ಹುಬ್ಬಳ್ಳಿ : ಬಿಜೆಪಿಗೆ 2500 ಕೋಟಿ ರೂ ರೆಡಿ ಮಾಡಿಕೊಳ್ಳಿ ಅಂತ ಹೇಳಿ, ಇಡೀ ಭಾರತ ದೇಶವೇ ತಲ್ಲಣವಾಗುವ ಸುದ್ದಿ ನೀವು ಕೊಟ್ಟಿದ್ದೀರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ 2500 ಕೋಟಿ ರೂ ರೆಡಿ ಮಾಡಿಕೊಳ್ಳಿ ಅಂತ ಹೇಳಿ, ಇಡೀ ಭಾರತ ದೇಶವೇ ತಲ್ಲಣವಾಗುವ ಸುದ್ದಿ ಕೊಟ್ಟಿದ್ದೀರಿ. ಹಿರಿಯ ರಾಜಕಾರಣಿ, ಕೇಂದ್ರದ ಮಾಜಿ ಸಚಿವ, ಹಾಲಿ ಶಾಸಕ ರಾಜ್ಯದ ಜನರಿಗೆ ತಿಳಿಸಿದ್ದಾರೆ. ಮಂತ್ರಿ ಸ್ಥಾನಕ್ಕೆ 50 ರಿಂದ 100 ಕೋಟಿ ರೆಡಿ ಮಾಡಿಕೊಂಡು ಬನ್ನಿ ಅಂತ ತಿಳಿಸಿದ್ದಾರೆ. ಎಸಿಬಿ ಅಷ್ಟೇ ಅಲ್ಲ, ರಾಜ್ಯದ ಸಿಎಂಗೆ ರಾಜಕೀಯ ಬದ್ಧತೆ ಇದ್ದರೆ ಪಕ್ಷದ ಗೌರವ ಉಳಿಸುಕೊಳ್ಳುವುದು ಬಿಟ್ಟಿದ್ದು ಅವರಿಗೆ ಬಿಟ್ಟ ವಿಚಾರ ರಾಜ್ಯದ ಹಗರಣಗಳನ್ನ ಎಲ್ಲರೂ ಗಮನಿಸಿದ್ದೀರಿ. ಈ ಸರ್ಕಾರ ಹುಟ್ಟಿದ್ದೇ ಶಾಸಕರ ಖರೀದಿ ಮಾಡೋಕೆ ಬೇರೆ ಬೇರೆ ಶಾಸಕರಿಗೂ ಬಿಜೆಪಿ ಆಮೀಷ ಒಡ್ಡಿದ್ದನ್ನ ನಾವು ನೋಡಿದ್ದೇವೆ ಎಂದರು.
ಇಂದು ರಾಜ್ಯದ ಜನತೆ ಪ್ರತಿಯೊಂದರಲ್ಲೂ ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಎಲ್ಲಾ ನೇಮಕಾತಿಗಳಲ್ಲೂ ಸಹ ಒಂದೊಂದು ರೇಟ್ ಫಿಕ್ಸ್ ಆಗಿದೆ. ಹೋಟೆಲ್ನಲ್ಲಿ ತಿಂಡಿ ಬೆಲೆಗೆ ರೇಟ್ ಹಾಕಿದಂತೆ ಇವರು ರೇಟ್ ಹಾಕಿದ್ದಾರೆ. 2500 ಕೋಟಿ ನಿಮ್ಮ ಸ್ಥಾನಕ್ಕೆ ತಗೊಂಡು ಬನ್ನಿ ಅಂತ ಸಿಎಂ ನೇ ಕರೆದ್ರು. ಆದ್ರೆ ಇನ್ನು ಯಾಕೆ ತನಿಖಾಧಿಕಾರಿ ಸುಮ್ಮನೆ ಇದ್ದಾರೆ. ಸಿಎಂ ತಮ್ಮನ್ನೇ ರಕ್ಷಣೆ ಮಾಡುತ್ತಿದ್ದಾರೋ, ಪಾರ್ಟಿ ರಕ್ಷಣೆಗೆ ನಿಂತಿದ್ದಾರೋ ಹೊತ್ತಿಲ್ಲ. ಕೇಂದ್ರ ಸರ್ಕಾರದ ಏಜೆನ್ಸಿಯವರು ತನಿಖೆ ಮಾಡಬೇಕು. ಯತ್ನಾಳ್ರನ್ನ ಕೂಡಲೇ ವಶಕ್ಕೆ ಪಡೆಯಬೇಕು ಅವರನ್ನ ಸಾಕ್ಷಿಯಾಗಿಸಿಕೊಂಡು ತನಿಖೆ ಮಾಡಬೇಕು ಎಂದರು.
ಅದುವಲ್ಲದೇ, ನಳಿನ್ ಕುಮಾರ್ ಕಟೀಲ್ ಸಹ ಇದರಲ್ಲಿ ಭಾಗಿಯಾಗಿದ್ದಾರೆ. ಕಾಂಗ್ರೆಸ್ನವರೇ ಮಾಡಿರಲಿ ತನಿಖೆ ಆಗಲಿ ನಳಿನ್ ಕುಮಾರ್ ಕಟೀಲ್ ಸಹ ಇದನ್ನ ಮುಚ್ಚೋಕೆ ಪ್ರಯತ್ನ ಮಾಡುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಠಿ ಮಾಡಿದ್ರೆ ಅವರಿಗೆ ನೋಟಿಸ್ ಕೊಟ್ಟಿದ್ದೀರಿ. ಯತ್ನಾಳ್ಗೆ ಯಾಕೆ ಕೊಟ್ಟಿಲ್ಲ ? ಮೆಂಟಲ್ ನಾ ಅವರು ? ಮಿಸ್ಟರ್ ಬಿಜೆಪಿ ಪ್ರೆಸಿಡೆಂಟ್, ಯಾಕೆ ಅಕ್ರಮವನ್ನ ಬಯಲಿಗೆಳೆಯುತ್ತಿಲ್ಲ ? ಯಾವ ಮಂತ್ರಿ ಇದರಲ್ಲಿ ಭಾಗಿಯಾಗಿದ್ರೂ ಅದರ ತನಿಖೆ ಆಗಬೇಕು. ಇದರಲ್ಲಿ ಯಾರು ಭಾಗಿಯಾಗಿದ್ದಾರೆ ಅವರ ವಿರುದ್ಧ ಕ್ರಮ ಆಗಲಿ ಎಂದರು.
ಇನ್ನು, ನಾವು ಸಿಎಂ ರಾಜೀನಾಮೆಗೆ ಒತ್ತಾಯಿಸಲ್ಲ. ನಾನು ಕೇಳಿದ್ರೆ ರಾಜೀನಾಮೆ ಕೊಡ್ತಾರಾ ಅವರು..? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನನ್ನ 40 ವರ್ಷದ ರಾಜಕಾರಣದಲ್ಲಿ ಈ ರೀತಿ ನೋಡಿರಲಿಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ಡಿಕೆಶಿ ಕಿಡಿಕಾಡಿದ್ದಾರೆ.