Saturday, June 10, 2023
Powertv Logo

Kannada Kannada English English Hindi Hindi Telugu Telugu Tamil Tamil Malayalam Malayalam

Homeದೇಶಟ್ರ್ಯಾಕ್ಟರ್​​ ಓಡಿಸಿದ ವಧುವಿಗೆ ಆನಂದ್ ಮಹೀಂದ್ರಾ ಮೆಚ್ಚುಗೆ

ಟ್ರ್ಯಾಕ್ಟರ್​​ ಓಡಿಸಿದ ವಧುವಿಗೆ ಆನಂದ್ ಮಹೀಂದ್ರಾ ಮೆಚ್ಚುಗೆ

ಮಧ್ಯಪ್ರದೇಶದ ಬೆತುಲ್ ಜಿಲ್ಲೆಯ ಜವ್ರಾ ಗ್ರಾಮದ ನಿವಾಸಿ ಭಾರತಿ ತಾಗ್ಡೆ ಮೇ 25ರಂದು ಸಪ್ತಪದಿ ತುಳಿದಿದ್ದಾರೆ. ಈ ವೇಳೆ ಟ್ರ್ಯಾಕ್ಟರ್ ಓಡಿಸಿಕೊಂಡು ಬರುವ ಮೂಲಕ ಗಮನ ಸೆಳೆದಿದ್ದು, ಪ್ರದೇಶದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಖ್ಯಾತ ಉದ್ಯಮಿ ಆನಂದ ಮಹೀಂದ್ರಾ, ‘ವಧು ಭಾರತಿ ಡ್ರೈವಿಂಗ್ ಸ್ವರಾಜ್​​’ ಎಂದು ಟ್ವೀಟ್ ಮಾಡಿದ್ದು, Brand Makes Sense ಎಂದು ಬರೆದುಕೊಂಡಿದ್ದಾರೆ. ವಧು ಟ್ರ್ಯಾಕ್ಟರ್​ ಚಲಾಯಿಸಿಕೊಂಡು ಮದುವೆ ಮಂಟಪಕ್ಕೆ ಬರುತ್ತಿದ್ದಂತೆ ಅನೇಕರು ಫಿದಾ ಆಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಜೊತೆಗೆ ವಧುವಿನ ಶೈಲಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಧು ಡ್ರೈವ್​ ಮಾಡಿದ ಟ್ರ್ಯಾಕ್ಟರ್ ಆನಂದ್ ಮಹೀಂದ್ರಾ ಕಂಪನಿಗೆ ಸೇರಿದ್ದಾಗಿದ್ದು, ಇದೀಗ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.

Most Popular

Recent Comments