ಬೀದರ್ : ಸಮಾನತೆಗಾಗಿ ಕ್ರಾಂತಿಯನ್ನೇ ಮಾಡಿದ ಬಸವಣ್ಣನವರ ಅನುಭವ ಮಂಟಪ ಈಗ ದರ್ಗಾ ಆಗಿ ಬದಲಾಗಿದೆ. ಈ ಭಾಗದ ಮಠಾಧೀಶರು, ಬಸವಭಕ್ತರು ಕಳೆದ ಹಲವಾರು ವರ್ಷಗಳಿಂದ ಮೂಲ ಅನುಭವ ಮಂಟಪದ ಪತ್ತೆಗಾಗಿ ಒತ್ತಾಯಿಸಿದ್ರು.. ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯಿಂದ ಮೂಲ ಅನುಭವ ಮಂಟಪದ ರಕ್ಷಣೆಗಾಗಿ ಬಸವಕಲ್ಯಾಣ ಚಲೋ ಸಮಾವೇಶ ಹಮ್ಮಿಕೊಂಡಿದ್ದಾರೆ, ದೇಶ ಹಾಗೂ ನಾಡಿನ ವಿವಿಧೆಡೆಯಿಂದ ನೂರಾರು ಜನ ಮಠಾಧೀಶರು ಕಲ್ಯಾಣಕ್ಕೆ ಆಗಮಿಸುವ ಮೂಲಕ ಮೌನ ಮೆರವಣಿಗೆ ನಡೆಸುವ ಮೂಲಕ ಮೂಲ ಅನುಭವ ಮಂಟಪ ಪತ್ತೆಗೆ ಒತ್ತಾಯಿಸಲ್ಲಿದ್ದಾರೆ.
ಅಣ್ಣ ಬಸವಣ್ಣನವರ ನೇತೃತ್ವದಲ್ಲಿ 12ನೇ ಶತಮಾನದಲ್ಲಿ ಸಮಾನತೆಗಾಗಿ ಕ್ರಾಂತಿಯೇ ನಡೆದ ಬಸವಣ್ಣನವರ ಕರ್ಮ ಭೂಮಿ ಬೀದರನ ಬಸವಕಲ್ಯಾಣದಲ್ಲಿರುವ ವಿಶ್ವದ ಪ್ರಥಮ ಪಾರ್ಲಿಮೆಂಟ್ ಎಂದೇ ಖ್ಯಾತಿ ಪಡೆದ ಅನುಭವ ಮಂಟಪ ಈಗ ಪೀರ್ ಪಾಶ ದರ್ಗವಾಗಿ ಬದಲಾಗಿದೆ, ಸರ್ಕಾರದ ಇಚ್ಚಾಶಕ್ತಿಯ ಕೊರೆತೆಯಿಂದ ಬಸಣ್ಣನವರು ಅಂದು ಅನುಭವ ಮಂಟಪದಲ್ಲಿ ಕುಳಿತುಕೊಂಡು ಜನರ ಕುಂದು ಕೊರತೆಗಳನ್ನು ಆಲಿಸುತ್ತಿದ್ದ ಸ್ಥಳವದು. 771 ಶರಣರು ಆ ಸ್ಥಳದಲ್ಲಿ ಕುಳಿತುಕೊಂಡು ಸರ್ವ ಧರ್ಮದ ಒಳಿತಿಗಾಗಿ ಕೈಗೊಳುತ್ತಿದ್ದ ಕಾರ್ಯ ಆ ಸ್ಥಳವೇ ಅಂದು ಅನುಭವ ಮಂಟಪ ಎಂದು ಕರೆಯಲ್ಪಡುತಿತ್ತು. ಆ ಮೂಲ ಅನುಭವ ಮಂಟಪ ಈಗ ಪೀರ್ ಪಾಷಾ ದರ್ಗಾವಾಗಿ ಬದಲಾಗಿದೆ, ಹೈದ್ರಾಬಾದ್ ನಿಜಾಮನ ಆಳ್ವಿಕೆಗೆ ಒಳಪಟ್ಟಿದ್ದ ಈ ಪ್ರದೇಶವನ್ನು ನವಾಬನೊಬ್ಬ ನೋಡಿಕೊಳ್ಳುತ್ತಿದ್ದ. ಅಂದಿನ ಅನುಭವ ಮಂಟಪ ಕೂಡ ನವಾಬನ ವಶದಲ್ಲಿತ್ತು. ಒಳಗಡೆ ನಂದಿ, ಬಾವಿ, ಅನುಭವ ಮಂಟಪದ ಮಾದರಿ ಕಟ್ಟಡಗಳಿದ್ದು ಕಳೆದ ನೂರಾರು ವರ್ಷಗಳಿಂದ ಈ ಅನುವಭ ಮಂಟಪ ದರ್ಗಾ ಅಗಿದೆ.
ಸರ್ಕಾರ ಕೋಟ್ಯಾಂತರ ರೂ ಖರ್ಚು ಮಾಡುವ ಮೂಲಕ ಅನುಭವ ಮಂಟಪ ನಿರ್ಮಿಸುತ್ತಿದೆ. ಹೀಗಿದ್ದಲ್ಲಿ ಯಾಕೆ ಮೂಲ ಅನುಭವ ಮಂಟಪ ಪತ್ತೆ ಹಚ್ಚಬಾರದು. ಸರ್ಕಾರ ತಕ್ಷಣವೇ ಎಚ್ಚೆತ್ತುಕೊಳ್ಳಬೇಕು. ಈ ಕುರಿತು ಚರ್ಚಿಸಲು ಜೂನ್ 12ಕ್ಕೆ ಮಠಾಧೀಶರ ನೇತೃತ್ವದಲ್ಲಿ ಸಮಾವೇಶ ನಡೆಸಲು ಸಿದ್ಧತೆ ನಡೆಸಲಾಗಿದೆ.
ಮಠಾಧೀಶರ ನಡೆ ಕಲ್ಯಾಣದತ್ತ, ಬಸವಕಲ್ಯಾಣದಲ್ಲಿ ಬೃಹತ್ ಸಮಾವೇಶ ನಡೆಸುವ ಮೂಲಕ ಪೀರ್ ಪಾಷಾ ಬಂಗ್ಲಾವಾಗಿರುವ ಮೂಲ ಅನುಭವ ಮಂಪಟ ಪತ್ತೆಗೆ ಒತ್ತಡ ಹೆಚ್ಚಾಗುತ್ತಿದೆ. ಈಗಲಾದರೂ ಸರ್ಕಾರ ಬಸವಣ್ಣನವರ ಮೂಲ ಅನುಭವ ಮಂಟಪ ಪತ್ತೆಗೆ ಮುಂದಾಗುತ್ತಾ? ಮಠಾಧೀಶರು ಮತ್ತು ಬಸವಭಕ್ತರ ಬೇಡಿಕೆಗೆ ಸ್ಫಂದಿಸುತ್ತಾ ಅಂತ ಕಾದು ನೋಡಬೇಕಿದೆ.