Monday, December 23, 2024

PSI ಅಕ್ರಮ ನೇಮಕಾತಿ ಪ್ರಕರಣ : ಶ್ರೀಧರ್ ಮನೆಯಲ್ಲಿ 16 ಲಕ್ಷ ಹಣ ಜಪ್ತಿ

ಬೆಂಗಳೂರು: PSI ಅಕ್ರಮ ನೇಮಕಾತಿ ಪ್ರಕರಣದಲ್ಲಿ CID ಅಧಿಕಾರಿಗಳು ಮಹಾಲಕ್ಷ್ಮಿ ಲೇಔಟ್ ನ ಶ್ರೀಧರನ ಮನೆಯಲ್ಲಿ ಪರಿಶೀಲನೆ ನಡೆಸಿ ಲಕ್ಷ ಲಕ್ಷ ಹಣ,ಒನ್ ಟೈಂ ಲಾಕ್ ಪತ್ತೆಯಾಗಿದೆ.

PSI ಅಕ್ರಮ ಪ್ರಕರಣದಲ್ಲಿ ನಿನ್ನೆ CAR ​ ಹೆಡ್ ಕಾನ್ಸ್ ಟೇಬಲ್ ಶ್ರೀಧರ್ ಮನೇಲಿ 16 ಲಕ್ಷ ಹಣ ಜಪ್ತಿ ಮಾಡಲಾಗಿದ್ದು, CID ಅಧಿಕಾರಿಗಳು ಮಹಾಲಕ್ಷ್ಮಿ ಲೇಔಟ್ ನ ಶ್ರೀಧರನ ಮನೆಯಲ್ಲಿ ಪರಿಶೀಲನೆ ನಡೆಸಿದರು. ಹೀಹಾಗಿ PSI ಅಕ್ರಮದಲ್ಲಿ ಶ್ರೀಧರ ಹಾಗೂ ಡಿವೈಎಸ್ಪಿ ಶಾಂತಕುಮಾರ್​ನ ಮನೆಯಲ್ಲಿ ಲಕ್ಷ ಲಕ್ಷ ಹಣ ಸಿಕ್ಕಿದೆ.

ಅದುವಲ್ಲದೇ, ಒನ್ ಟೈಮ್ ಲಾಕನ್ನ ಮನೆಯಲ್ಲೇ ಇಟ್ಟುಕೊಂಡಿದ್ದ ಶಾಂತಕುಮಾರ. ಆಡುಗೋಡಿ ಕ್ವಾಟ್ರಸ್ ನಲ್ಲಿರುವ ಶಾಂತಕುಮಾರನ ಮನೆಯಲ್ಲಿ ಪತ್ತೆಯಾಗಿದ್ದು, OMR ಶೀಟ್​ಗಳನ್ನ ಸಿಐಡಿ ಕಚೇರಿಯಲ್ಲಿ ಟ್ರಂಕ್​ನಲ್ಲಿ ಇಡಲಾಗುತ್ತೆ. ಆ OMR ಶೀಟ್ ಗಳನ್ನ ಟ್ರಂಕ್ ನಲ್ಲಿಟ್ಟು ಒನ್ ಟೈಂ ಲಾಕ್ ಹಾಕಿ ಇಡಲಾಗುತ್ತೆ. ಒನ್ ಟೈಂ ಲಾಕ್ ಕೇಬಲನ್ನ ಹಾಕಿದ್ರೆ ಯಾವುದೇ ಕಾರಣಕ್ಕೂ ಮತ್ತೆ ಓಪನ್ ಮಾಡೋಕೆ ಸಾಧ್ಯವೇ ಇಲ್ಲ. ಆದರೆ ಶಾಂತಕುಮಾರ್ ಆ ಒನ್ ಟೈಂ ಲಾಕನ್ನ ತನ್ನ ಮನೆಯಲ್ಲೇ ಇಟ್ಟುಕೊಳ್ತಿದ್ದ ಎನ್ನಲಾಗಿದೆ.

ಇನ್ನು, ಆ ಒನ್ ಟೈಂ ಲಾಕನ್ನ ಕಟ್ ಮಾಡಿ ಮನೆಯಲ್ಲಿರುವ ಒನ್ ಟೈಂ ಲಾಕನ್ನ ಟ್ರಂಕ್ ಗೆ ಹಾಕ್ತಿತ್ತು ಶಾಂತಕುಮಾರ್ ನ ಟೀಂ ಒನ್ ಟೈಂ ಲಾಕನ್ನ ಕತ್ತರಿಸಿ OMR ಪೇಪರನ್ನ ತಿದ್ದಿ ಮತ್ತೆ ಹೊಸ ಲಾಕನ್ನ ಹಾಕ್ತಿತ್ತು ಶಾಂತಕುಮಾರ್ ಟೀಂ ಇದೀಗ ಶಾಂತಕುಮಾರ್ ಮನೆಯಲ್ಲಿ 5 ಇನ್ ಟೈಂ ಲಾಕ್ ಹಾಗೂ ನೂರಾರು ಸಿಡಿಗಳನ್ನ ಸಿಐಡಿ ವಶಕ್ಕೆ ತೆಗೆದುಕೊಂಡಿದೆ. ಶಾಂತಕುಮಾರ್ ನ ಮನೆಯಲ್ಲಿ ಸಿಕ್ಕ ಸಿಡಿಯಲ್ಲಿ ಹಳೇ PSI ಟೀಂ ಅಕ್ರಮಕಾಂಡ ಪತ್ತೆಯಾಗಿದೆ. ಹೀಗಾಗಿ ಸಿಐಡಿಯಿಂದ ತನಿಖೆ ಚುರುಕುಗೊಳಿಸಿದ್ದಾರೆ.

RELATED ARTICLES

Related Articles

TRENDING ARTICLES