Monday, December 23, 2024

ಭಿತ್ತನೆ ಬೀಜಕ್ಕೆ ಪುನೀತ್ ರಾಜ್ ಕುಮಾರ್ ಹೆಸರು

ಹಾವೇರಿ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿದರೂ ಅವರ ನೆನಪು ಅಜರಾಮರ. ಅಭಿಮಾನಿಗಳ ಪಾಲಿಗೆ ಆದರ್ಶವಾಗಿ ಉಳಿದ ಅವರ ಹೆಸರಿನಲ್ಲಿ ಭಿತ್ತನೆ ಬೀಜದ ಹೊಸ ತಳಿಯನ್ನು ಲೋಕಾರ್ಪಣೆ ಮಾಡಲಾಗಿದೆ.

ಗಂಗಾ ಕಾವೇರಿ‌ ಕಂಪನಿಯ ಗೋವಿನ ಜೋಳದ ಹೊಸ ತಳಿಗೆ ಪವರ್ ಸ್ಟಾರ್ ಎಂದು ನಾಮಕರಣ ಮಾಡಿ ಅಭಿಮಾನ ಮೆರೆದಿದೆ. ಇಷ್ಟು ದಿನಗಳು ಕಳೆದರೂ ಇಂದಿಗೂ ಅಪ್ಪು ಮೇಲಿನ‌ ಅಭಿಮಾನ ಕಡಿಮೆಯಾಗಿಲ್ಲ ಅನ್ನೋದಕ್ಕೆ ಈ ಘಟನೆ ಉದಾಹರಣೆಯಾಗಿದೆ.

ಪುನೀತ್ ರಾಜ್ ಕುಮಾರ್ ಸವಿನೆನಪಿಗಾಗಿ ಪವರ್ ಸ್ಟಾರ್ ಎಂದು ಹೆಸರಿಡಲಾಗಿದೆ ಎಂದು ಅವರು ತಿಳಿಸಿದರು. ಈ ವೇಳೆ ಮಾಜಿ ಸಚಿವ ಬಸವರಾಜ ಶಿವಣ್ಣನವರಿಂದ ಪವರ್ ಸ್ಟಾರ್ ಎಂಬ ಹೊಸ ತಳಿ ಬಿಡುಗಡೆ ಮಾಡಲಾಗಿದೆ. ಗಂಗಾ ಕಾವೇರಿ ಭಿತ್ತನೆ ಬೀಜಗಳ ವಿತರಕ ಮಹೇಶ್ ಬಣಕಾರ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES