ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದಲ್ಲಿ ಸಿಪಿಐ ಆನಂದ ಮೇತ್ರಿ , ಡಿವೈಎಸ್ಪಿ ಮಲ್ಲಿಕಾರ್ಜುನ್ ಸಾಲಿ ಆರೋಪಿಗಳನ್ನು ಬಂಧಿಸಿದ್ದಾರೆ.
ಇಷ್ಟು ದಿನ ಇಬ್ಬರು ಅಧಿಕಾರಿಗಳು ಆರೋಪಿಗಳಗೆ ಜೈಲಿಗೆ ಕಳುಹಿಸಿ ಖೈದಿ ನಂಬರ್ ಕೊಡಸ್ತಿದ್ದರು. ಆದ್ರೆ ಇದೀಗ ಅಕ್ರಮದಲ್ಲಿ ಭಾಗಿಯಾಗಿ ತಾವೆ ಖೈದಿ ನಂಬರ್ ಪಡೆದಿದ್ದಾರೆ.
ಇನ್ನು, ಬೆರಳಚ್ಚು ವಿಭಾಗದ ಇನ್ಸಪೇಕ್ಟರ್ ಆನಂದ್ ಮೇತ್ರಿ ವಿಚಾರಣಾಧಿನ ಖೈದಿ ನಂಬರ್ 18196 ಆಗಿದ್ದು, ರಾಯಚೂರು ಜಿಲ್ಲೆಯ ಲಿಂಗಸೂಗುರು ಡಿವೈಎಸ್ಪಿ ಮಲ್ಲಿಕಾರ್ಜುನ್ ಸಾಲಿ ವಿಚಾರಣಾಧಿನ ಖೈದಿ ನಂಬರ್ 18197 ಆಗಿದೆ. ಸಿಪಿಐ ಆನಂದ್ ಮೇತ್ರಿ ಅಕ್ರಮ ನೇಮಕಾತಿಯಲ್ಲಿ ನಾಲ್ಕು ಅಭ್ಯರ್ಥಿಗಳನ್ನ ಆರ್ ಡಿ ಪಾಟೀಲ್ ಗೆ ನೀಡಿದ್ದ. ಅಲ್ಲದೆ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪರೀಕ್ಷೆಯಲ್ಲಿ ಮೇಲ್ವಿಚಾರಕರಾಗಿದ್ದ. ಲಿಂಗಸೂಗರು ಡಿವೈಎಸ್ಪಿ ಮಲ್ಲಿಕಾರ್ಜುನ್ ಸಾಲಿ ಅಕ್ರಮದ ಮಾಹಿತಿ ಪಡೆದು ಬ್ಲ್ಯಾಕ್ ಮೇಲ್ ಮಾಡಿದ್ದ. ಬ್ಲ್ಯಾಕ್ ಮೇಲ್ ಮಾಡಿ ಹತ್ತು ಲಕ್ಷ ಹಣ ಪಡೆದು ಅರೆಸ್ಟ್ ಆದ ಡಿವೈಎಸ್ಪಿ ಇಬ್ಬರು ಬಂಧಿತ ಪೊಲೀಸ್ ಅಧಿಕಾರಗಳಿಗೆ ಹಗಲು ರಾತ್ರಿ ವಿಚಾರಣೆ ನಡೆಸುತ್ತಿದ್ದಾರೆ.