ಕಾರವಾರ : ಪ್ರತಿ ಭಾರೀಯೂ ಸರಕಾರ ಬಜೆಟ್ ನಲ್ಲಿ ಸಮುದ್ರದಲ್ಲಿನ ಹೂಳೆತ್ತಲು ಸಾವಿರಾರೂ ಕೋಟಿ ಬಿಡುಗಡೆ ಮಾಡಿ ಕಾಮಗಾರಿಯನ್ನ ಮಾಡಲಾಗುತ್ತದೆ. ಆದ್ರೆ ಸಮಸ್ಯೆ ಮಾತ್ರಾ ಜೀವಂತವಾಗಿಯೆ ಉಳಿದುಕೊಳ್ಳುತ್ತಿದೆ.
ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಮೀನುಗಾರಿಕಾ ಬಂದರಿನಲ್ಲಿ ಹೂಳಿನ ಸಮಸ್ಯೆ ಉಂಟಾಗಿದ್ದು, ಆದ್ರೂ ಸ್ಥಳೀಯ ಆಡಳಿತ ಮೀನುಗಾರರ ಸಂಕಷ್ಟವನ್ನ ಆಲಿಸದಂತಾಗಿದೆ. ಹೂಳು ತುಂಬಿಕೊಂಡಿರುವುದರಿಂದ ಬಂದರಿನಲ್ಲಿ ಲಂಗರು ಹಾಕಿದ್ದ ಬೋಟುಗಳು ಪಲ್ಟಿಯಾಗುತ್ತಿದ್ದು ಭಟ್ಕಳ ಮೀನುಗಾರಿಕಾ ಬಂದರಿನಲ್ಲಿ ನಿತ್ಯವೂ ಇತಂಗ ಘಟನೆಗಳು ನಡೆಯುವಂತಾಗಿದೆ. ಬಂದರು ಪ್ರದೇಶದಲ್ಲಿ ಹೂಳು ತುಂಬಿದ್ದರಿಂದ ಇಂದ ನಾಲ್ಕು ಮೀನುಗಾರಿಕಾ ಬೋಟ್ ಪಲ್ಟಿಯಾಗಿದೆ.
ಗಗನ ಹೆಸರಿನ ಬೋಟುಗಳಿಗೆ ಹಾನಿ ಉಂಟಾಗಿದ್ದು, ಘಟನೆಯಿಂದ ಯಾಂತ್ರಿಕ ದೋಣಿಗಳಿಗೂ ಹಾನಿ ಉಂಟಾಗುವಂತಾಗಿದೆ. ಸರಕಾರದ ಪ್ರತಿ ವರ್ಷ ಹಣ ಬಿಡುಗಡೆ ಮಾಡಿದ್ದರೂ ಸಹ ಕಳೆದ ನಾಲ್ಕೈದು ವರ್ಷದಿಂದ ಪರಿಹಾರ ಸಿಗದೆ ಸಮಸ್ಯೆ ಮತ್ತಷ್ಟು ಬಿಗಡಾಯಿಸುವಂತಾಗಿದೆ ಬೋಟ್ ಅವಘಡದಿಂದ ಭಾರೀ ನಷ್ಟ ಉಂಟಾಗಿದ್ದು, ಸರಕಾರ ಕೂಡಲೆ ಹೂಳೆತ್ತು ಕೆಲ ಮಾಡಬೇಕು ಎಂದು ಸ್ಥಳೀಯ ಮೀನುಗಾರರು ಒತ್ತಾಯಿಸುತ್ತಿದ್ದಾರೆ.