Thursday, December 19, 2024

ಲೋಕಸಭೆ ಚುನಾವಣೆಗೆ ನಡೆಸಿದೆ ಕೈ’ ಪಡೆ ಕಸರತ್ತು

ನವದೆಹಲಿ: ಸತತ ಸೋಲು ಆಂತರಿಕ ಕಿತ್ತಾಟ. ಎಲ್ಲೂ ಫಲಕೊಡದ ಗೆಲುವಿನ ಲೆಕ್ಕಾಚಾರ. ಏನಾದ್ರೂ ಮಾಡಲೇಬೇಕಾದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ನಾಯಕರು. ಹೌದು, 2024ರ ಲೋಕಸಭಾ ಚುನಾವಣೆ ಕಾಂಗ್ರೆಸ್‌ ಪಡೆಗೆ ಅತೀ ಮುಖ್ಯವಾಗಿದೆ. ಅಲ್ಲೂ ಸೋತ್ರೆ ಪರಿಸ್ಥಿತಿ ಇನ್ನು ಬಿಗಡಾಯಿಸಲಿದೆ. ಆದ್ರೆ, ಒಂದು ಮದ್ದು ಹುಡುಕಲೇ ಬೇಕಿದಾ ಪರಿಸ್ಥಿತಿಯಲ್ಲಿರುವ ಎಐಸಿಸಿ ತುಂಬಾನೆ ಲೆಕ್ಕಾಚಾರದಲ್ಲಿ ತೊಡಗಿದೆ. ಈ ನಿಟ್ಟಿನಲ್ಲಿ ಉದಯಪುರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಚಿಂತನ ಶಿಬಿರ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ.

ದೇಶದ ಪ್ರಸಕ್ತ ರಾಜಕೀಯ ಪರಿಸ್ಥಿತಿ ಲಾಭ ಪಡೆಯುವುದು. ಆರ್ಥಿಕ ಸ್ಥಿತಿಗತಿ, ಸಾಮಾಜಿಕವಾಗಿ ನಡೆಯುತ್ತಿರುವ ವಿದ್ಯಮಾನಗಳು, ಮಹಿಳೆಯರು, ಯುವಕರು, ರೈತರು, ಕೂಲಿ ಕಾರ್ಮಿಕರು, ಪರಿಶಿಷ್ಟ ಜಾತಿಯವರು, ಪರಿಶಿಷ್ಟ ಪಂಗಡದವರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡೋದಷ್ಟೇ ಅಲ್ಲ ಅವುಗಳನ್ನು ಮತಗಳಾಗಿ ಕನ್ವರ್ಟ್‌ ಮಾಡೋದು ಕಾಂಗ್ರೆಸ್‌ ಲೆಕ್ಕಾಚಾರವಾಗಿದೆ.

2024ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಹೇಗೆ ಸಜ್ಜಾಗಬೇಕು. ಎರಡನೇಯದಾಗಿ 2024ರ ಲೋಕಸಭಾ ಚುನಾವಣೆಗೂ ಮೊದಲು ಬರುವ ಗುಜರಾತ್, ಹಿಮಾಚಲ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಛತ್ತೀಸ್ ಗಢ ಹಾಗೂ ರಾಜಸ್ಥಾನಗಳ ವಿಧಾನಸಭಾ ಚುನಾವಣೆಗಳಿಗೆ ಯಾವ ರೀತಿಯ ಸನ್ನದ್ಧವಾಗಬೇಕು ಅನ್ನೋ ಲೆಕ್ಕಾಚಾರಕ್ಕೆ ಅಧಿಕೃತ ವೇದಿಕೆ ಅಂದ್ರೆ ತಪ್ಪಾಗಲ್ಲ. ಈ ಶಿಬಿರದಲ್ಲಿ 400ಕ್ಕೂ ಹೆಚ್ಚು ಕೈ ನಾಯಕರು ಪಾಲ್ಗೊಂಡು ಪಕ್ಷಕ್ಕೆ ಬಲ ತುಂಬುವ ಕೆಲ್ಸ ಮಾಡ್ತಿದ್ದಾರೆ.

ಸಾಮೂಹಿಕ ಪ್ರಯತ್ನದಿಂದ ಮಾತ್ರ ಸುಧಾರಣೆ ಸಾಧ್ಯ. ಕಾಂಗ್ರೆಸ್ ಪಕ್ಷ ನಮಗೆಲ್ಲರಿಗೂ ಸಾಕಷ್ಟು ನೀಡಿದೆ. ಈಗ ಪಕ್ಷದ ಋಣ ತೀರಿಸುವ ಸಮಯ ಬಂದಿದೆ. ಕಾಂಗ್ರೆಸ್ ಪಕ್ಷ ನಮಗೆಲ್ಲರಿಗೂ ಸಾಕಷ್ಟು ನೀಡಿದೆ. ಈಗ ಪಕ್ಷದ ಋಣ ತೀರಿಸುವ ಸಮಯ ಬಂದಿದೆ. ಚುನಾವಣಾ ವೈಫಲ್ಯವನ್ನು ನಾವು ಮರೆಯಬಾರದು. ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದ್ದು, ಇದೊಂದು ಉತ್ತಮ ಅವಕಾಶ ಆಗಿದೆ ಎಂದರು.

ಇನ್ನು ಚಿಂತನ ಶಿಬಿರದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಅಜಯ್ ಮಾಕನ್, ಒಂದು ಕುಟುಂಬ, ಒಂದು ಟಿಕೆಟ್ ನಿಯಮದ ಬಗ್ಗೆ ಸಂಪೂರ್ಣ ಒಮ್ಮತವಿದೆ. ಪಕ್ಷದ ಮುಖಂಡರು ತಮ್ಮ ಆತ್ಮೀಯರು ಮತ್ತು ಕುಟುಂಬದ ಸಂಬಂಧಿಕರಿಗೆ ಟಿಕೆಟ್ ನೀಡುವಂತಿಲ್ಲ. ಒಂದು ವೇಳೆ ಟಿಕೆಟ್ ನೀಡುವುದಿದ್ದರೂ ಅವರು ಐದು ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದಿರಬೇಕು. ಈ ನಿರ್ಧಾರಕ್ಕೆ ಸಮಿತಿ ಸದಸ್ಯರಲ್ಲೂ ಒಮ್ಮತವಿದೆ ಎಂದು ಹೇಳಿದ್ರು.

ಪಕ್ಷದಲ್ಲಿ ಐದು ವರ್ಷಕ್ಕಿಂತ ಹೆಚ್ಚುಕಾಲ ನಿರಂತರವಾಗಿ ಹುದ್ದೆಯನ್ನು ಹೊಂದಿರುವ ಯಾವುದೇ ವ್ಯಕ್ತಿ ಆ ಹುದ್ದೆಯಿಂದ ಕೆಳಗಿಳಿಯಬೇಕು. ಒಂದು ವೇಳೆ ಆ ಹುದ್ದೆಗೆ ಆ ವ್ಯಕ್ತಿ ಮರಳಿ ಬರಬೇಕು ಎಂದರೆ ಮೂರು ವರ್ಷಗಳ ಬಳಿಕವೇ ಬರಬೇಕು. ಹೀಗೆ, ಹಲವು ಬದಲಾವಣೆಗಳ ಮೂಲಕ ಮುಂಬರುವ ಚುನಾವಣೆಗೆ ತಯಾರಿ ನಡೆಸಿದೆ ಕಾಂಗ್ರೆಸ್‌.. ಜೊತೆಗೆ, ಬಿಜೆಪಿ ಅನುಸರಿಸುತ್ತಿರುವ ಕೆಲವು ಲೆಕ್ಕಾಚಾರಗಳನ್ನೇ ಕಾಂಗ್ರೆಸ್‌ ಕೂಡ ಅನುಸರಿಸಲು ಹೊರಟಂತಿದೆ.

RELATED ARTICLES

Related Articles

TRENDING ARTICLES