Friday, March 29, 2024

ಪಂಜಾಬ್ ಗುಪ್ತಚರ ಕೇಂದ್ರ ಕಚೇರಿ ಮೇಲಿನ ಗ್ರೆನೇಡ್ ದಾಳಿ

ಪಂಜಾಬ್ ಗುಪ್ತಚರ ಕೇಂದ್ರ ಕಚೇರಿ ಮೇಲಿನ ಗ್ರೆನೇಡ್ ದಾಳಿ ಪ್ರಕರಣದ ತನಿಖೆ ಚುರುಕುಗೊಂಡಿದೆ. ಈ ದಾಳಿಯ ಕೆಲ ನಿಮಿಷಗಳೇ ಮೊದಲಿನ ಪಿಜ್ಜಾ ಡೆಲಿವರಿ ಶಂಕಿತರ ಮಹತ್ವದ ಸುಳಿವು ನೀಡಿದೆ. ಇದೀಗ ಈ ದಿಕ್ಕಿನಲ್ಲಿ ತನಿಖೆ ಸಾಗಿದೆ. ದಾಳಿಗೂ ಕೆಲ ನಿಮಿಷಗಳ ಮೊದಲು ಪೊಲೀಸ್ ಅಧಿಕಾರಿ ಆರ್ಡರ್ ಮಾಡಿದ ಪಿಜ್ಜಾ ತರಲು ಕಚೇರಿ ಹೊರಭಾಗಕ್ಕೆ ತೆರಳಿದ್ದಾರೆ. ಈ ವೇಳೆ ಕಚೇರಿ ಮುಂಭಾಗದ ಪಾರ್ಕಿಂಗ್ ಸ್ಥಳದಲ್ಲಿ ಮಾರುತಿ ಸ್ವಿಫ್ಟ್ ಕಾರು ಪಾರ್ಕ್ ಆಗಿತ್ತು. ಅನುಮಾನಸ್ವದ ಈ ಕಾರು ಇದೀಗ ಶಂಕಿತರ ಸುಳಿವು ನೀಡಿದೆ.

ಇನ್ನು, ಆರ್ಡರ್ ಮಾಡಿದ ಪಿಜ್ಜಾ ತರಲು ಹೊರಗೆ ಹೋದ ಕಾರಣ ಈ ಕಾರನ್ನು ಪೊಲೀಸ್ ಅಧಿಕಾರಿ ಗಮನಿಸಿದ್ದಾರೆ. ಆದರೆ ಪೊಲೀಸ್ ಕಚೇರಿ ಹೊರಭಾಗದಲ್ಲಿ ನಿಲ್ಲಿಸಿದ್ದ ಕಾರಣ ಕಾರಿನ ಕುರಿತು ಹೆಚ್ಚು ತಲೆಕೆಡೆಸಿಕೊಂಡಿರಲಿಲ್ಲ. ಪಿಜ್ಜಾ ಪಡೆದು ಕಚೇರಿಯೊಳಕ್ಕೆ ಹೋದ ಕೆಲ ಹೊತ್ತಲ್ಲೇ ಗ್ರೆನೇಡ್ ದಾಳಿ ನಡೆದಿದೆ. ತಕ್ಷಣವೇ ಅಧಿಕಾರಿಗಳು ಹೊರಗಡೆ ಓಡಿ ಬಂದಿದ್ದಾರೆ. ಈ ವೇಳೆ ಈ ಕಾರು ವೇಗವಾಗಿ ಮುಂದೆ ಸಾಗಿದೆ. ಪಿಜ್ಜಾ ಕಾರಣದಿಂದ ಕಾರನ್ನು ಪೊಲೀಸರು ಗಮನಿಸಿದ್ದಾರೆ. ಇದೀಗ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಲಾಗಿದೆ. ಕಾರಿನ ಮಾಹಿತಿ ಪಡೆದಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಪಂಜಾಬ್ ಪೊಲೀಸ್ ಕಟ್ಟಡದ ಮೇಲೆ ರಾಕೆಟ್ ಗ್ರೆನೇಡ್ ದಾಳಿ ಪಂಜಾಬ್​ನ ಮೊಹಾಲಿಯಲ್ಲಿರುವ ಪೊಲೀಸ್ ಗುಪ್ತಚರ ವಿಭಾಗದ ಕೇಂದ್ರ ಕಚೇರಿಯ ಮೇಲೆ ಸೋಮವಾರ ಗ್ರೆನೇಡ್ ದಾಳಿ ನಡೆಸಲಾಗಿದೆ. ಇದರಲ್ಲಿ ಭಯೋತ್ಪಾದನಾ ಸಂಘಟನೆಗಳ ಪಾತ್ರವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಕೆಟ್ ಲಾಂಚರ್ ಬಳಕೆ ಮಾಡಿ ಈ ಸ್ಫೋಟಕವನ್ನು ಉಡಾಯಿಸಲಾಗಿದೆ. ದಾಳಿಗೆ ಸಂಬಂಧಿಸಿದಂತೆ ಸಂಪೂರ್ಣ ವಿವರ ಸಲ್ಲಿಸುವಂತೆ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಈ ಸ್ಫೋಟಕ ಮತ್ತು ಏ.24ರಂದು ಬುರೈಲ್ ಜೈಲಿನಲ್ಲಿ ವಶಪಡಿಸಿಕೊಂಡ ಸ್ಫೋಟಕಕ್ಕೆ ಸಾಕಷ್ಟುಸಾಮ್ಯತೆ ಇದೆ.

RELATED ARTICLES

Related Articles

TRENDING ARTICLES