Friday, December 27, 2024

ಯಾವತ್ತಿದ್ದರೂ ನಾನೇ ಸಿಎಂ : ನಟ ಉಪೇಂದ್ರ

ಬೆಂಗಳೂರು : ನಾನು ಇವತ್ತು ಹೇಳುತ್ತೀನಿ ನಾಳೆನೂ ಹೇಳ್ತಿನಿ ನಾನು ಯಾವತಿದ್ದರೂ ಸಿಎಂ ಎಂದು ಸೂಪರ್ ಸ್ಟಾರ್, ರಿಯಲ್ ಸ್ಟಾರ್, ಬುದ್ದಿವಂತ ನಟ ಉಪೇಂದ್ರ ಹೇಳಿದರು.

7 ವರ್ಷಗಳ ನಂತರ ಉಪ್ಪಿ ನಿರ್ದೇಶಿಸಿ ನಟಿಸುತ್ತಿರುವ  UI ಸಿನಿಮಾ ಮುಹೂರ್ತ ಇಂದು ಗವಿಪುರದ ಶ್ರೀ ಬಂಡೆ ಮಾಕಾಳಮ್ಮ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಟೈಟಲ್ ಹೇಳೇ ಇಲ್ಲ, ಮಾಧ್ಯಮ ಮಿತ್ರರೇ ನಾನ್ ಹೇಳೋದ್ ಮಾತ್ರ ನೀವು ಅದನ್ನ ಬರೆದರೆ ಮಜಾ ಇರಲ್ಲ ಎಂದರು.

ಸಿನಿಮಾ ಅನ್ನೋದು ದೃಶ್ಯ ಮಾಧ್ಯಮ. ನಾನು ಯಾವತ್ತು ಕನ್ವಿನ್ಸ್ ಮಾಡೋಕೆ ಸಿನಿಮಾ ಮಾಡೋದು. ಕನ್ವಿನ್ಸ್ ಮಾಡೋರಿಗೆ ಕನ್ವಿನ್ಸ್ ಮಾಡ್ತೀನಿ, ಕನ್ಫ್ಯೂಸ್ ಆಗೋರು ಹಾಗೆ ಇರ್ತಾರೆ ಯಾವಾಗಲೂ. ನೀವೆಲ್ಲ ನನ್ನ ಮಾತು ಕೇಳ್ತಿದಿರಲ್ಲ ಅದು ನನ್ನ ಅದೃಷ್ಟ. ನನ್ನ ತಲೆಯಲ್ಲಿ ಕಾಲಿ ಇರುತ್ತೆ ಅದ್ಕೆ ಐಡಿಯಾಸ್ ಬರುತ್ತದೆ.

ಕೆಜಿಎಫ್ ತರ ಸಿನಿಮಾ ಮಾಡಿ ಅಂತಾರೆ, ಇಲ್ಲ ನಾನು ಹಾಗೆ ಮಾಡಲ್ಲ.ಅದೇ ತರ ಸಿನಿಮಾಗಳು ಕೊಟ್ರೆ ಎನ್ ವ್ಯತ್ಯಾಸ ಇದೆ. ಸಿನಿಮಾದಲ್ಲಿ ಲೊಕೇಶನ್, ಸಿನಿಮಾಟೋಗ್ರಫಿ ಎಲ್ಲಾ ಅದ್ಭುತವಾಗಿರುತ್ತದೆ. ನಾನು ನನ್ನ ಸ್ಕ್ರಿಪ್ಟ್ ಯಾರಿಗೂ ಹೇಳಲ್ಲ ಅಂತಾರೆ. ಆದರೆ, ಅದು ಸುಳ್ಳು ನಾನು ಕದ್ದು ಸಿನಿಮಾ ಮಾಡಲ್ಲ.ನಾನು ಎಲ್ಲರಿಗೂ ಕಥೆ ಹೇಳ್ತಿನಿ ನನ್ನ ಅಸಿಸ್ಟೆಂಟ್, ಕ್ಯಾಮೆರಾ ಮ್ಯಾನ್​​ಗೂ ಹೇಳ್ತಿನಿ ಆದ್ರೆ ಅವರಿಗೆ ಎಷ್ಟು ಅರ್ಥ ಆಗುತ್ತೆ ಎಂದು ಗೊತ್ತಿಲ್ಲ. ಯಾಕಂದ್ರೆ ನಾಳೆ ಅಷ್ಟು ಹೊತ್ತಿಗೆ ಕಥೆ ಬೇರೆ ಆಗಿರುತ್ತದೆ.

ಇನ್ನು ಪ್ರಜಾಕಿಯ ಪಕ್ಷದಿಂದ ರಾಜಕೀಯ ಇಳಿದು ಸಿಎಂ ಆಗ್ತೀನಿ ಅನ್ನೋ ಉಹಾ ಪೋಹಾಗೆ ನಾನು ಇಲ್ಲ. ನಾನು ಇವತ್ತು ಹೇಳ್ತಿನಿ, ನಾಳೆನೂ ಹೇಳ್ತಿನಿ ನಾನು ಯಾವತಿದ್ದರೂ ಸಿಎಂ. ಹಾನೆಸ್ಟ್ ಆಗಿ ಇದ್ರೆ ಸಿನಿಮಾ ಗೆಲುತ್ತದೆ ಎಂದು ತಿಳಿಸಿದರು.

RELATED ARTICLES

Related Articles

TRENDING ARTICLES