Monday, December 23, 2024

ಹೊಂಬಾಳೆ ಟೀಂಗೆ ಡಬಲ್​ ಧಮಾಕ ಸೆಲೆಬ್ರೇಷನ್​​..!

ಕನ್ನಡ ಸಿನಿ ಚರಿತ್ರೆಯಲ್ಲೇ ಹೊಸ ಕ್ರಾಂತಿ ಮಾಡಿ ಚಿತ್ರರಸಿಕರನ್ನು ಬಡಿದೆಬ್ಬಿಸಿದ ಕೆಜಿಎಫ್​ ರೂವಾರಿ ಪ್ರಶಾಂತ್​ ನೀಲ್​​. ಮಾಸ್ಟರ್​​ ಮೈಂಡ್​​ ನೀಲ್​ ಬರ್ತ್​ ಡೇ ಚಿತ್ರಜಗತ್ತಿನ ಎರಡು ಡೈನಮೈಟ್​​​ಗಳು ಒಂದೇ ಕಡೆ ಜೊತೆಯಾಗಿದ್ರು. ಕನ್ನಡಿಗರಿಗೆ  ಡಬಲ್​ ಧಮಾಕ ಸಂಭ್ರಮ. ಹೆಮ್ಮೆಯ ಎಲ್​ಡೊಱಡೋ ಬರ್ತ್​ ಡೇ ಜೊತೆಗೆ ಕೆಜಿಎಫ್-2 ಚಿತ್ರದ ​​ ಭರ್ಜರಿ ಅರ್ಧ ಶತಕದ ದಾಖಲೆ.

  • ನೀಲ್​ ಬರ್ತ್​ಡೇಗೆ ರಾತ್ರೋರಾತ್ರಿ ಬಂದ ಡಾರ್ಲಿಂಗ್
  • ಹೊಂಬಾಳೆ ಟೀಂಗೆ ಡಬಲ್​ ಧಮಾಕ ಸೆಲೆಬ್ರೇಷನ್​​..!
  • ಅರ್ಧ ಶತಕ ಪೂರೈಸಿ ಕೋಟಿ ಕೋಟಿ ಗಳಿಸಿದ ಕೆಜಿಎಫ್
  • ಸಲಾರ್​ ನೆಕ್ಸ್ಟ್​​ ಎನ್​ಟಿಆರ್​​​.. ಕೆಜಿಎಫ್​-3 ಯಾವಾಗ..?

ಸಪ್ಪೆ ಊಟದ ಮದ್ಯೆ ಬಾಯಿ ಚಪ್ಪರಿಸಿ ಸವಿಯುವ ಬಾಡೂಟ ಕೊಟ್ಟವರು ಮಾಸ್ಟರ್​ ಮೈಂಡ್​ ಪ್ರಶಾಂತ್​ ನೀಲ್​. ಡಾರ್ಕ್​ ಎಡಿಟರ್​ ಎಂದೇ ಫೇಮಸ್ಸಾಗಿರೋ ನೀಲ್​​ ಚಿತ್ರಗಳಲ್ಲಿ ಎದ್ದು ಕಾಣೋದು ಧೂಳು, ಮಸಿ, ಬೆಂಕಿಯ ಜ್ವಾಲೆ, ಕಗ್ಗತ್ತಲು. ​​ಕೆಜಿಎಫ್​​ ಸೂತ್ರದಾರಿ, ಸಿನಿಸಂತ ನೀಲ್​ ಸಿನಿಮಾ ಸೆಟ್ಟೇರ್ತಿದ್ದ ಹಾಗೆ ವರ್ಲ್ಡ್​​ ವೈಡ್​​ ಫುಲ್​ ಸೆನ್ಸೇಷನ್​​. ಯೆಸ್.. ಈ ಕಿಲಾಡಿಗೆ ಇಂದು 42ನೇ ಬರ್ತ್​ ಡೇ ಸಂಭ್ರಮ.

ಜಾದುಗಾರ, ಮೋಡಿಗಾರ, ಬುದ್ಧಿವಂತ, ಹೀಗೆ ಏನೇನು ಹೇಳಬೇಕೋ ಗೊತ್ತಿಲ್ಲ. ಬೆರಳೆಣಿಕೆಯ ಸಿನಿಮಾ ಮಾಡಿದ್ರು ಎಲ್ಲರ ದಿಲ್​ ದೋಚಿರೋ ಮಾಂತ್ರಿಕ ನೀಲ್​​. ಅವರ ಮೇಕಿಂಗ್​ ಸ್ಟೈಲ್​​ ಬಗ್ಗೆ ಪದಗಳೇ ಸಾಲೊಲ್ಲ. ಇಡೀ ಪ್ರಪಂಚವೇ ಇವ್ರ ಡೈರೆಕ್ಷನ್​ಗೆ ಒಂದ್​​ ಕ್ಷಣ ಸ್ಟನ್​ ಆಗಿದ್ದಾರೆ. ಕ್ರಿಯೇಟಿವ್​​, ಮೋಸ್ಟ್​ ಟ್ಯಾಲೆಂಟೆಡ್​ ಡೈರೆಕ್ಟರ್​ ಬರ್ತ್​ಡೇಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ.

