಾರ್ಲಿ, ಕೊನೆ ಕೊನೆಗೆ ಎಲ್ಲರ ಹೃದಯ ಹಿಂಡಿದ್ದಾನೆ. ಚಿತ್ರದ ಪ್ರತಿ ಸನ್ನಿವೇಶಗಳು ಭಾವನೆಗಳ ಮೋಡದಲ್ಲಿ ಮೌನ ತಾಳುವಂತೆ ಮಾಡಿವೆ. ಕೆಲವು ದೃಶ್ಯಗಳು ಚಿತ್ರಪ್ರೇಮಿಗಳನ್ನು ಸೀಟಿನ ತುದಿಗೆ ತಂದು ನಿಲ್ಲಿಸಿವೆ.

ಒಟ್ಟು  ಐದು ಭಾಷೆಗಳಲ್ಲಿ ಜೂನ್​ 10ಕ್ಕೆ ಪ್ರಪಂಚದಾದ್ಯಂತ 777ಚಾರ್ಲಿಯ ಎಮೋಷನಲ್​ ಜರ್ನಿ ಶುರುವಾಗಲಿದೆ. ಪರಮ್​ ವ್ಹಾ ಸ್ಟುಡಿಯೋಸ್​ ಬ್ಯಾನರ್​ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದ್ದು, ಜಿ. ಎಸ್​ ಗುಪ್ತಾ ಹಾಗೂ ರಕ್ಷಿತ್​ ಶೆಟ್ಟಿ ಬಂಡವಾಳ ಹೂಡಿದ್ದಾರೆ.  ಕಿರಣ್​​ ರಾಜ್​​ ಆ್ಯಕ್ಷನ್​ ಕಟ್​​ ಹೇಳಿರೋ ಚಿತ್ರದಲ್ಲಿ ರಕ್ಷಿತ್​ಗೆ ನಾಯಕಿಯಾಗಿ ಸಂಗೀತಾ ಶೃಂಗೇರಿ ನಟಿಸಿದ್ದಾರೆ. ರಾಜ್​​.ಬಿ.ಶೆಟ್ಟಿ, ಗೋಪಾಲಕೃಷ್ಣ ದೇಶಪಾಂಡೆ, ಭಾರ್ಗವಿ ಸೇರಿದಂತೆ ಕಲಾವಿದರ ದಂಡೇ ಇದೆ. ಒಟ್ಟಾರೆ ಜೂನ್​ 10ಕ್ಕೆ ಚಾರ್ಲಿ ದರ್ಬಾರ್​ ಶುರುವಾಗೋದು ಪಕ್ಕಾ ಆಗಿದೆ.

ರಾಕೇಶ್​​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES