Wednesday, January 22, 2025

ಹೊಸ ಅಲೆ..ಹೊಸ ಪ್ರಯತ್ನ.. ‘ತುರ್ತು ನಿರ್ಗಮನ’..!

ನಿಮಗೆಲ್ಲಾ ಎಮರ್ಜೆನ್ಸಿ ಎಕ್ಸಿಟ್​ ಮೂಲಕ ಹೊರಗೆ ಹೋಗೋದು ಗೊತ್ತು. ಆದ್ರೇ, ತುರ್ತು ನಿರ್ಗಮನದ   ಮೂಲಕ ಡಿಫರೆಂಟ್​​ ಆಗಿ ಬಣ್ಣದ ಲೋಕದೊಳಗೆ ಎಂಟ್ರಿ ಕೊಟ್ಟಿದ್ದಾರೆ ಎಕ್ಸ್​​ಕ್ಯೂಸ್​​​ಮಿ ಸುನೀಲ್​​. 12 ವರ್ಷಗಳ ನಂತ್ರ ಮತ್ತೆ ಸ್ಯಾಂಡಲ್​ವುಡ್​ನಲ್ಲಿ ಮಿಂಚೋಕೆ ರೆಡಿಯಾಗಿದ್ದಾರೆ. ಈಗಾಗ್ಲೇ ಹಲ್​ಚಲ್​ ಎಬ್ಬಿಸಿದೆ ತುರ್ತು ನಿರ್ಗಮನ ಚಿತ್ರದ ಟ್ರೈಲರ್​.

  • ​ಲೆಟೆಸ್ಟ್​ ಆಗಿ ಎಂಟ್ರಿ ಕೊಟ್ರು ‘ಎಕ್ಸ್​​ ಕ್ಯೂಸ್ ​ಮೀ’ ಸುನಿಲ್​
  • ಹೊಸ ಅಲೆ..ಹೊಸ ಪ್ರಯತ್ನ.. ‘ತುರ್ತು ನಿರ್ಗಮನ’..!
  • ‘ತುರ್ತು ನಿರ್ಗಮನ’ ಸೂಪರ್​ ಟ್ರೈಲರ್​ಗೆ ಬಹುಪರಾಕ್​​​
  • ಚಿತ್ರದ ರೋಲ್​ ಬಗ್ಗೆ ಅಚ್ಚರಿ ಮಾಹಿತಿ ಬಿಚ್ಚಿಟ್ಟ ಸುನೀಲ್​​​

ಚೈಲ್ಡ್​ ಆರ್ಟಿಸ್ಟ್​ ಆಗಿ ಮಿಂಚಿ, ಕನ್ನಡಿಗರ ಮನಸ್ಸು ಕದ್ದಿದ್ದ ಪ್ರತಿಭಾನ್ವಿತ ನಟ ಸುನೀಲ್​. ಸಾರಿ, ಎಕ್ಸ್​​ಕ್ಯೂಸ್​​ ಮಿ ಸುನೀಲ್​​. ಅಭಿನಯ ಚತುರ ಅಂದ್ರೆ ತಪ್ಪಾಗಲಾರದು. ಯಾವ ಸೂಪರ್​ ಸ್ಟಾರ್ ತೂಕಕ್ಕೂ ಕಮ್ಮಿಯಿಲ್ಲದಂತೆ ಆ್ಯಕ್ಟ್ ಮಾಡೋ ಮಲ್ಟಿ ಟ್ಯಾಲೆಂಟೆಡ್​​​. ಆದ್ರೇ, ಸುನೀಲ್​ಗೆ ಎಕ್ಸ್​​ಕ್ಯೂಸ್​​ಮಿ ತಂದು ಕೊಟ್ಟ ಯಶಸ್ಸು ಕಂಟಿನ್ಯೂ ಆಗಲಿಲ್ಲ. ಸುನೀಲ್​ ನಟಿಸಿದ ಸಿನಿಮಾಗಳು ತಕ್ಕ ಮಟ್ಟಿಗೆ ಹೆಸರು ಮಾಡಲಿಲ್ಲ.

