ಬೆಂಗಳೂರು : ಯತ್ನಾಳ್ ಹೇಳಿಕೆ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಕೋವಿಡ್ನಿಂದ ಮೃತರಾದವರ ಲೆಕ್ಕವನ್ನು ಮುಚ್ಚಿಟ್ಟಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲಿನಿಂದಲೂ ನಾವು ಸಿದ್ದರಾಮಯ್ಯ ಎಲ್ಲರೂ ಹೆಚ್ಚು ಸಾವು ಆಗುತ್ತಿದೆ ಎಂದು ಹೇಳುತ್ತಿದ್ದೇವೆ ಹಾಗೂ 4.5 ಲಕ್ಷ ಜನ ಸತ್ತಿದ್ದಾರೆ ಎಂದು ಮಾಹಿತಿ ಕೊಟ್ಟಿದ್ದೇವು. ಅಲ್ಲದೇ ನಮ್ಮ ತಾಲೂಕಿನಲ್ಲಿ 500 ಜನ ಸತ್ತಿದ್ದರು. ಆದರೆ, ಸರ್ಕಾರ 100 ಅಂತ ಹೇಳಿತ್ತು. ಈವರೆಗೂ ಸತ್ತವರಿಗೆ ಪರಿಹಾರ ಕೊಟ್ಟಿಲ್ಲ ಎಂದು ಕಿಡಿಕಾರಿದರು.
ಇನ್ನು, WHO 47 ಲಕ್ಷ ಜನ ಸತ್ತಿದ್ದಾರೆ ಅಂತ ಹೇಳಿದೆ, ಇದು ಬಿಜೆಪಿ ಸರ್ಕಾರ ದೇಶಕ್ಕೆ ಕೊಟ್ಟ ಗಿಫ್ಟ್ ಆಗಿದೆ. ಸುಪ್ರೀಂಕೋರ್ಟ್ ಕೂಡಾ ಪರಿಹಾರ ಕೊಡಬೇಕು. ಆರೋಗ್ಯ ಸಚಿವರು ಇದನ್ನ ಮುಚ್ಚಿ ಹಾಕ್ತಿದ್ದಾರೆ, ಸಿಎಂ ಕೂಡಲೇ ಮತ್ತೆ ಸಭೆ ಮಾಡಿ ಸತ್ತ ಪ್ರತಿ ಕುಟುಂಬಕ್ಕೆ 5 ಲಕ್ಷ ಪರಿಹಾರ ಕೊಡಬೇಕು. ಲಸಿಕೆ ಕೊಟ್ಟಾಗ ಸರ್ಟಿಫಿಕೇಟ್ ಮೇಲೆ ಮೋದಿ ಪೋಟೋ ಹಾಕಿದ್ರು, ಈಗ ಸತ್ತವರಿಗೂ ನಿಮ್ಮ ಪೋಟೋ ಹಾಕಿ ಸರ್ಟಿಫಿಕೇಟ್ ಕೊಡಿ ಎಂದು ಗುಡುಗಿದರು.
ಅಷ್ಟೇ ಅಲ್ಲದೇ ಮುಂದಿನ ದಿನಗಳಲ್ಲಿ ಅಂಕಿ ಅಂಶ ಮುಚ್ಚಿಟ್ಟ ಆಡಳಿತ ಸರ್ಕಾರದ ವಿರುದ್ಧ ಧ್ವನಿ ಎತ್ತುತ್ತೇವೆ. ಮೊದಲು ಸತ್ತವರಿಗೆ ಸರಿಯಾಗಿ ಸರ್ಕಾರ ಪರಿಹಾರ ಕೊಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಡಿ ಕೆ ಶಿವಕುಮಾರ್ ಒತ್ತಾಯಿಸಿದರು.