Monday, December 23, 2024

ಒಂದುವರೆ ತಿಂಗಳಲ್ಲಿ ಕೋಟಿ ಕೋಟಿ ಸಂಪಾದಿಸಿದ ಮಲೆ ಮಾದಪ್ಪ

ಚಾಮರಾಜನಗರ : ಮಲೈಮಹದೇಶ್ವರ ದೇವಸ್ಥಾನದ ಹುಂಡಿಯ ಏಣಿಕೆ ಕಾರ್ಯ ಪೂರ್ಣಗೊಂಡಿದೆ. ದಿನನಿತ್ಯದ ವಿವಿಧ ಸೇವೆಗಳನ್ನು ಹೊರತುಪಡಿಸಿ ಹುಂಡಿಯಲ್ಲೇ 34 ದಿನಗಳಲ್ಲಿ ಬಾರಿ ಮೊತ್ತದ ಹಣವನ್ನು ಮಾದಪ್ಪ ಹುಂಡಿಗೆ ಭಕ್ತರು ಸಮರ್ಪಿಸಿದ್ದಾರೆ.

ನಿನ್ನೆ ಬೆಳಗ್ಗೆಯಿಂದ ತಡರಾತ್ರಿಯವರೆಗೂ ಮಾದಪ್ಪನ ಹುಂಡಿ ಏಣಿಕೆ ಕಾರ್ಯ ನಡೆದಿದ್ದು, ಒಂದುವರೆ ತಿಂಗಳಲ್ಲಿ ಸುಮಾರು ಎರಡುವರೆ ಕೋಟಿ ತನಕ ಭಕ್ತರು ಬೆಟ್ಟದ ಮಾದಪ್ಪನಿಗೆ ಕಾಣಿಕೆಯಾಗಿ ಹುಂಡಿಗೆ ಅರ್ಪಿಸಿದ್ದಾರೆ.

ಇನ್ನು ಬರೋಬ್ಬರಿ 2,57,25,859 ನಗದು, 127 ಗ್ರಾಂ ಚಿನ್ನ, 3,447 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ದಿನೇ ದಿನೇ ಭಕ್ತ ಸಮೂಹವನ್ನು‌ ಹೆಚ್ಚಿಸಿಕೊಳ್ಳುತ್ತಿರುವ ಮಲೈಮಾದಪ್ಪ. ರಾಜ್ಯವಷ್ಟೇ ಅಲ್ಲದೇ ಹೊರರಾಜ್ಯಗಳಿಂದಲ್ಲೂ ಭಕ್ತರು ಬಂದು ದರ್ಶನವನ್ನು ಪಡೆಯುತ್ತಿದ್ದಾರೆ.

RELATED ARTICLES

Related Articles

TRENDING ARTICLES