ಬಾ ಬಾರೋ ರಸಿಕ, ಚಪ್ಪಾಳೆ, ಬೆಳ್ಳಿ ಬೆಟ್ಟ ಚಿತ್ರಗಳು ನಿರೀಕ್ಷೆ ಮೂಡಿಸಿದ್ರೂ ಕೂಡ ಮನಸ್ಸು ತಟ್ಟಲಿಲ್ಲ. ಬಾಕ್ಸ್​​ ಆಫೀಸ್​ ಲೂಟಿ ಮಾಡೋ ಗೋಜಿಗೂ ಹೋಗಲಿಲ್ಲ. ಪ್ರೇಮಿಸಂ ಚಿತ್ರದಲ್ಲಿ ಗೆಸ್ಟ್​ ಅಪಿಯರೆನ್ಸ್​ ರೋಲ್​ನಲ್ಲಿ ಮಿಂಚಿದ್ದ ಸುನೀಲ್,​ ಸಿನಿಮಾ ಸಹವಾಸವೇ ಸಾಕಪ್ಪ ಅಂತಾ ದೂರ ಉಳಿದುಬಿಟ್ಟಿದ್ರು. ಲೂಸ್​​ ಕನೆಕ್ಷನ್​​​​ ವೆಬ್​ ಸೀರೀಸ್​ಗಳ ಮೂಲಕ ಅಲ್ಪ ಸ್ವಲ್ಪ ಆ್ಯಕ್ಟಿವ್​ ಆಗಿದ್ರು. ಬಹುತೇಕ ಚಿತ್ರರಂಗದಿಂದ ಬಹುದೂರ ಉಳಿದುಬಿಟ್ರಾ ಅನ್ನೋ ಅನುಮಾನ ಶುರುವಾಗಿತ್ತು. ಇದೀಗ ತುರ್ತು ನಿರ್ಗಮನ ಸಿನಿಮಾ ಮೂಲಕ ಮತ್ತೆ ಕಂಬ್ಯಾಕ್​ ಆಗಿದ್ದಾರೆ.

ತಡವಾದ್ರೂ ಜಡವಾಗಬಾರದು ಎಂಬ ಗಾದೆಯಿದೆ. ಯೆಸ್​​.. ಸುನೀಲ್​ ಈ ಪಾಟಿ ಗ್ಯಾಪ್​ ಯಾಕೆ ತೆಗೆದುಕೊಂಡ್ರೋ ಗೊತ್ತಿಲ್ಲ. ಆದ್ರೇ, ತುರ್ತು ನಿರ್ಗಮನ ಟ್ರೈಲರ್​ ಮಾತ್ರ ಚಿಂದಿಯಾಗಿ ಮೂಡಿ ಬಂದಿದೆ. ರಿಲೀಸ್​ ಅದ ಕೆಲವೇ ಕ್ಷಣಗಳಲ್ಲಿ ಲಕ್ಷಾಂತರ ವ್ಯೂ ಕಂಡಿದೆ. ಏನ್​ ಗುರು ನೀವ್​..!!!. ಪಕ್ಕಾ ಪ್ರಾಮಿಸಿಂಗ್​ ಟ್ರೈಲರ್​ ಇದು ಅಂತಿದಾರೆ ಫ್ಯಾನ್ಸ್​​.  ಚಿತ್ರದಲ್ಲಿ ಸುನೀಲ್​ಗೆ ನಾನೇನ್​ ಆಗಬೇಕು ಅನ್ನೋ ಕ್ಲ್ಯಾರಿಟಿ ಇಲ್ಲ. ಸಾಲ ಮಾಡೋಕು ನಾಚಲ್ಲ. ಲೇಜಿ ಫೆಲೋ ಪಾತ್ರದಲ್ಲಿ ಸುನೀಲ್​ ರಾವ್​ ಸಖತ್​ ಥ್ರಿಲ್ಲಿಂಗ್​ ರೋಲ್​ ಲೀಡ್​ ಮಾಡಿದ್ದಾರೆ. ನನ್ ಜೀವನದ ಮರೆಯಲಾಗದ ಪಾತ್ರ ಅಂತಾರೆ ಸುನೀಲ್.

