ಬೆಂಗಳೂರು: ನಮ್ಮ ಮೆಟ್ರೋ. ಇದು ಟ್ರಾಫಿಕ್ ದಟ್ಟಣೆಗೆ ಕಡಿವಾಣ ಹಾಕಲು ಬಂದ ಸಂಚಾರ ವ್ಯವಸ್ಥೆ. ಈಗಾಗಲೇ ನಗರದ ಒಳ ಹಾಗೂ ಹೊರವಲಯದಲ್ಲೂ ಮೆಟ್ರೋ ರೈಲು ಸಂಚಾರ ಮಾಡ್ತಾಯಿದ್ದು, ಸದ್ಯದಲ್ಲೆ ಹೊಸದಾಗಿ ಎರಡು ಮಾರ್ಗದಲ್ಲಿ ಹಳಿ ಮೇಲೆ ಮೆಟ್ರೋ ಓಡಿಸಲು BMRCL ಸಿದ್ದತೆ ನಡೆಸಿದೆ. 2022ರ ಡಿಸೆಂಬರ್ ಅಂತ್ಯದೊಳಗೆ ಬೈಯಪ್ಪನಹಳ್ಳಿ ಟು ವೈಟ್ ಫೀಲ್ಡ್ ಮಾರ್ಗ ಹಾಗೂ ಕೆಂಗೇರಿ ಹಾಗೂ ಚಲಘಟ್ಟ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭಿಸಲು ನಿಗಮ ಮುಂದಾಗಿದೆ.ನೂತನವಾಗಿ ಆರಂಭವಾಗ್ತಾಯಿರೋ ಮಾರ್ಗದಲ್ಲಿ ಟ್ರ್ಯಾಕ್ ವರ್ಕ್, ಸಿಗ್ನಲಿಂಗ್ ಸೇರಿ ಶೇ.99 ಪರ್ಸೆಂಟ್ ಕಾಮಗಾರಿ ಕಂಪ್ಲೀಟ್ ಆಗಿದೆ. ಐಟಿ ಬಿಟಿ ಕಂಪನಿಗಳನ್ನ ಹೊಂದಿರೋ ವೈಟ್ ಫೀಲ್ಡ್‌ಗೆ ಶೀಘ್ರವಾಗಿ ಮೆಟ್ರೋ ಸಂಚಾರ ಕಲ್ಪಿಸಲು ನಿಗಮ ಮುಂದಾಗಿದೆ.
1.8 ಕಿಲೋ ಮೀಟರ್ ಉದ್ದದ ಕೆಂಗೇರಿ- ಚಲಘಟ್ಟ ಮಾರ್ಗ ಸೆಪ್ಟೆಂಬರ್ ಅಂತ್ಯ ಅಥವಾ ಅಕ್ಟೋಬರ್ ನಲ್ಲಿ ಆರಂಭವಾಗುವ ಸಾಧ್ಯತೆ ಇದೆ.15 ಕಿಲೋ ಮೀಟರ್ ಉದ್ದದ ಭೈಯ್ಯಪ್ಪನಹಳ್ಳಿ – ವೈಟ್ ಫೀಲ್ಡ್ ಮೆಟ್ರೋ ಮಾರ್ಗ ಡಿಸೆಂಬರ್ ನಲ್ಲಿ ಆರಂಭವಾಗಲಿದೆ.ಬೈಯ್ಯಪ್ಪನಹಳ್ಳಿ – ವೈಟ್ ಫೀಲ್ಡ್ ಮಾರ್ಗ 14 ನಿಲ್ದಾಣಗಳನ್ನ ಹೊಂದಿದ್ದು, ಬೈಯ್ಯಪ್ಪನಹಳ್ಳಿ- ಬೆನ್ನಿಗಾನಹಳ್ಳಿ – ಕೆ.ಆರ್.ಪುರಂ – ಮಹದೇವಪುರ – ಗರುಡಾಚಾರ್ ಪಾಳ್ಯ – ಹೂಡಿ ಜಂಕ್ಷನ್ – ಸೀತಾರಾಂಪಾಳ್ಯ – ಕುಂದಲಹಳ್ಳಿ – ನಲ್ಲೂರುಹಳ್ಳಿ – ಸಾದರಮಂಗಳ – ಪಟ್ಟಂದೂರು ಅಗ್ರಹಾರ – ಕಾಡುಗೋಡಿ – ಚನ್ನಸಂದ್ರ – ವೈಟ್ ಫೀಲ್ಡ್ ನಿಲ್ದಾಣಗಳಿವೆ.
ಒಟ್ನಲ್ಲಿ ನಗರದಲ್ಲಿ ಸುರಂಗ ಮಾರ್ಗ ಹಾಗೂ ಎಲಿವೇಡೆಟ್ ಲೈನ್ ಗಳ ಕಾಮಗಾರಿ ವೇಗವಾಗಿ ಸಾಗ್ತಾಯಿದ್ದು , ಹೊಸ ಮಾರ್ಗಗಳು ಆರಂಭವಾದಂತೆಲ್ಲಾ ಟ್ರಾಫಿಕ್ ಕೊಂಚ ಕಡಿಮೆ ಆಗಿ ಸಂಚಾರ ಸುಗಮವಾಗಲಿದೆ.