Tuesday, December 24, 2024

ಇನ್ಸ್ಟಾಗ್ರಾಮ್​ನಲ್ಲಿ ಸಾರಿ ಬರೆದು 19 ವರ್ಷದ ಯುವಕ ಆತ್ಮಹತ್ಯೆ

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ 19 ವರ್ಷದ ಯುವಕ ಆತ್ಮಹತ್ಯೆ ಮಾಡಿದ ಘಟನೆ ಜ್ಙಾನಭಾರತಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಾಗದೇವನಹಳ್ಳಿಯಲ್ಲಿ ನಡೆದಿದೆ.

ಖಾಸಗಿ ಕಾಲೇಜಿನಲ್ಲಿ ಬಿ.ಕಾಂ ಓದುತ್ತಿದ್ದ ಮನೋಜ್ ಮೂರ್ನಾಲ್ಕು ದಿನದಿಂದ ಡಿಪ್ರೆಷನ್​ನಲ್ಲಿದ್ದ. ಆದರೆ ನಿನ್ನೆ ರಾತ್ರಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರತಿ‌ ದಿನ ಅಜ್ಜಿ ಮನೆಗೆ ಹೋಗಿ ಮಲಗುತ್ತಿದ್ದ ಮನೋಜ್ ಅಜ್ಜಿ ಹಾಗೂ ಮನೋಜ್ ಇಬ್ಬರೇ ಮನೆಯಲ್ಲಿ ಇದ್ರು ಆದರೆ 7:30 ಆದರು ರೂಮ್ ಬಾಗಿಲು ತೆಗೆದಿರಲಿಲ್ಲ ಕಾಲೇಜಿಗೆ ತೆರಳಲು ರೆಡಿ ಆಗಿಲ್ವಲ್ಲಾ ಎಂದು ಬಂದು ನೋಡಿದ ಪೋಷಕರು ಈ ವೇಳೆ ಬಾಗಿಲು ಒಡೆದು ನೋಡಿದಾಗ ನೇಣು ಬಿಗಿದುಕೊಂಡಿರೋದು ಪತ್ತೆಯಾಗಿದೆ.

ನಿನ್ನೆ ಇನ್ಸ್ಟ್ರಾಗ್ರಾಂ ಸ್ಟೇಟಸ್ ನಲ್ಲಿ “Sorry ” ಎಂದು ಬರೆದ ಮನೋಜ್ ಅಲ್ಲದೇ “chill we all die ” ಎಂದು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಮೃತದೇಹ ರವಾನೆ ಮಾಡಲಾಗಿದೆ. ಜ್ಙಾನಭಾರತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

RELATED ARTICLES

Related Articles

TRENDING ARTICLES