ರಾಜ್​​ ಬಿ ಶೆಟ್ಟಿ, ಸುಧಾರಾಣಿ, ಅಚ್ಯುತ್​ ಕುಮಾರ್​ ತಮ್ಮ ಪಾತ್ರಗಳ ಮೂಲಕ ಪ್ರೇಕ್ಷಕರಿಗೆ ಸಖತ್​ ಎಗ್ಸೈಟಿಂಗ್​ ಫೀಲ್​ ಕೊಟ್ಟಿದ್ದಾರೆ. ಟ್ರೈಲರ್​​ನಲ್ಲಿ ಫನ್ನಿ ಸಂಭಾಷಣೆ ಹೊಸ ಕಿಕ್​ ಕೊಟ್ಟಿದೆ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾದಲ್ಲಿ ಕೆಲಸ ಮಾಡಿದ್ದ ಹೇಮಂತ್​ ಕುಮಾರ್​ , ಒಳ್ಳೆ ಸಬ್ಜೆಕ್ಟ್​ಗಾಗಿ ಕಾಯ್ತಾ ಇದ್ರು. ದುಡ್ಡು ಕೊಟ್ಟು ಬರೋ ಪ್ರೇಕ್ಷಕರಿಗೆ ಮೋಸ ಆಗಬಾರದು ಅನ್ನೋ ಕಾರಣಕ್ಕೆ ತಡವಾಗಿ ಬರ್ತಿದ್ದಾರೆ. ಒಂದೊಳ್ಳೆ ಪ್ರಯೋಗಾತ್ಮಕ ಚಿತ್ರಕ್ಕೆ ಆ್ಯಕ್ಷನ್ ಕಟ್​ ಹೇಳಿರೋ ಹೇಮಂತ್​​ಕುಮಾರ್​ ಸಿಕ್ಕಾಪಟ್ಟೆ ಕಾನ್ಫಿಡೆಂಟ್​ ಆಗಿದ್ದಾರೆ.

ನಟಿ ಸುಧಾರಾಣಿಗೆ ಈ ಸಿನಿಮಾ ಅದ್ಭುತ ಫೀಲ್​ ಕೊಟ್ಟಿದೆಯಂತೆ. ಕ್ರಿಕೆಟ್​ ಕೋಚ್ ಪಾತ್ರದಲ್ಲಿ ಸಂಯುಕ್ತಾ ಹೆಗಡೆ ಕಾಣಿಸಿಕೊಳ್ತಿದ್ದಾರೆ. ಪಕ್ಕಾ ವಿಷ್ಯುಯೆಲ್​ ಟ್ರೀಟ್​ ಸಿನಿಮಾ ಇದಾಗಲಿದೆಯಂತೆ. ಕ್ಯಾಬ್​ ಡ್ರೈವರ್​ ಪಾತ್ರದಲ್ಲಿ ರಾಜ್​.ಬಿ ಶೆಟ್ಟಿ ನಿಮ್ಮನ್ನು ನಕ್ಕು ನಕ್ಕು ಸುಸ್ತು ಮಾಡಲಿದ್ದಾರೆ.  ಭರತ್​​ ಕುಮಾರ್​, ಹೇಮಂತ್​​ ಕುಮಾರ್​ ಸೇರಿ ಸಿನಿಮಾ ನಿರ್ಮಾಣ ಮಾಡ್ತಿದ್ದು, ಪ್ರಯಾಗ್​ ಮುಕುಂದನ್​​ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ. ಫ್ಯಾಂಟಸಿ ಕಾಮಿಡಿ ಡ್ರಾಮ ಇದಾಗಿದ್ದು ಸದ್ಯದ್ರಲ್ಲೇ ಮಸ್ತ್​ ಮನರಂಜನೆ ನೀಡೋಕೆ ಬರ್ತಿದೆ ತುರ್ತು ನಿರ್ಗಮನ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES