Saturday, April 20, 2024

ವರ್ಷದ ಮೊದಲ ಚಂದ್ರಗ್ರಹಣ :ಜಾತಕ ಫಲದಲ್ಲಿ ಶುಭವೋ?ಅಶುಭವೋ?

ಇಂದು (ಮೇ 16 ) ವರ್ಷದ ಮೊದಲ ಚಂದ್ರಗ್ರಹಣವಾಗಿದ್ದು. ವಿಶ್ವದ ಹಲವು ಭಾಗಗಳಲ್ಲಿ ಗೋಚರಿಸಲಿದೆ. ಆದರೆ, ಈ ಖಗ್ರಾಸ ಚಂದ್ರ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಸೂರ್ಯ, ಭೂಮಿ ಮತ್ತು ಚಂದ್ರ ಮೂರು ಸರಳ ರೇಖೆಯಲ್ಲಿ ಬಂದರೆ, ಖಗೋಳದ ಈ ಘಟನೆಯಲ್ಲಿ ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ ಮತ್ತು ಈ ಸ್ಥಿತಿಯನ್ನು ಚಂದ್ರ ಗ್ರಹಣ ಎಂದು ಕರೆಯಲಾಗುತ್ತದೆ.

ಭಾರತದಲ್ಲಿ ಈ ಚಂದ್ರ ಗ್ರಹಣದ ಸಮಯ
ಭಾರತೀಯ ಕಾಲಮಾನದ ಪ್ರಕಾರ ವರ್ಷದ ಈ ಮೊದಲ ಚಂದ್ರ ಬೆಳಗ್ಗೆ 07:57 ಕ್ಕೆ ಆರಂಭವಾಗಿ ಮಧ್ಯಾಹ್ನ 12.20 ರವರೆಗೆ ಇರಲಿದೆ. ಅಂದರೆ, ಈ ಚಂದ್ರಗ್ರಹಣದ ಗ್ರಹಣ ಕಾಲವಧಿ 5 ಗಂಟೆವರೆಗೆ ಇರಲಿದೆ. ಇನ್ನು ಭಾರತದಲ್ಲಿ ಇದು ಗೋಚರಿಸದೇ ಇರುವ ಕಾರಣ ಇದರ ಸೂತಕ ಕಾಲಕ್ಕೆ ಮಾನ್ಯತೆ ಇರುವುದಿಲ್ಲ.

ಬ್ಲಡ್ ಮೂನ್ ಗೋಚರಕ್ಕೆ ಕಾರಣ
ಚಂದ್ರ ಗ್ರಹಣದ ದಿನ ಚಂದ್ರನ ಬಣ್ಣ ಕೆಂಪು ಬಣ್ಣಕ್ಕೆ ತಿರುಗಲಿದೆ. ಇದೇ ಕಾರಣದಿಂದ ಇದನ್ನು ಬ್ಲಡ್ ಮೂನ್ ಎಂದು ಕರೆಯಲಾಗುತ್ತದೆ. ಈ ಗ್ರಹಣ ಕಾಲದಲ್ಲಿ ಸೂರ್ಯನ ಬೆಳಗು ಭೂಮಿಯ ಮೂಲಕ ಹಾಯ್ದು ಚಂದ್ರನ ಮೇಲೆ ಬೀಳುವುದೇ ಇದಕ್ಕೆ ಕಾರಣ ಎಂದು ವಿಜ್ಞಾನಿಗಳು ಹೇಳುತ್ತಾರೆ. ಹೀಗಾಗಿ ಗ್ರಹದ ನೆರಳು ಬೀಳುವ ಕಾರಣ ಚಂದ್ರನ ಬಣ್ಣ ಗ್ರಹಣ ಕಾಲದಲ್ಲಿ ಬದಲಾಗುತ್ತದೆ.

