Monday, December 23, 2024

ಲವ್ ಬರ್ಡ್ಸ್ ರಶ್ಮಿಕಾ- ವಿಜಯ್ಗೆ ಕರಣ್ ಕಾರ್ಪೆಟ್

ಗ್ಲಾಮರ್​​ ಲೋಕದ ಬಣ್ಣದ ಚಿಟ್ಟೆ ರಶ್ಮಿಕಾ ಹಾಗೂ ಹ್ಯಾಂಡ್ಸಮ್​ ಹಂಕ್ ವಿಜಯ್​​ ದೇವರಕೊಂಡ ನಡುವಿನ ಪ್ರೀತಿ, ಪ್ರೇಮ, ಪ್ರಣಯ ಮತ್ತೆ ಸುದ್ದಿಯಲ್ಲಿದೆ.  ಸದ್ಯ ಹಾಟ್​​ ಟಾಪಿಕ್​  ಅಂದ್ರೆ, ಇವರಿಬ್ರ ಬಾಲಿವುಡ್ ಡೇಟ್. ಇವ್ರು ಕದ್ದು ಮುಚ್ಚಿ ಮುದ್ದಾಡ್ತಿದ್ದಾರಾ..? ಅಥ್ವಾ ಮದ್ವೆ ಗುಡ್​​ ನ್ಯೂಸ್ ನೀಡಿ ಶಾಕ್​ ಕೊಡ್ತಾರಾ ಅಂತ ಕನ್ಫ್ಯೂಶನ್ ಆಗಿದೆ. ಯೆಸ್​​.. ಈ ಲವ್​ ಬರ್ಡ್ಸ್​​ ಮತ್ತೆ  ಕಾಣಿಸಿಕೊಂಡಿದ್ದು ಎಲ್ಲಿ ಹೇಗೆ ಅಂತೀರಾ..? ಈ ಸ್ಟೋರಿ ನೋಡಿ.

  • ಬರ್ತ್​ ಡೇ ಪಾರ್ಟಿ.. ಬ್ಲ್ಯಾಕ್ & ಬ್ಲ್ಯಾಕ್​ನಲ್ಲಿ ಮೋಡಿ..!

ಸೂಪರ್​ ಹಿಟ್​ ಸಿನಿಮಾ ಕಿರಿಕ್​ ಪಾರ್ಟಿಯಲ್ಲಿ ಮಿಂಚಿದ್ದ ರಶ್ಮಿಕಾ, ಡೈರೆಕ್ಟ್​ ಆಗಿ ಜಿಗಿದಿದ್ದು ಟಾಲಿವುಡ್​​ಗೆ. ಗೀತ ಗೋವಿಂದಂ ಚಿತ್ರದ ಮೂಲಕ ಈಕೆಯ ನಸೀಬು ಯಾರೂ ಊಹಿಸದ ಲೆವೆಲ್​ಗೆ  ಚೇಂಜ್​ ಆಯ್ತು. ರಶ್ಮಿಕಾ ಬರ್ತಾರೆ ಅಂದ್ರೆ ಟಾಲಿವುಡ್​​, ಬಾಲಿವುಡ್​ನಲ್ಲಿ ಆಲ್ವೇಸ್​ ರೆಡ್​​ ಕಾರ್ಪೆಟ್ ಹಾಕಿ​​ ವೆಲ್ಕಮ್ ಮಾಡ್ತಾರೆ​​​. ವಿಷ್ಯ ಏನಪ್ಪಾ ಅಂದ್ರೆ, ಫುಲ್​ ಡಿಮ್ಯಾಂಡ್​​ ಇರೋ ಈ ಸುಂದ್ರಿ, ಟಾಲಿವುಡ್​​ ಸೂಪರ್​ ಹೀರೋ ವಿಜಯ್​​ ದೇವರಕೊಂಡ ಮೋಹದ ಬಲೆಯಲ್ಲಿ ಬಿದ್ದಿದ್ದಾರೆ.

ಅರ್ಜುನ್​ ರೆಡ್ಡಿ ಚಿತ್ರ​​ ಬಿಗ್​ ಬ್ರೇಕ್​ ಕೊಟ್ಟ ನಂತ್ರ, ವಿಜಯ್​​ ದೇವರಕೊಂಡ  ಸಕ್ಸಸ್​​ನ ಪೀಕ್​ನಲ್ಲಿರೋದ್ರ ಜೊತೆ ಸೆನ್ಸೇಷನಲ್ ಌಕ್ಟರ್ ಆದ್ರು. ಗೀತ ಗೋವಿಂದಂ, ಡಿಯರ್ ಕಾಮ್ರೆಡ್ ಚಿತ್ರಗಳಲ್ಲಿ ಜೋಡಿಯಾಗಿದ್ದ ರಶ್ಮಿಕಾ, ವಿಜಯ್​​ ಕೆಮಿಸ್ಟ್ರಿ ಸಖತ್​ ಆಗಿಯೇ ವರ್ಕೌಟ್​ ಅಗಿತ್ತು. ಇವರಿಬ್ರ ನಡುವಿನ ಸಲುಗೆ, ಸ್ನೇಹ, ಪ್ರೀತಿ ಮೀಡಿಯಾ ಸಂದರ್ಶನಗಳಲ್ಲಿ ಎದ್ದು ಕಾಣುತ್ತಿತ್ತು. ಈ ಜೋಡಿಯ ಖಾಸಗಿ ಫೋಟೋಗಳು, ಮುತ್ತಿನ ವಿಡಿಯೋ ಸಖತ್​ ವೈರಲ್ಲಾಗಿ, ಉರಿಯೋ ಬೆಂಕಿಗೆ ತುಪ್ಪ ಸುರಿದಿದ್ವು. ಇದನ್ನೆಲ್ಲಾ ನೋಡಿದ್ದ ಸಿನಿಪ್ರಿಯರು, ಅದಕ್ಕೆ ಪ್ರೀತಿಯ ಮುದ್ರೆಯನ್ನ ಒತ್ತಿದ್ರು.

ನ್ಯೂ ಇಯರ್​ ಪಾರ್ಟಿಯಲ್ಲಿ ಗೋವಾಗೆ ಹೋಗಿದ್ದು, ವಿಜಯ್​​ ಮನೆಯಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದು, ಇದೆಲ್ಲಾ ಹಳೇ ಕಥೆ ಬಿಡಿ. ಕೇಳಿದ್ದೆ ಕೇಳೋಕೆ ನಿಮಗೂ ಬೇಜಾರಾಗುತ್ತೆ ಅಂತಾ ನಮಗೂ ಗೊತ್ತು. ಆದ್ರೆ, ಈ ಜೋಡಿ ಕರಣ್​​ ಬರ್ತ್​​ ಪಾರ್ಟಿಯಲ್ಲಿ  ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ.  ಇಬ್ರೂ ಬ್ಲಾಕ್​ ಅಂಡ್​​ ಬ್ಲಾಕ್​ ಡ್ರೆಸ್​​ನಲ್ಲಿ ಮಿಂಚಿದ್ದಾರೆ. ಅರೇ..!  ಏನ್ ಮ್ಯಾಚಿಂಗ್​ ಮ್ಯಾಚಿಂಗ್​​. ಏನಿದ್ರ ಹಿಂದಿನ ಮ್ಯಾಟ್ರು ಅಂತ ಎಲ್ರೂ ಗುಸು ಗುಸು ಮಾತನಾಡಿಕೊಳ್ತಿದ್ದಾರೆ.

ಬಾಲಿವುಡ್​ನ ಶ್ರೀಮಂತ ನಿರ್ಮಾಪಕ ಕರಣ್ ಜೋಹರ್​​ ಬರ್ತ್​​ ಡೇ ಪಾರ್ಟಿ ಪ್ರತಿ ವರ್ಷವೂ ಅದ್ಧೂರಿಯಾಗಿ ನಡೆಯುತ್ತೆ. 50ನೇ ವಸಂತಕ್ಕೆ ಕಾಲಿಟ್ಟ ಕರಣ್,​​ ಆತ್ಮಿಯರಿಗೆ ಮಾತ್ರ ಆಹ್ವಾನ ನೀಡಿದ್ರು. ಈ ಪಾರ್ಟಿಯಲ್ಲಿ ವಿಜಯ್​​ ದೇವರಕೊಂಡ, ರಶ್ಮಿಕಾ ಕಾಣಿಸಿಕೊಂಡು ಶಾಕ್ ಕೊಟ್ರು. ಕೈ ಕೈ ಹಿಡಿದು ಫೋಟೋಗೆ ಪೋಸ್​ ಕೊಡದಿದ್ರೂ, ಸೌತ್​​ ಇಂಡಸ್ಟ್ರಿಯಿಂದ ಹೋಗಿದ್ದ ಈ ಜೋಡಿ ಎಲ್ಲರ ಕಣ್ಣು ಕುಕ್ಕಿತು. ಬಾಲಿವುಡ್​​ ಸ್ಟಾರ್​ ಕಲಾವಿದರ ಜೊತೆಗೂಡಿ ಮಸ್ತ್ ಪಾರ್ಟಿ ಮಾಡಿದ್ರು.

ರಾಕೇಶ್​​ ಆರುಂಡಿ, ಫಿಲ್ಮ್​​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES