Monday, December 23, 2024

ಭಾಯಿಜಾನ್​ನ ಮೀರಿಸೋ ಚಾರ್ಲಿ ಎಮೋಷನ್ಸ್

ವಿತೌಟ್ ಎಮೋಷನ್ ದೇರ್ ಈಸ್ ನೋ ಸಿನಿಮಾ. ಯೆಸ್.. ಎಮೋಷನ್ಸ್ ಇಲ್ಲದೆ ಸಿನಿಮಾವೊಂದನ್ನ ಮಾಡಲು ಸಾಧ್ಯವೇ ಇಲ್ಲ. ಸದ್ಯ ಬಾಲಿವುಡ್​ನ ಭಜರಂಗಿ ಭಾಯಿಜಾನ್​ನ ಮೀರಿಸೋ ಅಂತಹ ಭಾವನಾತ್ಮಕತೆಯನ್ನ ಹೊತ್ತು ಬರ್ತಿದ್ದಾರೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ. ಅದ್ಹೇಗೆ ಎತ್ತ ಅನ್ನೋದ್ರ ಡಿಟೈಲ್ಸ್​ ನೀವೇ ಓದಿ.

  • ಅಂದು ಸಲ್ಲು- ಮುನ್ನಿ.. ಇಂದು ರಕ್ಷಿತ್- ಚಾರ್ಲಿ..!

ನಮ್ಮ ಕನ್ನಡದ ಧೀರ ರಾಕ್​ಲೈನ್ ವೆಂಕಟೇಶ್ ಬಂಡವಾಳ ಹಾಕಿ ನಿರ್ಮಿಸಿದ್ದ 2015ರ ಬ್ಲಾಕ್ ಬಸ್ಟರ್ ಹಿಟ್ ಮೂವಿ ಭಜರಂಗಿ ಭಾಯಿಜಾನ್​ಗೂ ರಕ್ಷಿತ್ ಶೆಟ್ಟಿಯ 777 ಚಾರ್ಲಿಗೂ ಸಾಕಷ್ಟು ಸಾಮ್ಯತೆಯಿದೆ. ಎರಡರ ಕಾಮನ್ ಫ್ಯಾಕ್ಟರ್ ಒಂದೇ. ಅದು ಎಮೋಷನ್. ಹೌದು.. 90 ಕೋಟಿಯಲ್ಲಿ ತಯಾರಾದ ಭಜರಂಗಿ ಭಾಯಿಜಾನ್ 969 ಕೋಟಿ ಗಳಿಸುತ್ತೆ ಅಂದ್ರೆ ಅದ್ರ ಎಮೋಷನಲ್ ಕಥಾನಕ ಪ್ರಮುಖ ಪಾತ್ರ ವಹಿಸುತ್ತೆ. ಇದೀಗ ಏಳು ವರ್ಷದ ನಂತ್ರ ಅಂಥದ್ದೇ ಎಮೋಷನ್ 777 ಚಾರ್ಲಿಯಲ್ಲಿ ಕಾಣ್ತಿದೆ.

ರಕ್ಷಿತ್ ಶೆಟ್ಟಿ ಕನ್ನಡದ ಮೋಸ್ಟ್ ಪ್ಯಾಷನೇಟ್ ಅಂಡ್ ಟ್ಯಾಲೆಂಟೆಡ್ ಆ್ಯಕ್ಟರ್ ಕಮ್ ಟೆಕ್ನಿಷಿಯನ್. ಹಾಗಾಗಿಯೇ ಸದಾ ಹೊಸತನಕ್ಕಾಗಿ ಹಾತೊರೆಯುತ್ತಿರ್ತಾರೆ. 777 ಚಾರ್ಲಿ ಸಿನಿಮಾದಲ್ಲಿ ಒಬ್ಬ ಮನುಷ್ಯ ಹಾಗೂ ನಾಯಿಯ ನಡುವಿನ ಭಾವುಕ ಜರ್ನಿಯನ್ನ ಕಟ್ಟಿಕೊಡೋ ಪ್ರಯತ್ನ ಮಾಡಿದ್ದಾರೆ. ಚಾರ್ಲಿ- ಧರ್ಮನ ಆ ಜರ್ನಿಯ ಸ್ಯಾಂಪಲ್ ಝಲಕ್​ಗಳು ಈಗಾಗ್ಲೇ ಎಲ್ಲರನ್ನ ಮಂತ್ರಮುಗ್ಧಗೊಳಿಸಿವೆ.

ನಾಯಕನಟನಿಗೆ ಚಾರ್ಲಿ ಅನ್ನೋ ನಾಯಿಯೊಂದಿಗಿನ ಬಾಂಧವ್ಯ, ಅನುಬಂಧ ನಿಜಕ್ಕೂ ಪದಗಳಿಗೆ ನಿಲುಕದ್ದು. ಆ ಜರ್ನಿ ನಿಜಕ್ಕೂ ರೋಚಕ ಹಾಗೂ ರೋಮಾಂಚಕ. ಸಾಮಾನ್ಯವಾಗಿ ಹೀರೋಯಿನ್​ಗಾಗಿ ಹೀರೋ ಈ ರೀತಿಯ ರಿಸ್ಕ್ ತೆಗೆದುಕೊಳ್ಳೋದನ್ನ ನೋಡಿರ್ತೀವಿ. ಆದ್ರೆ ನಾಯಿಗಾಗಿ ಧರ್ಮ ಪಡೋ ಫಜೀತಿ ಹುಬ್ಬೇರಿಸುತ್ತೆ. ವಿಶೇಷ ಅಂದ್ರೆ ಇಲ್ಲಿ ಸಿಂಪಲ್ ಸ್ಟಾರ್- ನಾಯಿಯ ಎಮೋಷನ್ ಇದೆ. ಭಜರಂಗಿ ಭಾಯಿಜಾನ್​ನಲ್ಲಿ ಸಲ್ಲ್ಮಾನ್ ಖಾನ್- ಮುನ್ನಿಯ ಎಮೋಷನಲ್ ಜರ್ನಿಯಿದೆ.

ಮರುಭೂಮಿ, ಮಂಜು, ಮಳೆ, ಬಿಸಿಲು, ಚಳಿ, ಗಾಳಿ, ಬಾರ್ಡರ್ ಇದ್ಯಾವುದರ ಹಂಗಿಲ್ಲದೆ ಮುನ್ನಿಯನ್ನ ತಾಯಿಯೊಂದಿಗೆ ಸೇರಿಸೋಕೆ ಭಾಯಿಜಾನ್ ಪಡೋ ಪರಿ ನಿಜಕ್ಕೂ ವರ್ಣನಾತೀತ. ಸದ್ಯ 777 ಚಾರ್ಲಿ ಕೂಡ ಅದನ್ನ ಮೀರಿಸೋ ಎಮೋಷನ್ಸ್​ನ ಹೊತ್ತು ಬರ್ತಿದೆ. ಇದು ರಕ್ಷಿತ್​ ಶೆಟ್ಟಿ- ಚಾರ್ಲಿ ನಾಯಿಯ ನಡುವಿನ ತರ್ಲೆ, ತುಂಟತನ, ನಿಷ್ಕಲ್ಮಶ ಪ್ರೀತಿಯ ಅನುಸಂಧಾನದ ಆತ್ಮಾನುಬಂಧದ ಸ್ಟೋರಿ ಆಗಿದೆ. ಸಿನಿಮಾ ಇದೇ ಜೂನ್ 10ಕ್ಕೆ ವರ್ಲ್ಡ್​ ವೈಡ್ ರಿಲೀಸ್ ಆಗ್ತಿದ್ದು, ನೋಡುಗರ ಕಣ್ಣು ಒದ್ದೆಯಾಗಿಸೋದ್ರಲ್ಲಿ ಡೌಟೇ ಇಲ್ಲ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ 

RELATED ARTICLES

Related Articles

TRENDING ARTICLES