 

ಕೆಜಿಎಫ್2​ ಪ್ರಾಜೆಕ್ಟ್​​ ನಂತ್ರ ಟಾಲಿವುಡ್​​ ಸೂಪರ್​ ಸ್ಟಾರ್​​​ ಡಾರ್ಲಿಂಗ್​ಗೆ ಆ್ಯಕ್ಷನ್​ ಕಟ್​ ಹೇಳ್ತಿರೋ ನೀಲ್​ ಸಖತ್​ ಬ್ಯುಸಿಯಾಗಿದ್ದಾರೆ. ಕೆಜಿಎಫ್​​ 3 ಬಗ್ಗೆ ಶಾಕಿಂಗ್​ ನ್ಯೂಸ್​ ಕೊಟ್ಟಿರೋ ಪ್ರಶಾಂತ್​ಗೆ ಬಿಡುವಿಲ್ಲದ ಕೆಲಸ. ಸರ್ಪ್ರೈಸಿಂಗ್​ ವಿಷ್ಯ ಅಂದ್ರೆ, ಡಾರ್ಲಿಂಗ್ ಪ್ರಭಾಸ್​​, ನೀಲ್ ಬರ್ತ್​ಡೇ ಸೆಲೆಬ್ರೇಟ್​ ಮಾಡೋಕೆ ರಾತ್ರೋರಾತ್ರಿ ಸಿಲಿಕಾನ್​ ಸಿಟಿ ಫ್ಲೈಟ್ ಹತ್ತಿದ್ದಾರೆ. ರಾಕಿಭಾಯ್​ ಜೊತೆ ನೀಲ್​ ಬರ್ತ್​​ಡೇ ಪಾರ್ಟಿ  ಎಂಜಾಯ್​ ಮಾಡಿದ್ದಾರೆ.

ಹೊಂಬಾಳೆ ಟೀಂ ನೀಲ್​ ಬರ್ತ್​ ಡೇ ಪಾರ್ಟಿಯಲ್ಲಿ ಒಂದಾಗಿತ್ತು. ಟಾಲಿವುಡ್​​ ಸೂಪರ್​ ಸ್ಟಾರ್​ ಡಾರ್ಲಿಂಗ್​ ಪ್ರಭಾಸ್,​ ರಾಕಿಂಗ್​ ಸ್ಟಾರ್​ ಯಶ್​​, ವಿಜಯ್​ ಕಿರಗಂದೂರು, ಶೈಲಜಾ ಕಿರಗಂದೂರು ಸೇರಿದಂತೆ ಹೊಂಬಾಳೆ ಟೀಂ ನೀಲ್​ ಬರ್ತ್​ಡೇ ಪಾರ್ಟಿಗೆ ಸಾಕ್ಷಿಯಾಗಿದ್ರು. ಕೆಜಿಎಫ್​​ 2 ಸಿನಿಮಾ 50 ದಿನ ಪೂರೈಸಿದ ಹಿನ್ನೆಲೆ ಕೇಕ್​ ಮೇಲೆ 50 ಡೇಸ್​ ಎಂದು ಬರೆಯಲಾಗಿದೆ.

ಡಬಲ್​ ಖುಷಿಯಲ್ಲಿರೋ ಹೊಂಬಾಳೆ ಟೀಮ್​ ನೀಲ್​ ಬರ್ತ್​ ಡೇ ಜೊತೆ ಕೆಜಿಎಫ್​ ಸಂತಸವನ್ನು ಹಂಚಿಕೊಂಡಿದೆ. ಪ್ಯಾನ್​ ಇಂಡಿಯಾ ಸಿನಿಮಾ ಸಲಾರ್​ ಶೂಟಿಂಗ್​ ನಲ್ಲಿ ಆ್ಯಕ್ಟಿವ್​ ಆಗಿರೋ ನೀಲ್​ ನೆಕ್ಸ್ಟ್​​ ಎನ್​ಟಿಆರ್​ ಚಿತ್ರಕ್ಕೆ ಆ್ಯಕ್ಷನ್​ ಕಟ್​​ ಹೇಳಲಿದ್ದಾರೆ. ಜೊತೆ ಜೊತೆಗೆ ಕೆಜಿಎಫ್​ ಚಿತ್ರಕ್ಕೆ ಯಾವಾಗ ಕೈ ಹಾಕ್ತಾರೆ ಅನ್ನೋ ಕ್ಯೂರಿಯಾಸಿಟಿ ನೀಲ್​ ಅವರೇ ಉತ್ತರ ಕೊಡಬೇಕು. ಎನಿವೇ, ವಿಶ್​ ಯು ಹ್ಯಾಪಿ ಬರ್ತ್​ ಡೇ ನೀಲ್​​

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES