Sunday, January 19, 2025

ಶಿಕ್ಷಕರು ಬಿಜೆಪಿಯಿಂದ ಭ್ರಮನಿರಸರಾಗಿದ್ದಾರೆ : ಸಲೀಂ ಅಹ್ಮದ್

ಧಾರವಾಡ : ಬಸವರಾಜ ಗುರಿಕಾರ ಅವರು ಗೆಲುವು ಸಾಧಿಸುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಧಾರವಾಡದಲ್ಲಿ ಸಲೀಂ ಅಹ್ಮದ್ ಹೇಳಿದ್ದಾರೆ.

ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ ಗುರಿಕಾರ ಅವರು ಗೆಲುವು ಸಾಧಿಸುತ್ತಾರೆ ಎಂಬ ವಿಶ್ವಾಸ ನಮಗಿದೆ. ಈ ವರ್ಷ ಗುರಿಕಾರ ಅವರನ್ನು ಗೆಲ್ಲಿಸುತ್ತಾರೆ. ಶಿಕ್ಷಕರು ಬಿಜೆಪಿಯಿಂದ ಭ್ರಮನಿರಸರಾಗಿದ್ದಾರೆ. ಯಾತಕ್ಕಾಗಿ ಬಿಜೆಪಿಗೆ ಮತ ಹಾಕಬೇಕು? ಬೆಲೆ ಏರಿಕೆಗೆ, ಭ್ರಷ್ಟಾಚಾರಕ್ಕಾಗಿ ಅಥವಾ ಯಾವುದೇ ಒಂದು ಜನ ವಿಶ್ವಾಸ ಇಲ್ಲದ ಪಕ್ಷಕ್ಕೆ ಮತ ಹಾಕಬೇಕಾ? ಈಗಾಗಲೇ ನಿರಂತರವಾಗಿ 2 ವರ್ಷಗಳಿಂದ ಶಿಕ್ಷಕರ ಮೇಲೆ ಅನ್ಯಾಯವಾಗುತ್ತಿದೆ ಎಂದರು.

ಅದಲ್ಲದೇ, ತಲೆ ತಗ್ಗಿಸುವಂತೆ ಕೆಲಸ ಈ ಸರ್ಕಾರದಿಂದ ನಡೆಯುತ್ತಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಶಿಕ್ಷಕರ ನೇಮಕಾತಿ, ಪೊಲೀಸ್ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಇದರಿಂದ ಶಿಕ್ಷಕರು ಅರ್ಥ ಮಾಡಿಕೊಳ್ಳುತ್ತಾರೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗುರಿಕಾರ ಅವರನ್ನು ಗೆಲ್ಲಿಸುತ್ತಾರೆ. ಸೋಲಿನ ಭಯದಿಂದ ಹೆದರಿ ಹೊರಟ್ಟಿ ಬಿಜೆಪಿಗೆ ಸೇರಿದ್ದಾರೆ ಎಂಬ ಸಂದೇಶ ಶಿಕ್ಷಕರಿಗೆ ಹೋಗಿದೆ ಎಂದು ಹೇಳಿದರು.

ಇನ್ನು, ಏಳು ಬಾರಿ ಸೆಕ್ಯುಲರ್ ಪಾರ್ಟಿಯಿಂದ ಸ್ಪರ್ಧೆ ಮಾಡಿದ್ದರಿಂದ ಜ್ಯಾತ್ಯಾತೀತ ಮತಗಳು ಅವರಿಗೆ ಹೋಗುತ್ತಿದ್ದವು. ಆದರೆ ಇವತ್ತು ಅಧಿಕಾರದ ಆಸೆಯಿಂದೆ ಚೇರ್‌ಮೆನ್ ಆಗಬೇಕು ಎಂಬ ಆಸೆಯಿಂದ ಅವರು ಬಿಜೆಪಿ ಸೇರಿದ್ದಾರೆ. ಶಿಕ್ಷಕರ ಅರ್ಥ ಮಾಡಿಕೊಳ್ಳುತ್ತಾರೆ. ಗುರಿಕಾರ ಮೇಲೆ ಯಾವುದೇ ಕಳಂಕ ಇಲ್ಲ. ಶಿಕ್ಷಕರು ಬದಲಾವಣೆ ಬಯಸುತ್ತಿದ್ದಾರೆ ಗುರಿಕಾರ ಈ ಬಾರಿ ಗೆಲ್ಲುತ್ತಾರೆ ಎಂದರು.

RELATED ARTICLES

Related Articles

TRENDING ARTICLES