ಹಾಸನ: ಸಿಟಿ ಮತ್ತು ರೂರಲ್ ಸ್ಟೇಷನ್ ರೌಡಿಗಳ ಆಶ್ರಯ ತಾಣವಾಗಿದೆ ಎಂದು ಹಾಸನದಲ್ಲಿ ಹೆಚ್‌ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಲ್ ಇನ್ಸ್ಪೆಕ್ಟರ್ ರೇಣುಕಾ ಪ್ರಸಾದ್ ಹೇಗೆ ಬಂದರು, ಯಾರು ಲೆಟರ್ ಕೊಟ್ಟರು ಎಲ್ಲ ಕ್ಯಾಸೆಟ್ ಕಳುಹಿಸಿದ್ದೇನೆ. ಕಂಪ್ಲೇಂಟ್ ಕೊಡಲು ಹೋದರೆ ಕಂಪ್ಲೆಂಟ್ ರಿಸೀವ್ ಮಾಡಲ್ಲ. ಈ ಹುಡುಗನ ಮೇಲೆ ಬೇಕಂತಲೇ ೩೦೭ ಕೇಸ್ ಹಾಕಿದ್ದಾರೆ. ರೇಣುಕಾ ಪ್ರಸಾದ್ ರೌಡಿಗಳ ಹೆಗಲ ಮೇಲೆ ಕೈ ಹಾಕುತ್ತಾರೆ. ಇಡೀ ಸಿಟಿ ರೌಡಿಗಳ ಕಂಟ್ರೋಲ್ ಇದೆ ಎಂದು ಕಿಡಿಕಾಡಿದರು.
ಅದಲ್ಲದೇ, ಇದುವರೆಗೂ ಅವರು ಯಾರ ಜೊತೆ ಕಾಂಟ್ಯಾಕ್ಟ್ ಇದ್ದಾರೆ ಚೆಕ್ ಮಾಡಿ ಇನ್ವೆಷ್ಟಿಗೇಷನ್ ಯಾವ ರೀತಿ ನಡೆಯುತ್ತೆ ಗೊತ್ತಾಗುತ್ತಿಲ್ಲ. ಸರ್ಕಲ್ ಇನ್ಸ್ಪೆಕ್ಟರ್ ಕೇಸ್ ಯಾವ ರೀತಿ ತಿರುಗಿಸುತ್ತಾರೆ ಗೊತ್ತಿಲ್ಲ. ಹಾಸನ ಡಿವೈಎಸ್‌ಪಿ, ಹಾಸನ ನಗರ ಸರ್ಕಲ್ ಇನ್ಸ್‌ಪೆಕ್ಟರ್, ರೂರಲ್ ಸರ್ಕಲ್ ಇನ್ಸ್‌ಪೆಕ್ಟರ್ ಸಸ್ಪೆಂಡ್ ಆಗಬೇಕು. ಇಂತಹ ಹೇಯ ಕೃತ್ಯ ನಾನು ನೋಡಿಲ್ಲ. ಈ ಜಿಲ್ಲೆಯ ಎಸ್‌ಪಿಗೆ ಬೇಡ, ಬೇರೆ ಜಿಲ್ಲೆಯ ಎಸ್‌ಪಿಗೆ ತನಿಖೆಗೆ ಕೊಡಿ ಎಂದು ಆಗ್ರಹಿಸಿದರು.
ಇನ್ನು, ಇಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ. ಇಲ್ಲಿಗೆ ಬರಲು ಐವತ್ತು ಲಕ್ಷ ಬೇಕು. ಆಡಹಗಲೇ ಹೊಡಿತಾರೆ ಅಂದ್ರೆ ಏನು ಕಥೆ. ಈ ಮೂವರು ಅಧಿಕಾರಿಗಳು ಕೇಸ್ ಮುಚ್ಚಾಕಲು ಎಕ್ಸ್‌ಪರ್ಟ್ ಇದರಲ್ಲಿ ದೊಡ್ಡ ಕೈವಾಡ ಇದೆ. ತನಿಖೆ ಆಗುವವರೆಗೆ ಮೂವರನ್ನ ಸಸ್ಪೆಂಡ್ ಮಾಡಿ. ಅವರ ಮೇಲೆಯೇ ತನಿಖೆ ನಡೆಯಲಿ. ನಮ್ಮ ಪಕ್ಷದವರು ತಪ್ಪು ಮಾಡಿದ್ರೆ ಅವರನ್ನ ನೇಣು ಹಾಕಲಿ. ಈ ಮೂವರು ಅಧಿಕಾರಿಗಳು ರೌಡಿ ಲಿಸ್ಟ್‌ನಲ್ಲಿರುವವರ ಜೊತೆ ಟಚ್‌ನಲ್ಲಿ ಇದ್ದಾರೆ. ಐಜಿ ಗಮನಕ್ಕೆ ತಂದೆದ್ದೇನೆ. ಇಂಥ ಕೆಟ್ಟ ಸನ್ನಿವೇಶ ನಾನು ಜೀವನದಲ್ಲಿ ನೋಡಿಲ್ಲ ಎಂದರು.