ಬೆಂಗಳೂರು: ನಾಲ್ಕು ಸ್ಥಾನಕ್ಕೆ ನಡೆಯುತ್ತಿರೋ ರಾಜ್ಯಸಭಾ ಚುನಾವಣೆಯ ಕಾವು ಜೋರಾಗಿದೆ. ಒಂದು ಸ್ಥಾನದ ಗೆಲುವಿನ ಉತ್ಸಾಹದಲ್ಲಿದ್ದ ದಳಪತಿಗಳಿಗೆ ಆತಂಕ ಎದುರಾಗಿದೆ. ಕೈಪಡೆ ಎರಡನೇ ಅಭ್ಯರ್ಥಿ ಹಾಕುತ್ತಿದ್ದಂತೆ ಇತ್ತ ಆಕ್ಟಿವ್ ಅದ ಬಿಜೆಪಿ ಮೂರನೇ ಅಭ್ಯರ್ಥಿಯನ್ನ ಘೋಷಣೆ ಮಾಡಿದೆ. ಜಗ್ಗೇಶ್ , ನಿರ್ಮಲ ಸೀತಾರಾಮನ್ ಮೊದಲ ಮತ್ತು ಎರಡನೇ ಸ್ಥಾನಕ್ಕೆ ಅಯ್ಕೆ ಮಾಡಲಾಗಿತ್ತು. ಬಳಿಕ ಬಿಜೆಪಿ ಮೂರನೇ ಅಭ್ಯರ್ಥಿಯಾಗಿ ಲೆಹರ್ ಸಿಂಗ್ ರವರನ್ನ ಕಣಕ್ಕಿಳಿಸಿರೋದು ರಾಜ್ಯಸಭಾ ಚುನಾವಣೆಯ ರೋಚಕತೆಗೆ ಸಾಕ್ಷಿಯಾಗಿದೆ.
ಸಿಎಂ, ಮಾಜಿ ಸಿಎಂ ಹಾಗೂ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದ ಮೂವರು ನಾಯಕರು ಈ ಸಾರಿ ಗೆಲುವು ನಮ್ದೇ ಎಂದು ನಗೆ ಬೀರಿದ್ರು.. ಇದಕ್ಕೂ ಮುನ್ನ ಜಗ್ಗೇಶ್ ಕುಟುಂಬ ಸಮೇತ ರಾಯರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ರು. ಕೇಂದ್ರ ಸಚಿವೆಯಾಗಿರೋ ನಿರ್ಮಲಾ ಸೀತಾರಾಮನ್ ಗವಿಗಂಗಾದರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರು.
ಮೊದಲು ನಿರ್ಮಲಾ ಸೀತಾರಾಮನ್ ಘಟಾನುಘಟಿ ನಾಯಕರ ಜೊತೆ ಬಂದು ನಾಮಪತ್ರ ಸಲ್ಲಿಸಿದ್ರೆ ನಂತರ ಜಗ್ಗೇಶ್ ಮತ್ತು ಲೆಹರ್ ಸಿಂಗ್ ಕೆಲಸಚಿವರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದ್ರು. ಈ ವೇಳೆ ಇಬ್ಬರು ಅಭ್ಯರ್ಥಿಯ ಜೊತೆ ಮೂರನೇ ಅಭ್ಯರ್ಥಿ ಗೆಲುವು ಸಹ ನಮ್ದೇ ಎಂದು ಬಿಜೆಪಿ ನಾಯಕರು ಹೇಳಿದ್ರು.
ರಾಜ್ಯಸಭೆ ಚುನಾವಣೆಗೆ ದಿನಾಂಕ ಫಿಕ್ಸ್ ಆಗಿದ್ದೇ ತಡ ಕೋಮುವಾದಿಗಳ ಜೊತೆ ಸಖ್ಯ ಬೇಡ ಎಂದಿದ್ದ ಕಾಂಗ್ರೆಸ್, ದಿಢೀರ್ ಉಲ್ಟಾ ಹೊಡೆಯಿತು.. ನಮ್ಮ ಸಪೋರ್ಟ್ ನಿಮಗೆ ಎಂದಿದ್ದ ಕಾಂಗ್ರೆಸ್ ಏಕಾಏಕಿ ದಳಪತಿಗಳಿಗೆ ಶಾಕ್ ನೀಡಿ ಎರಡನೇ ಅಭ್ಯರ್ಥಿಗಳನ್ನ ಕಣಕ್ಕಿಳಿಸಿಲಿತ್ತು. ಇತ್ತ ಅಭ್ಯರ್ಥಿಗಳ ಹುಡುಕಾಟದಲ್ಲಿದ್ದ ಜೆಡಿಎಸ್ ಕಾಂಗ್ರೆಸ್‌ನ ದಿಢೀರ್ ಶಾಕ್‌ನಿಂದ ವಿಚಲಿತವಾಗಿಬಿಟ್ರು. ಕೊನೆಗೆ ಕುಪೇಂದ್ರ ರೆಡ್ಡಿಯವರಿಗೆ ಟಿಕೆಟ್ ನೀಡಿದ್ದು, ನಾಮಪತ್ರ ಸಲ್ಲಿಸಿದ್ರು. ಈ ವೇಳೆ ಮುಸ್ಲಿಂ ನಾಯಕನ್ನ ತುಳಿಯುವ ಪ್ರಯತ್ನವನ್ನ ಕಾಂಗ್ರೆಸ್ ಮಾಡ್ತಿದೆ ಎಂದು ಸಿಎಂ ಇಬ್ರಾಹಿಂ ಅರೋಪ ಮಾಡಿದ್ರು. ಅತ್ತ ಕೋಮುವಾದಿಗಳನ್ನ ದೂರ ಹಾಕೋಣ ಎಂದು ಈಗ ಈ ರೀತಿ ಮಾಡಿದ್ದಾರೆ ಎಂದು ಕಾಂಗ್ರೆಸ್ ವಿರುದ್ದ ಹೆಚ್.ಡಿ. ರೇವಣ್ಣ ಗುಡುಗಿದ್ರು.
ಸದ್ಯ ರಾಜ್ಯಸಭಾ ರಣಾಂಗಣ ಸಾಕಷ್ಟು ಕುತೂಹಲ ಕೆರಳಿಸಿದೆ.. ಬಿಜೆಪಿ ಬಳಿ 122 ಮತಗಳಿದ್ದು, ಅದರಲ್ಲಿ ಇಬ್ಬರು ಅಭ್ಯರ್ಥಿಗಳ ಗೆಲುವಿನ ನಂತರ 32 ಮತಗಳು ಉಳಿಯಲಿವೆ.. ಇತ್ತ ಕಾಂಗ್ರೆಸ್ ಸಹ 70 ಮತಗಳನ್ನ ಹೊಂದಿದ್ದು, ಓರ್ವ ಅಭ್ಯರ್ಥಿ ಗೆಲುವಿನ ನಂತರ 25 ಮತಗಳು ಉಳಿಯಲಿವೆ. ಇತ್ತ ಜೆಡಿಎಸ್ ಸಹ 32 ಮತಗಳನ್ನ ಹೊಂದಿದ್ದು, ತನ್ನ ಅಭ್ಯರ್ಥಿ ಗೆಲ್ಲಿಸಿಕೊಳ್ಳಲು ಕುದುರೆ ವ್ಯಾಪಾರದಲ್ಲಿ ಬ್ಯುಸಿಯಾಗಿದೆ.. ಆದ್ರೆ, ಜೆಡಿಎಸ್‌ಗೆ ಅಡ್ಡವಾಗಿರೋದು ಕಾಂಗ್ರೆಸ್.. ಒಂದು ಪಕ್ಷ ಕಾಂಗ್ರೆಸ್ ತನ್ನ ಎರಡನೇ ಅಭ್ಯರ್ಥಿಯನ್ನ ಕಣದಿಂದ ಹಿಂದೆ ಸರಿಸಲಿಲ್ಲ ಅಂದ್ರೆ ಬಿಜೆಪಿ ಅಭ್ಯರ್ಥಿಯ ಗೆಲುವು ಸುಲಭವಾಗಲಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ.
ಒಟ್ಟಿನಲ್ಲಿ ಎಂ.ಎಲ್.ಸಿ ಚುನಾವಣೆಯಂತೆ ರಾಜ್ಯಸಭಾ ಚುನಾವಣೆ ಸಹ ಆಗುತ್ತೆ ಎನ್ನಲಾಗಿತ್ತು.. ಆದ್ರೆ ಕಾಂಗ್ರೆಸ್ ಮತ್ತು ಬಿಜೆಪಿಯ ತಂತ್ರಗಾರಿಕೆಯಿಂದ ಇದೀಗ ಚುನಾವಣಾ ಕಣ ರಂಗೇರಿದ್ರು ಮೇ 10 ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.