  1. ಮೇಷ: ದೂರ ಪ್ರಯಾಣ, ಮದುವೆ, ಪಾರ್ಟನರ್​ಶಿಪ್ ವ್ಯವಹಾರ, ಟ್ರಾನ್ಸ್​ಫರ್​ಗೆ ಸಂಬಂಧಿಸಿದ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು. ಮತ್ತು ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ.
  2. ವೃಷಭ: ಸಾಲ, ಮಾಟ-ಮಂತ್ರ, ದೃಷ್ಟಿ ದೋಷ, ಶತ್ರ ಬಾಧೆ, ಆರೋಗ್ಯ ಇಂಥ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು. ಸಾಧಾರಣಾ ಫಲಗಳ ನಿರೀಕ್ಷೆ, ಕುಟುಂಬದಲ್ಲಿ ಅನಾರೋಗ್ಯ ಇರಲಿದೆ.
  3. ಮಿಥುನ: ಕುಟುಂಬದಲ್ಲಿ ನೆಮ್ಮದಿಯ ವಾತಾವರಣ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅಲ್ಪಪ್ರಗತಿ. ಸಂತಾನ ಹಾಗೂ ದೊಡ್ಡ ದೊಡ್ಡ ಕೆಲಸಗಳಿಗೆ ಕೈ ಹಾಕಿದ್ದಲ್ಲಿ ಗ್ರಹಣದ ಪ್ರಭಾವ ಇರುತ್ತದೆ.
  4. ಕರ್ಕಾಟಕ: ಪರಸ್ಥಳವಾಸ, ಬಂಧು ಮಿತ್ರರಲ್ಲಿ ದ್ವೇಷ. ಮನಸ್ಸಿಗೆ ನೆಮ್ಮದಿ ಇಲ್ಲದಿವಿರುವಿಕೆ. ಮಾತನಾಡುವಾಗ ಜಾಗ್ರತೆ. ತಾಯಿಯ ಆರೋಗ್ಯದ ವಿಚಾರ, ವಿದ್ಯೆ, ಜ್ಞಾನ, ತಿಳಿವಳಿಕೆ ಈ ಬಗ್ಗೆ ಎಚ್ಚರ ಇರಲಿ.
  5. ಸಿಂಹ: ಸಹೋದರರ ವಿಚಾರದಲ್ಲಿ ಜಾಗ್ರತೆಯಿಂದ ಇರಬೇಕು.ಶುಭಾಶುಭಗಳ ಮಿಶ್ರಫಲ ಕಾಣುವಿರಿ
    ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ ಇರಲಿದೆ.
  6. ಕನ್ಯಾ: ಆರ್ಥಿಕ ವಿಚಾರಗಳು ಹಾಗೂ ಕುಟುಂಬಕ್ಕೆ ಸಂಬಂಧಿಸಿದ ಸಂಗತಿಗಳಲ್ಲಿ ಎಚ್ಚರಿಕೆ ಇರಲಿ.ಯತ್ನಕಾರ್ಯ ಸಿದ್ಧಿ. ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆ. ಕೃಷಿಯಲ್ಲಿ ಅಭಿವೃದ್ಧಿವಾಗಲಿದೆ.
  7. ತುಲಾ: ನಿಮ್ಮದೇ ರಾಶಿಯಲ್ಲಿ ಗ್ರಹಣ ನಡೆಯುವುದರಿಂದ ಮಾನಸಿಕ ಚಿಂತೆ, ಆರೋಗ್ಯ, ಉದ್ಯೋಗ ಒಟ್ಟಾರೆ ಎಲ್ಲ ವಿಚಾರದಲ್ಲೂ ಎಚ್ಚರಿಕೆ ಮುಖ್ಯ.
  8. ವೃಶ್ಚಿಕ: ಏನನ್ನಾದರೂ ಕಳೆದುಕೊಂಡು ದುಃಖ ಅನುಭವಿಸುವಂತಾಗುತ್ತದೆ. ಆ ಬಗ್ಗೆ ನಿಗಾ ಇರಲಿ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ತೀರ್ಥಯಾತ್ರೆಯಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.
  9. ಧನುಸ್ಸು: ನೀವು ವ್ಯಾಪಾರ ಮಾಡುವವರಾಗಿದ್ದರೆ, ಅಥವಾ ನಿಮಗೆ ಲಾಭಾಂಶ ಬರಬೇಕಾಗಿದ್ದಲ್ಲಿ ಅದರಲ್ಲಿ ಸಮಸ್ಯೆಗಳಾಗಬಹುದು. ಜತೆಗೆ ಆರೋಗ್ಯದ ಬಗ್ಗೆಯೂ ಗಮನ ನೀಡಿ.
  10. ಮಕರ: ಉದ್ಯೋಗ, ಸ್ನೇಹ, ಮದುವೆ ವಿಚಾರದಲ್ಲಿ ಜಾಗ್ರತೆ ವಹಿಸುವುದು ಬಹಳ ಮುಖ್ಯ ಆಗುತ್ತದೆ.
  11. ಕುಂಭ: ಪಿತ್ರಾರ್ಜಿತ ಆಸ್ತಿ, ಮಾಟ-ಮಂತ್ರ, ದೃಷ್ಟಿ ದೋಷ ಇಂಥ ಸಂಗತಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು.
  12. ಮೀನ: ಮಾನಹಾನಿ, ಮನಸ್ಸಿಗೆ ಚಿಂತೆ. ಕುಟುಂಬದಲ್ಲಿ ಅಹಿತಕರ ವಾತಾವರಣ. ನಿಮ್ಮ ಆರೋಗ್ಯ, ಮಕ್ಕಳ ಆರೋಗ್ಯ ಹಾಗೂ ಸಂಗಾತಿ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು.

RELATED ARTICLES

Related Articles

TRENDING ARTICLES