Friday, November 22, 2024

ಉತ್ತರಕನ್ನಡಕ್ಕೆ ಕಾದಿದೆಯಾ ಭೂ ಕಂಟಕ..?

ಕಾರವಾರ: ಉತ್ತರಕನ್ನಡ ಜಿಲ್ಲೆಯ ಐದು ಸ್ಥಳದಲ್ಲಿ ಭಾರಿ ಭೂಕುಸಿತವಾಗಲಿದೆ ಎಂದು ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ಎಚ್ಚರಿಸಿದೆ. ಕೈಗಾ ಅಣುಸ್ಥಾವರ, ಕೊಡಸಳ್ಳಿ ಡ್ಯಾಮ್ ಸುತ್ತಮುತ್ತಲಿನ ಪ್ರದೇಶ ಅಪಾಯದಲ್ಲಿದೆ ಅಂತಾ ವರದಿ ಮಾಡಲಾಗಿದೆ. ರಾಜ್ಯದಲ್ಲಿರುವ ಏಕೈಕ ಅಣುವಿದ್ಯುತ್ ಸ್ಥಾವರಕ್ಕೆ ಅಪಾಯ ಕಾದಿದ್ಯಾ ಅನ್ನೋ ಆತಂಕ ಹೆಚ್ಚಾಗಿದೆ.

ಕಳೆದ ವರ್ಷ ಸುರಿದ ಮಹಾ ಮಳೆಯಿಂದ ಭೂಕುಸಿತವಾಗಿತ್ತು.ಈ ಬೆನ್ನಲ್ಲೇ ಈ ಬಾರಿಯೂ ಗುಡ್ಡ ಕುಸಿಯುವ ಮುನ್ನೆಚ್ಚರಿಕೆ ನೀಡಲಾಗಿದೆ.ಭೂ ಕುಸಿತವಾದ ಅಣಶಿ ಭಾಗದಲ್ಲಿ ಕೈಗಾ ಅಣುಸ್ಥಾವರ ಹಾಗೂ ಕೊಡಸಳ್ಳಿ ಡ್ಯಾಮ್‌ಗಳು ಇದ್ದು ಸದ್ಯ ಸುತ್ತಮುತ್ತಲೂ ಗುಡ್ಡ ನಿರಂತರ ಕುಸಿಯುತ್ತಿದೆ. ಇನ್ನು ಯಲ್ಲಾಪುರ ಭಾಗದ ಕಳೆಚೆಯಲ್ಲಿ ಚಿಕ್ಕ ಹಳ್ಳದಲ್ಲಿ ದೊಡ್ಡ ಕಂದಕ ನಿರ್ಮಾಣವಾಗಿದೆ.ಈ ಭಾಗದಲ್ಲಿ 331ಮನೆಗಳಿದ್ದು, 1212 ಜನರು ವಾಸವಾಗಿದ್ದಾರೆ. ಆದ್ರೆ, ಇಲ್ಲಿನ ಜನರನ್ನು ಈವರೆಗೂ ಸ್ಥಳಾಂತರ ಮಾಡಿಲ್ಲ. ಹೀಗಾಗಿ ಇದೀಗ ಕೇಂದ್ರ ಅಧ್ಯಯನ ತಂಡದ ವರದಿ ಈ ಭಾಗದ ಜನರಲ್ಲಿ ಮತ್ತಷ್ಟು ಆತಂಕವನ್ನುಂಟು ಮಾಡಿದ್ದು ಜಿಲ್ಲಾಧಿಕಾರಿಗಳು ಜನರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ ಅಂತಿದ್ದಾರೆ.

ಒಟ್ಟಾರೆ ಸದ್ಯ ಅಸಾನಿ ಚಂಡಮಾರುತದಿಂದ ಜಿಲ್ಲೆಯ ಕೆಲವು ಭಾಗದಲ್ಲಿ ಮಾತ್ರ ಒಂದಿಷ್ಟು ಹಾನಿಯಾಗಿದೆ.ಆದ್ರೆ, ಮತ್ತೆ ಹೆಚ್ಚಿನ ಮಳೆ ಬಂದರೆ ಭೂಕುಸಿತವಾಗಿ ಅಪಾರ ಹಾನಿ ಸಂಭವಿಸುವ ಸಾಧ್ಯತೆಗಳಿದೆ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತು ಭೂ ಕುಸಿತವಾದ ಜನವಸತಿ ಸ್ಥಳದಿಂದ ಜನರನ್ನು ಬೇರೆಡೆ ಸ್ಥಳಾಂತರಿಸಬೇಕಿದೆ.

RELATED ARTICLES

Related Articles

TRENDING ARTICLES